Tuesday, 27th July 2021

ನೀಲಿ ತಾರೆ ಡೇಲಿಯಾ ಸ್ಕೈ ಆತ್ಮಹತ್ಯೆ

ವಾಷಿಂಗ್ಟನ್: ಅಮೆರಿಕದ ಪ್ರಸಿದ್ಧ ಪೋರ್ನ್ (ನೀಲಿ) ತಾರೆ ಡೇಲಿಯಾ ಸ್ಕೈ(31ವರ್ಷ) ತಲೆಗೆ ಗುಂಡು ಹಾರಿಸಿಕೊಂಡು ಕಾರಿನೊಳಗೆ ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ.

ತೀವ್ರ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ನಟಿ ಡೇಲಿಯಾ ಮಾನಸಿಕ ಒತ್ತಡಕ್ಕೊಳಗಾಗಿ ಆತ್ಮಹತ್ಯೆಗೆ ಶರಣಾಗಿರುವುದಾಗಿ ತಿಳಿಸಿದೆ. ಲಾಸ್ ಏಂಜಲೀಸ್ ನ ಸ್ಯಾನ್ ಫರ್ನಾಂಡೋ ಕಣಿವೆ ಪ್ರದೇಶದ ಡೆವನ್ ಶೈರ್ ಪ್ರದೇಶದಲ್ಲಿನ ವಾಹನದಲ್ಲಿ ಡೇಲಿಯಾ ಶವ ಪತ್ತೆಯಾಗಿದೆ. ಇದೊಂದು ದಿಕ್ಕು ತಪ್ಪಿಸುವ ಪ್ರಯತ್ನ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲದ ಪರಿಣಾಮ ಆತ್ಮಹತ್ಯೆ ಪ್ರಕರಣದಡಿ ತನಿಖೆ ನಡೆಸಲಾಗುತ್ತಿದೆ.

ಡೇಲಿಯಾ ಸ್ಕೈ ತನ್ನ ನೀಲಿ ಚಲನಚಿತ್ರ ತಾರೆಯ ವೃತ್ತಿ ಜೀವನವನ್ನು 2010ರಲ್ಲಿ ಆರಂಭಿಸಿದ್ದಳು. ಈಕೆಯನ್ನು ಮೂಲತಃ ಬೈಲಿ ಬ್ಲೂ ಎಂದೇ ಕರೆಯಲಾಗು ತ್ತಿತ್ತು. ಪೋರ್ನ್ ಸ್ಟಾರ್ ಡೇಲಿಯಾ ಕಾರಿನೊಳಗೆ ತನಗೆ ತಾನೆ ಗುಂಡು ಹಾರಿಸಿಕೊಂಡು ಸಾವನ್ನಪ್ಪಿರುವುದು ಪತ್ತೆಯಾಗಿದೆ. ಈ ಘಟನೆ ಜೂನ್ 30ರಂದು ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *