Tuesday, 31st January 2023

ಆರ್ಥಿಕ ಸಾಕ್ಷರತಾ ಕಾರ್ಯಕ್ರಮ

ಕೋಲಾರ: ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ವತಿಯಿಂದ ಔಟರೀಚ್ ಮತ್ತು ಆರ್ಥಿಕ ಸಾಕ್ಷರತಾ ಕಾರ್ಯಕ್ರಮವನ್ನು ಸ್ಥಳೀಯ ಕೊಲ್ಹಾರ ಪಟ್ಟಣ ಪಂಚಾಯತ ಸಭಾಭವನದಲ್ಲಿ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಆರ್ಥಿಕ ಸಾಕ್ಷರತಾ ಬಾಗೇವಾಡಿ ಘಟಕದ ಕೌನ್ಸಲರ್ ಐ.ಎಸ್ ಚಿಮ್ಮಲಗಿ ಮಾತನಾಡಿ ಡಿಜಿಟಲ್ ಬ್ಯಾಂಕಿಂಗ್ ಹಾಗೂ ಅದರ ಜಾಗೃತೆಯ ಕುರಿತು ವಿವರಿಸಿದರು.

ಸ್ಥಳೀಯ ಕೆವ್ಹಿಜಿ ಶಾಖೆಯ ಹಿರಿಯ ವ್ಯವಸ್ಥಾಪಕ ವ್ಹಿ.ಬಿ ಕುಲಕರ್ಣಿ ಮಾತನಾಡುತ್ತಾ ಎಪಿವಾಯ್, ಪಿಎಮ್ಎಸಬಿವಾಯ್ ಹಾಗೂ ಪಿಎಮಜೆಜೆಬಿವಾಯ್ ಮೋಬೈಲ್ ಬ್ಯಾಂಕಿಂಗ್ ಬಳಕೆಯ ಕುರಿತು ಜೊತೆಗೆ ಬ್ಯಾಂಕಿನಲ್ಲಿರುವ ವಿವಿಧ ಸಾಲ ಸೌಲಭ್ಯ ಗಳು ಹಾಗೂ ಓಟಿಎಸ್ ಕುರಿತಾಗಿ ವಿವರಿಸಿದರು.

ಈ ಸಂದರ್ಭದಲ್ಲಿ ಪ.ಪಂ ಮುಖ್ಯಾಧಿಕಾರಿ ವೀರೇಶ ಹಟ್ಟಿ, ಗ್ರಾಹಕರು, ಕೆವ್ಹಿಜಿ ಬ್ಯಾಂಕ್ ಸಿಬ್ಬಂದಿ ವರ್ಷದವರು ಇದ್ದರು. ಮಹಾಂತೇಶ ಬೀಳಗಿ ಕಾರ್ಯಕ್ರಮವನ್ನು ನಿರೂಪಿಸಿದರು.

error: Content is protected !!