Stars Fashion 2025: ಜೆನ್ ಜಿ ಹುಡುಗಿಯರು ಅಪ್ಪಿಕೊಂಡ ಹಾಲ್ಟರ್ ನೆಕ್ಲೈನ್
Halter Neckline Designerwears: ಸೆಲೆಬ್ರಿಟಿಗಳ ಫೆವರೇಟ್ ಲಿಸ್ಟ್‌ನಲ್ಲಿರುವ ಹಾಲ್ಟರ್ ನೆಕ್ಲೈನ್ ಡಿಸೈನರ್‌ವೇರ್ಸ್, ಟಾಪ್ ಹಾಗೂ ಬ್ಲೌಸ್‌ಗಳನ್ನು ಜೆನ್ ಜಿ ಹುಡುಗಿಯರು ಅಪ್ಪಿಕೊಳ್ಳುತ್ತಿದ್ದಾರೆ. ಗ್ಲಾಮರಸ್ ಲುಕ್ ನೀಡುವ ಈ ನೆಕ್ಲೈನ್ ಬಗ್ಗೆ ಫ್ಯಾಷನಿಸ್ಟಾಗಳು ಏನು ಹೇಳುತ್ತಾರೆ? ಇಲ್ಲಿದೆ ಡಿಟೇಲ್ಸ್.
ಡಿಸೈನರ್ ಹಾಲ್ಟರ್ ನೆಕ್ಲೈನ್ ಬ್ಲೌಸ್‌ನ ಟ್ರೆಂಡ್
ಸೆಲೆಬ್ರೆಟಿಯಂತೆ ಕಾಣಿಸಲು ಬಯಸುವ ಹುಡುಗಿಯರು ಗ್ಲಾಮರಸ್ ಹಾಲ್ಟರ್ ನೆಕ್ಲೈನ್ ಬ್ಲೌಸ್ ಅಥವಾ ಟಾಪ್‌ಗಳ ಮೋಹ ಪಾಶಕ್ಕೆ ಒಳಗಾಗಿದ್ದಾರೆ. ಇದಕ್ಕೆ ಪೂರಕ ಎಂಬಂತೆ ನಟಿ ಮಾಳವಿಕಾ ಮೋಹನ್ ಧರಿಸಿದ್ದ ಡಿಸೈನರ್ ಹಾಲ್ಟರ್ ನೆಕ್ಲೈನ್ ಬ್ಲೌಸ್ ಸಖತ್ ಟ್ರೆಂಡಿಯಾಗಿದೆ.
ವೈವಿಧ್ಯ ಡಿಸೈನ್ಸ್
ಹಾಲ್ಟರ್ ನೆಕ್ ಪಾಶ್ಚಿಮಾತ್ಯ ವಿನ್ಯಾಸದ ಉಡುಪುಗಳಿಗೆ ಹೆಚ್ಚು ಮ್ಯಾಚ್ ಆಗುವುದರಿಂದ ಇವನ್ನು ವೆಸ್ಟರ್ನ್ ಶೈಲಿಯ ಗೌನ್, ಫ್ರಾಕ್ ಹಾಗೂ ಶಾರ್ಟ್ ಟಾಪ್‌ಗಳಲ್ಲಿ ಹೆಚ್ಚು ಕಾಣಬಹುದು ಎನ್ನುವ ಡಿಸೈನರ್ ರೀಟಾ ಪ್ರಕಾರ, ಹಾಲ್ಟರ್ ನೆಕ್‌ನಲ್ಲೆ ಸಾಕಷ್ಟು ವಿಧಗಳಿವೆ. ಸಿನಿಮಾ ತಾರೆಯರ ವಾರ್ಡ್‌ರೋಬ್ ಅನ್ನು ಈಗಾಗಲೇ ಹಾಲ್ಟರ್ ನೆಕ್ ಡ್ರೆಸ್‌ಗಳು ಆಕ್ರಮಿಸಿಕೊಂಡಿವೆ. ಬಾಡಿ ಹಗ್ಗಿಂಗ್ ಗೌನ್‌ನಿಂದಿಡಿದು ಲಾಂಗ್ ಮ್ಯಾಕ್ಸಿ ಹಾಗೂ ಫ್ರಾಕ್‌ಗಳಲ್ಲೂ ಇವು ಕಂಡು ಬರತೊಡಗಿವೆ.
ಜೆನ್ ಜಿ ಹುಡುಗಿಯರ ಲವ್
ಸದ್ಯಕ್ಕೆ ಸಿನಿಮಾ ತಾರೆಯರ ಸ್ವತ್ತಾದ ಹಾಲ್ಟರ್ ನೆಕ್ ಇದೀಗ ಇತರ ಉಡುಪುಗಳಲ್ಲೂ ಕಾಣಿಸಿಕೊಳ್ಳುತ್ತಿದೆ. ಕೊಂಚ ಹೊಸ ರೂಪ ಪಡೆದು, ಟ್ವಿಸ್ಟ್ ಡಿಸೈನ್‌ನಲ್ಲಿ ಕಂಗೊಳಿಸುತ್ತಿದೆ ಎನ್ನುವ ಮಾಡೆಲ್ ಡೀನಾ ಪ್ರಕಾರ, ಈ ಜನರೇಷನ್‌ನ ಹುಡುಗಿಯರು ಹೆಚ್ಚು ಹಾಲ್ಟೆರ್ ನೆಕ್ ಡ್ರೆಸ್‌ಗಳ ಮೊರೆ ಹೋಗುತ್ತಿದ್ದಾರೆ.
ಆಲ್ಟರ್ ಆಗದಿರಲಿ ಹಾಲ್ಟರ್
ಹಾಲ್ಟರ್ ನೆಕ್‌ನ ಡಿಸೈನರ್‌ವೇರ್ ಮೊದಲ ಸ್ಟಿಚ್ಚಿಂಗ್‌ನಲ್ಲೆ ಪರ್ಫೆಕ್ಟ್ ಆಗಬೇಕಾದದ್ದು ಅಗತ್ಯ. ಇಲ್ಲವಾದಲ್ಲಿಅದು ಪ್ಯಾಚ್ ವರ್ಕ್‌ನಂತೆ ಕಾಣಿಸಬಹುದು ಎನ್ನುತ್ತಾರೆ ಡಿಸೈನರ್ ರೇಷ್ಮಾ. ಹಾಲ್ಟರ್ ನೆಕ್ ಡಿಸೈನರ್‌ವೇರ್‌ಗೆ ಹೈ ಪೋನಿಟೇಲ್ ಇಲ್ಲವೇ ಫ್ರೀ ಬಿಗ್ ಫ್ರಿಂಜ್, ಬಿಗ್ ಬ್ಯಾಂಗ್ ಹೇರ್‌ಸ್ಟೈಲ್ ಸೂಟ್ ಆಗುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಹಾಲ್ಟರ್ ನೆಕ್ಲೈನ್ ಪ್ರಿಯರಿಗೆ ಸಿಂಪಲ್ ಟಿಪ್ಸ್
- ನೆಕ್ಲೈನ್ ಉದ್ದವಾಗಿದ್ದರೇ ಸುಂದರವಾಗಿ ಕಾಣುತ್ತದೆ.
- ನೆಕ್ಲೈನ್ ತೀರಾ ಉಸಿರುಗಟ್ಟಿಸುವಂತಿರಬಾರದು.
- ಧರಿಸುವ ಸಂದರ್ಭದಲ್ಲಿ ಎಕ್ಸ್‌ಪೋಸ್ ಆಗದಂತೆ ಗಮನಿಸಿ.
- ಫಿಟ್ ಹಾಲ್ಟರ್ ನೆಕ್ ಡಿಸೈನರ್‌ವೇರ್ ಆಯ್ಕೆ ಮಾಡಿಕೊಳ್ಳಿ.
- ಕೈಗಳು ಉದ್ದವಾಗಿರುವಂತೆ ಇವು ಬಿಂಬಿಸುತ್ತವೆ.
- ಬಾಡಿ ಹಗ್ಗಿಂಗ್ ಗೌನ್‌ಗಳಿಗೆ ಬೆಸ್ಟ್ ನೆಕ್ಲೈನ್.
- ಟೀನೇಜ್ ಹುಡುಗಿಯರಿಗೆ ಶಾರ್ಟ್ ಶೈಲಿಯವು ಸೂಟ್ ಆಗುತ್ತವೆ.
- ಕತ್ತಿಗೆ ಯಾವುದೇ ಕಾರಣಕ್ಕೂ ಆಕ್ಸೆಸರೀಸ್ ಧರಿಸುವುದು ಬೇಡ.
- ಪರ್ಸನಾಲಿಟಿಗೆ ತಕ್ಕಂತೆ ವಿನ್ಯಾಸವಿದ್ದರೆ ಉತ್ತಮ.