Tuesday, 9th August 2022

ಅಧಿಕಾರಿಗಳ ಎಡವಟ್ಟಿನಿಂದ ಚುನಾವಣೆ ಮುಂದೂಡಿಕೆ, ಸದಸ್ಯರಿಂದ ಏಕಾಏಕಿ ಪ್ರತಿಭಟನೆ

ಗಣದಿನ್ನಿ ಗ್ರಾ.ಪಂ.ಅಧ್ಯಕ್ಷ , ಉಪಾಧ್ಯಕ್ಷ ಚುನಾವಣೆ 

ಸಿರವಾರ : ತಾಲೂಕಿನ ಗಣದಿನ್ನಿ ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಕ್ಕೆ ಶನಿವಾರ ನಡೆಯಬೇಕಿದ್ದ ಚುನಾವಣೆ ಮುಂದೂಡಲಾಗಿದೆ. ಭಾರೀ ಜಿದ್ದಾ ಜಿದ್ದಾ ನಿಂದ ಕೂಡಿದ್ದ ಚುನಾವಣೆ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಆಕಾಂಕ್ಷಿಗಳ ಆಸೆಗೆ ಎಳ್ಳು ನೀರು ಬಿಟ್ಟಂತಾಗಿದೆ.

ಸಾಮಾನ್ಯ ಮಹಿಳಾ ಮೀಸಲು ಸ್ಥಾನಕ್ಕೆ ಯಾವುದೇ ಕುಂದು ಕೊರತೆಗಳು ಇಲ್ಲದೆ ಬಿಜೆಪಿ ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಆದರೆ , ಪರಿಶಿಷ್ಟ ಪಂಗಡ ಪುರುಷ ಸ್ಥಾನಕ್ಕೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನವನ್ನು ಚುನಾವಣಾ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದಾಗಿ ಪರಿಶಿಷ್ಟ ಪಂಗಡ ಮಹಿಳಾ ಮೀಸಲು ಎಂದು ಸದಸ್ಯರಿಗೆ ನೋಟಿಸ್‌ ನೀಡಿದ್ದಾರೆ ಎಂದು ಆರೋಪಿಸಿ ಸದಸ್ಯರು ಏಕಾಏಕಿ ಯಾಗಿ ಗ್ರಾಮ ಪಂಚಾಯತ್ ಮುಂದೆ ಪ್ರತಿಭಟನೆ ನಡೆಸಿ ಮುಂದೂ ಡುವಂತೆ ಒತ್ತಾಯಿಸಿದರು.

ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೀಸಲಾತಿ ದೋಷದಿಂದ ಮುಂದೂಡಲಾಗಿದೆ. ಮುಂದಿನ ಚುನಾವಣೆಯ ದಿನಾಂಕವನ್ನು ಸದಸ್ಯರಿಗೆ ನೋಟಿಸ್ ಮೂಲಕ ತಿಳಿಸ ಲಾಗುವುದು ಎಂದು ಚುನಾವಣಾ ಅಧಿಕಾರಿ ಉಮೇಶ ಅವರು ತಿಳಿಸಿದ್ದಾರೆ.