Sunday, 27th November 2022

ಹಿರಿಯ ನಟಿ ಪ್ರಮಿಳಾ ಜೋಷಾಯ್ ಕೊರೊನಾ ಸೋಂಕು ದೃಢ, ಆಸ್ಪತ್ರೆಗೆ ದಾಖಲು

ಬೆಂಗಳೂರು: ಹಿರಿಯ ನಟಿ ಪ್ರಮಿಳಾ ಜೋಷಾಯ್ ಕೊರೊನಾ ಸೋಂಕು ತಗುಲಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಳೆದ ಭಾನುವಾರ ಜಯನಗರದ ಎಕ್ಸೆಲ್ ಆಸ್ಪತ್ರೆಗೆ ರಾತ್ರಿ ದಾಖಲು ಮಾಡಿದ್ದಾರೆ ಎನ್ನಲಾಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಆಸ್ಪತ್ರೆಗೆ ದಾಖಲಾಗಿ ಕೊರೊನಾ ಪರೀಕ್ಷೆ ಮಾಡಿಸಿಕೊಂಡ ವೇಳೆಯಲ್ಲಿ ಅವರಿಗೆ ಕರೋನ ಸೊಂಕು ಇರುವುದು ಧೃಡಪಟ್ಟಿದೆ. ಪತಿ ಸುಂದರ್ ರಾಜ್, ಪುತ್ರಿ ಮೇಘನಾ ರಾಜ್ ಅವರ ಕೊರೊನಾ ವರದಿ ನೆಗೆಟಿವ್ ಬಂದಿದೆ ಎನ್ನಲಾಗಿದೆ.