ಮಾನ್ವಿ: ಪಟ್ಟಣದ ಐತಿಹಾಸಿಕ ಬೆಟ್ಟದ ಶ್ರೀ ಭ್ರಮರಾಂಬ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಬನದ ಹಣ್ಣಿÂಮೆ ಅಂಗವಾಗಿ ನಡೆದ ಜಾತ್ರಾ ಮಹೋತ್ವದ ಅಂಗವಾಗಿ ಬೆಳಿಗ್ಗೆ ಶ್ರೀ ಮಲ್ಲಿಕಾರ್ಜುನ ಸ್ವಾಮಿಗೆ ಹಾಗೂ ಶ್ರೀ ಭ್ರಮರಾಂಬ ದೇವಿಗೆ ಮಹಾರುದ್ರಾಭಿಷೇಕ ಮತ್ತು ವಿಶೇಷವಾದ ಅಲಂಕಾರ ನಡೆಸಲಾಯಿತು.
ಬನದ ಹುಣ್ಣಿಮೆ ಅಂಗವಾಗಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಗೆ ಅಕ್ಕಿಯ ಕಿರೀಟವನ್ನು ಧಾರಣೆ ಮಾಡಲಾಯಿತು. ಕೋವಿಡ್ ಹಿನ್ನಲೆಯಲ್ಲಿ ರಥೋತ್ಸವಕ್ಕೆ ತಾಲ್ಲೂಕು ಆಡಳಿತ ಅನುಮತಿ ನಿರಾಕರಿಸಿದರಿಂದ ಸಾಂಕೇತಿಕವಾಗಿ ರಥಕ್ಕೆ ಪೂಜೆ ಸಲ್ಲಿಸಲಾಯಿತು.
ಕಲ್ಮಠದ ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು,ಶಂಕರಯ್ಯಸ್ವಾಮಿ ಸುವರ್ಣಗಿರಿ ಮಠ,ಅಮರಯ್ಯ ಸ್ವಾಮಿ,ಸಿದ್ದಲಿಂಗಪ್ಪ, ಹಾಗೂ ದೇವಸ್ಥಾನದ ಅರ್ಚಕರಾದ ಮಲ್ಲಿಕಾರ್ಜುನಸ್ವಾಮಿ, ಸೇರಿದಂತೆ ಸೇವಾ ಸಮಿತಿಯ ಸದಸ್ಯರು ಇದ್ದರು.