Tuesday, 27th July 2021

ಇಂದು ಸಂಜೆ ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿ

ಬೆಂಗಳೂರು: ಲಾಕ್‌ಡೌನ್ ವಿಸ್ತರಣೆ ಹಾಗೂ ಕರೊನಾ 2ನೇ ಪ್ಯಾಕೇಜ್ ಘೋಷಣೆ ಕುರಿತಂತೆ ಗುರುವಾರ ಸಂಜೆ 5 ಗಂಟೆಗೆ ಸಿಎಂ ಯಡಿಯೂರಪ್ಪ ಮಹತ್ವದ ಸುದ್ದಿಗೋಷ್ಠಿ ಕರೆದಿದ್ದಾರೆ.

ಈಗಾಗಲೇ, ಮೊದಲ ಕರೋನಾ ಪ್ಯಾಕೇಜ್‌ನಲ್ಲಿ 1250 ಕೋಟಿ ರೂ. ಘೋಷಣೆ ಮಾಡಿದ್ದರು. ಅದೇ ರೀತಿ, 2ನೇ ಹಂತದ ಪ್ಯಾಕೇಜ್‌ ನಲ್ಲಿ ಇತರ ವರ್ಗಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. 2ನೇ ಹಂತದ ಪ್ಯಾಕೇಜ್‌ನಲ್ಲಿ ತಮ್ಮನ್ನು ಪರಿಗಣಿಸು ವಂತೆ ಹಲವು ಕಾರ್ಮಿಕ ವರ್ಗಗಳು, ಶಿಕ್ಷಕರು, ರೈತರು, ನೇಕಾರರು ಸಿಎಂ ಯಡಿಯೂರಪ್ಪ ಬಳಿ ಮನವಿ ಮಾಡಿಕೊಂಡಿದ್ದರು.

ಇದೇ ವೇಳೆ ಲಾಕ್‌ಡೌನ್ ವಿಸ್ತರಣೆ ಕುರಿತು ಮಹತ್ವದ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.

Leave a Reply

Your email address will not be published. Required fields are marked *