Winter Fashion 2025: ಟಾಮ್ ಬಾಯ್ ಹುಡುಗಿಯರಿಗಾಗಿ ಬಂತು ನಯಾ ವಿನ್ಯಾಸದ ಬೂಟ್ಸ್
Winter Fashion: ಟಾಮ್ ಬಾಯ್ ಇಮೇಜ್ ಬಯಸುವವರ ಪಾದಗಳನ್ನು ಅಲಂಕರಿಸಲು ಇದೀಗ ಈ ವಿಂಟರ್ ಸೀಸನ್ನಲ್ಲಿ ನಯಾ ಡಿಸೈನ್ನ ಬೂಟ್ಸ್ ಕಾಲಿಟ್ಟಿವೆ. ಅವು ಯಾವುವು? ಯಾವ್ಯಾವ ಬಗೆಯವು ಚಾಲ್ತಿಯಲ್ಲಿವೆ? ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.
ಹೊಸ ವಿನ್ಯಾಸದ ಬೂಟ್ಸ್, ಚಿತ್ರಕೃಪೆ: ಪಿಕ್ಸೆಲ್ -
ಟಾಮ್ ಬಾಯ್ ಹುಡುಗಿಯರ ಗ್ಲಾಮರಸ್ ಲುಕ್ ಹೆಚ್ಚಿಸುವ ನಯಾ ಡಿಸೈನ್ನ ಬೂಟ್ಸ್ ಈ ಸೀಸನ್ಗೆ ಎಂಟ್ರಿ ನೀಡಿವೆ.
ಯಾವ್ಯಾವ ಬಗೆಯವು ಚಾಲ್ತಿಯಲ್ಲಿವೆ?
ಧರಿಸುವ ಪ್ಯಾಂಟ್ಗೆ ಸೂಟ್ ಆಗುವ ನೀ ಲೆಂತ್ ಬೂಟ್ಸ್, ಸ್ಕರ್ಟ್ಸ್ಗೆ ಹೊಂದುವ ವೆಲ್ಟೆಟ್ ಇಲ್ಲವೇ ಶಾರ್ಟ್ ಲೆದರ್ ಬೂಟ್ಸ್, ಟೀನೇಜ್ ಹುಡುಗಿಯರಿಗೆ ಆ್ಯಂಕಲ್ ಲೆಂತ್ ಬೂಟ್ಸ್, ಝಿಪ್ ಬೂಟ್ಸ್ ಹೀಗೆ ನಾನಾ ವೆರೈಟಿಗಳ ಫ್ಯಾಷನೆಬಲ್ ಬೂಟ್ಸ್ ಈ ಸೀಸನ್ನಲ್ಲಿ ಹೊಸ ವಿನ್ಯಾಸದಲ್ಲಿ ಬಂದಿವೆ ಎನ್ನುತ್ತಾರೆ ಮಾರಾಟಗಾರರು. ಅವರ ಪ್ರಕಾರ, ಈ ಬಾರಿ ಡಾರ್ಕ್ ಬ್ಲಾಕ್, ಲೆದರ್ ಬ್ರೌನ್, ಬೇಝ್, ವೈನ್ ಕಲರ್, ಡಾರ್ಕ್ ಪರ್ಪಲ್, ಬೆರ್ರಿ ರೆಡ್ ಶೇಡ್ನವು ಬೂಟ್ಸ್ನ ರಂಗೇರಿಸಿವೆ.
ತಾರೆಯರ ಚಾಯ್ಸ್
ಟಾಮ್ ಬಾಯ್ ಇಮೇಜ್, ಬಬ್ಲಿ ಲುಕ್ ಹಾಗೂ ಹಾಟ್ ಲುಕ್ನಲ್ಲೆ ಕಾಣಿಸಲು ಬಯಸುವ ಬಾಲಿವುಡ್ನ ತಾರೆಯರು ಈ ಬೂಟ್ಸ್ ಫ್ರೇಮಿಗಳು. ಧರಿಸುವ ಶಾರ್ಟ್ ಫ್ರಾಕ್, ಮಿಡಿ, ಮಿನಿಗಳೊಂದಿಗೆ ಮ್ಯಾಚ್ ಮಾಡುತ್ತಾರೆ. ಹಾಗಾಗಿ ಇವು ಇವರನ್ನು ಫಾಲೋ ಮಾಡುವ ಯುವತಿಯರನ್ನೂ ಸೆಳೆದಿವೆ ಎನ್ನುತ್ತಾರೆ ಸೆಲೆಬ್ರಿಟಿ ಡಿಸೈನರ್ ದೀಕ್ಷಾ.
ವೈಲ್ಡ್ ಲುಕ್ಗೆ ಝಿಪ್ ಬೂಟ್ಸ್
ಸೆಲೆಬ್ರೆಟಿಗಳ ಚಾಯ್ಸ್ನಲ್ಲಿರುವ ನೋಡಲು ಆಕರ್ಷಕವಾಗಿರುವ ವೈಲ್ಡ್ ಲುಕ್ ನೀಡುವ ಝಿಪ್ ಬೂಟ್ಸ್ ಇಂದು ಟ್ರೆಂಡಿಯಾಗಿವೆ. ಇವು ದುಬಾರಿ ಕೂಡ. ಶಾರ್ಟ್ಸ್ ಡ್ರೆಸ್ಗಳಿಗೆ ಹಾಗೂ ಪ್ಯಾಂಟ್ಗಳಿಗೆ ಇವು ಗ್ಲಾಮರಸ್ ಲುಕ್ ನೀಡುತ್ತವೆ.
ಆಕರ್ಷಕವಾಗಿ ಕಾಣಿಸುವ ವೆಲ್ವೆಟ್ ಬೂಟ್ಸ್
ಈ ಸೀಸನ್ನಲ್ಲಿ ಚಾಲ್ತಿಯಲ್ಲಿರುವ ವೆಲ್ವೆಟ್ ಬೂಟ್ಸ್ನಲ್ಲಿ ಇಂದು ನಾನಾ ಕಲರ್ಗಳು ಬಂದಿವೆ. ಅವಗಳಲ್ಲಿ ನಿಯಾನ್ ಕಲರ್ನವು ಫಂಕಿ ಹುಡುಗಿಯರನ್ನು ಸೆಳೆದಿವೆ. ಅಷ್ಟೇಕೆ! ಉಡುಪಿಗೆ ಮ್ಯಾಚ್ ಆಗುವಂತಹ ಡಿಸೈನ್ಗಳು ಹುಡುಗಿಯರ ಪಾದಗಳನ್ನು ಅಲಂಕರಿಸಿವೆ.
ವಿಂಟೇಜ್ ಲುಕ್ ನೀಡುವ ಲೆದರ್ ಬೂಟ್ಸ್
ವಿಂಟೇಜ್ ಲುಕ್ ಬಯಸುವ ಯುವತಿಯರು ಇಂದಿಗೂ ಲೆದರ್ ಬೂಟ್ಸ್ ಧರಿಸುತ್ತಿದ್ದಾರೆ. ನೋಡಲು ಮನಮೋಹಕವಾಗಿ ಕಾಣಿಸುವ ಇವುಗಳಲ್ಲಿ ಆ್ಯಂಕಲ್ ಲೆಂತ್ ಹಾಗೂ ನೀ ಲೆಂತ್ನವು ಚಾಲ್ತಿಯಲ್ಲಿವೆ ಎನ್ನುತ್ತಾರೆ ಎಕ್ಸ್ಪರ್ಟ್ಸ್.
ಬೂಟ್ಸ್ ಪ್ರಿಯರಿಗೆ ಒಂದಿಷ್ಟು ಟಿಪ್ಸ್
- ಕಾಲಿನ ಆಕಾರಕ್ಕೆ ತಕ್ಕಂತೆ ಬೂಟ್ಸ್ ಆಯ್ಕೆ ಮಾಡಿ.
- ಉದ್ದ ಕಾಲಿರುವವರು ಲಾಂಗ್ ಲೆಂತ್ನದ್ದು, ಗಿಡ್ಡ ಕಾಲಿನವರು ಆ್ಯಂಕಲ್ ಲೆಂತ್ನ ಬೂಟ್ಸ್ ಆಯ್ಕೆ ಮಾಡುವುದು ಉತ್ತಮ.
- ಲೇಸ್ ಇಲ್ಲದ ಬೂಟ್ಸ್ ಆದಲ್ಲಿ ಫಿಟ್ ಆಗಿರಬೇಕು.