Wednesday, 1st February 2023

ಬಿಎಂಟಿಸಿ ಬಸ್’ಗೆ ಬೈಕ್‌ ಡಿಕ್ಕಿ: ಪೊಲೀಸ್​ ಮುಖ್ಯಪೇದೆ ಸಾವು

ಬೆಂಗಳೂರು:  ಕರ್ತವ್ಯ ಮುಗಿಸಿಕೊಂಡು ಮನೆಗೆ ಹೊರಟಿದ್ದ ಪೊಲೀಸ್​ ಮುಖ್ಯಪೇದೆ ಅವರ ಬೈಕ್‌ ಗೆ ಮಾರ್ಗ ಮಧ್ಯೆ ಬಿಎಂಟಿಸಿ ಬಸ್ ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯ ಹೆಡ್​ಕಾನ್​ಸ್ಟೇಬಲ್ ರಾಮಾಚಾರಿ(47) ಮೃತ ದುರ್ದೈವಿ. ರಾತ್ರಿ ಪಾಳಿ ಕೆಲಸ ಮುಗಿಸಿ ಮನೆಗೆ ಬೈಕ್​ನಲ್ಲಿ ತೆರಳುತ್ತಿದ್ದರು. ಮಾಗಡಿ ರಸ್ತೆಯಲ್ಲಿ ಬಂದ ಬಿಎಂಟಿಸಿ ಬಸ್​ ಪೇದೆ ಸಂಚರಿಸುತ್ತಿದ್ದ ಬೈಕ್​ಗೆ ಡಿಕ್ಕಿ ಹೊಡೆ ದಿದ್ದು, ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಪೇದೆ ಕೊನೆಯುಸಿರೆಳೆದರು.

ಸ್ಥಳಕ್ಕೆ ಬಂದ ಮಾಗಡಿ ರಸ್ತೆ ಸಂಚಾರಿ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ ದರು. ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!