Tuesday, 21st March 2023

ಭರದಿಂದ ಸಾಗಿದೆ ಪ್ರವೀಣ ಚಿತ್ರೀಕರಣ!

ಹಿಂದೆ “ಹತ್ತನೇ ತರಗತಿ” ಚಿತ್ರ ತೆರೆಗೆ ಬಂದು ಯುವ ಮನಸ್ಸುಗಳನ್ನು ಸೆಳೆದಿತ್ತು. ಆ ಚಿತ್ರವನ್ನು ನಿರ್ದೇಶಿಸಿದ ಮಹೇಶ್ ಸಿಂಧುವಳ್ಳಿ ಮೊದಲ ಚಿತ್ರದಲ್ಲೇ ಗೆದ್ದಿದ್ದರು. ಈಗ ಅದೇ ಚಿತ್ರತಂಡ “ಪ್ರವೀಣ” ಎಂಬ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಲು ಸಿದ್ಧತೆ ಆರಂಭಿಸಿದೆ. ಚಿತ್ರದ ಮುಹೂರ್ತ ಕೂಡ ನೆರವೇರಿದ್ದು ಮೈಸೂರಿನ ವಿನಾಯಕ ದೇವಾಲಯ ದಲ್ಲಿ ಮೊದಲ ದೃಶ್ಯವನ್ನು ಚಿತ್ರೀಕರಿಸಲಾಗಿದೆ.

‘ಪ್ರವೀಣ’ ಸರಕಾರಿ ಮತ್ತು ಖಾಸಗಿ ಶಾಲೆಗಳ ಇಂದಿನ ಸ್ಥಿತಿಗತಿಯನ್ನು ಕುರಿತು ಹೇಳುತ್ತದೆ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಬಾಲಕನೊಬ್ಬ ಖಾಸಗಿ ಶಾಲೆಗೆ ಸೇರ್ಪಡೆಗೊಂಡ ಅನುಭವಿಸುವ ಭಾವನಾತ್ಮಕತೆಯ ತೊಳಲಾಟವನ್ನು ಚಿತ್ರದಲ್ಲಿ ಹೇಳಲಾಗಿದೆ. ಅಲ್ಲದೆ ಬಡ ಬಾಲಕನೊಬ್ಬ ತನ್ನ ಪ್ರತಿಭೆ ಬುದ್ಧಿವಂತಿಕೆಯಿಂದ ಹೇಗೆ ಹಳ್ಳಿಯನ್ನು ಅಭಿವೃದ್ಧಿಗೊಳಿಸುವ ಮುಂದಾಗುತ್ತಾನೆ ಎಂಬ ಅಂಶವು ಚಿತ್ರದಲ್ಲಿದೆ ಪ್ರವೀಣ ಚಿತ್ರದ ಮುಖ್ಯಪಾತ್ರದಲ್ಲಿ ಊರಿನ ಅಧ್ಯಕ್ಷನಾಗಿ ನಟ ಮಂಡ್ಯ ರಮೇಶ್ ನಟಿಸುತ್ತಿದ್ದಾರೆ. ಇನ್ನುಳಿದಂತೆ ನಟ ವಿಜಯ್ ಕಾರ್ತಿಕ್ ಬಾಲನಟ ಶಶಿ ರೋಹಿತ್ ಮುಂತಾದವರು ಚಿತ್ರದ ತಾರಾಗಣದಲ್ಲಿದ್ದಾರೆ. ಜಗದೀಶ್ ರಾಜಶೇಖರ್ ಬಂಡವಾಳ ಹೂಡಿದ್ದು ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ ಛಾಯಾಗ್ರಹಣ ಮನೋಜ್ ಅವರದಾಗಿದೆ ಮೈಸೂರು-ಚಾಮರಾಜನಗರ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಯಲಿದೆ.

error: Content is protected !!