Friday, 7th May 2021

ಬಂಗಾಳದಲ್ಲಿ ಮಮತಾರಷ್ಟೇ ಮೋದಿ ಕೂಡ ಪ್ರಖ್ಯಾತರು: ಪ್ರಶಾಂತ್ ಆಡಿಯೋ ಕ್ಲಿಪ್‌ ವೈರಲ್‌

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣಾ ಕಾವು ರಂಗೇರಿದ್ದು, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಚುನಾವಣಾ ತಂತ್ರಜ್ಞ ಪ್ರಶಾಂತ್​ ಕಿಶೋರ್​ರ ಆಡಿಯೋ ಕ್ಲಿಪ್​ ಅನ್ನು ಬಿಜೆಪಿ ನಾಯಕರು ಸೋಶಿಯಲ್​ ಮೀಡಿಯಾ ದಲ್ಲಿ ವೈರಲ್​ ಮಾಡಿದ್ದಾರೆ.

ಕ್ಲಬ್​ ಹೌಸ್​ ಚಾಟ್​​ನಲ್ಲಿ ಸ್ವತಃ ಪ್ರಶಾಂತ್​ ಕಿಶೋರ್​​ ಬಂಗಾಳದಲ್ಲಿ ಮಮತಾರಷ್ಟೇ ಪ್ರಧಾನಿ ಮೋದಿ ಕೂಡ ಪ್ರಖ್ಯಾತಿ ಗಳಿಸಿ ದ್ದಾರೆ. ಪತ್ರಕರ್ತರೊಂದಿಗೆ ಪ್ರಶಾಂತ್​ ಕಿಶೋರ್​ ನಡೆಸಿದ ಚಾಟ್​​ನಲ್ಲಿ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧದ ಆಕ್ರೋಶ, ರಾಜಕೀಯ ಧೃವೀಕರಣ ಹಾಗೂ ದಲಿತ ಮತಗಳು ಈ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡುವ ಮೂರು ಅಂಶಗಳಾಗಿವೆ ಎಂದು ಹೇಳಿದ್ದಾರೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily

ಆಡಿಯೋ ಕ್ಲಿಪ್ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದ್ದಂತೆಯೇ ಪ್ರಶಾಂತ್​ ಕಿಶೋರ್​ ಟ್ವೀಟ್​ ಮೂಲಕ ಪ್ರತಿಕ್ರಿಯೆ ನೀಡಿದ್ದು. ಬಿಜೆಪಿಗರು ನನ್ನ ಮಾತುಗಳನ್ನ ಅವರ ನಾಯಕರ ಮಾತುಗಳಿಗಿಂತ ಹೆಚ್ಚು ಗಂಭೀರವಾಗಿ ಪರಿಗಣಿಸಿದ್ದಕ್ಕೆ ನನಗೆ ಖುಷಿಯಾಗಿದೆ. ಪೂರ್ಣ ಸಂಭಾಷಣೆಯನ್ನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಮಾಲ್ವಿಯಾ ಶೇರ್​ ಮಾಡಿರುವ ಆಡಿಯೋ ತುಣುಕಿನಲ್ಲಿ, ಬಿಜೆಪಿಗೆ ಮೋದಿ ಹಾಗೂ ಹಿಂದೂ ಹೆಸರಿನಲ್ಲಿ ಮತಗಳು ಬೀಳುತ್ತವೆ. ರಾಜಕೀಯ ಧೃವೀಕರಣ, ದಲಿತ ಜನಾಂಗ, ಹಿಂದಿ ಮಾತನಾಡುವವರು ಇವೆಲ್ಲ ಬಿಜೆಪಿ ಗೆ ಲಾಭ ತರುವ ಅಂಶಗಳು. ಮೋದಿ ಈ ಭಾಗದಲ್ಲಿ ಹೆಚ್ಚು ಪ್ರಚಲಿತರಾಗಿದ್ದಾರೆ ಎಂದು ಕಿಶೋರ್​ ಹೇಳಿದ್ದಾರೆ.

Leave a Reply

Your email address will not be published. Required fields are marked *