Thursday, 2nd February 2023

ಕೊಡಗಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಫೆ.6ರಂದು ಆಗಮನ

ಮಡಿಕೇರಿ: ಫೆ.6ರಂದು ಜನರಲ್‌ ತಿಮ್ಮಯ್ಯ ಮ್ಯೂಸಿಯಂ ಉದ್ಘಾಟನೆಗೆ ಕೊಡಗಿಗೆ ಆಗಮಿಸುತ್ತಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್‌, ಅಂದೇ ಭಾಗಮಂಡಲ ಹಾಗೂ ತಲಕಾವೇರಿಗೂ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಚೆಟ್ಟಿಮಾನಿ ಬಳಿಯ ತಾತ್ಕಾಲಿಕವಾಗಿ ನಿರ್ಮಿಸಿರುವ ಹೆಲಿಪ್ಯಾಡ್‌ಗೆ ರಾಷ್ಟ್ರಪತಿ ಬಂದಿಳಿಯಲಿದ್ದಾರೆ. ಅಲ್ಲಿಂದ ತಲಕಾವೇರಿಗೆ ತೆರಳಿದ್ದಾರೆ. ಬೆಳಿಗ್ಗೆ 10ರ ವೇಳೆಗೆ ವಿಶೇಷ ಪೂಜೆ ನೆರವೇರಲಿದೆ.

ಹೆಲಿಪ್ಯಾಡ್ ತಲುಪಿದ ಬಳಿಕ ಹೆಲಿಕಾಪ್ಟರ್‌ನಲ್ಲಿ ಮಡಿಕೇರಿಯ ಗಾಲ್ಫ್ ಮೈದಾನಕ್ಕೆ ಬರಲಿದ್ದಾರೆ. ಕಾರ್‌ನಲ್ಲಿ ಸುದರ್ಶನ ಅತಿಥಿ ಗೃಹಕ್ಕೆ ತೆರಳಲಿದ್ದಾರೆ. ಅತಿಥಿ ಗೃಹದಲ್ಲಿ ಭೋಜನ ಸವಿಯಲಿದ್ದಾರೆ. ಬಳಿಕ, ಮ್ಯೂಸಿಯಂ ಉದ್ಘಾಟನೆಯಲ್ಲಿ ಪಾಲ್ಗೊಳ್ಳ ಲಿದ್ದಾರೆ.

ರಾಷ್ಟ್ರಪತಿ ಜೊತೆಗೆ, ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌ ಸಹ ಮ್ಯೂಸಿಯಂ ಉದ್ಘಾಟನೆಗೆ ಬರುವ ಸಾಧ್ಯತೆಯಿದೆ. ಕೋವಿಡ್‌ ಕಾರಣದಿಂದ ಪ್ರೇಕ್ಷಕರಿಗೆ ಅವಕಾಶ ಇರುವುದಿಲ್ಲ. ಪಾಸ್‌ ಇದ್ದವರಿಗೆ ಮಾತ್ರ ಅವಕಾಶವಿದೆ ಎಂದು ಫೋರಂ ಸದಸ್ಯರು ತಿಳಿಸಿದ್ದಾರೆ.

error: Content is protected !!