Monday, 16th May 2022

ಪ್ರತಿಭಟನೆ ಹೆಸರಲ್ಲಿ ಗೂಂಡಾಗಿರಿ…

ಬಲವಂತವಾಗಿ ಅಂಗಡಿ-ಮುಂಗಟ್ಟು ಮುಚ್ಚಿಸಿದ ಬೆಂಬಲಿಗರು 16ಕ್ಕೂ ಹೆಚ್ಚು ಬಸ್‌ಗಳನ್ನು ಜಖಂಗೊಳಿಸಿರುವ ಡಿಕೆ ಭಿಮಾನಿಗಳು

ಕಾಂಗ್ರೆೆಸ್ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಬಂಧನದಿಂದ ರಾಜ್ಯದ ಹಲವು ಭಾಗದಲ್ಲಿ ಪ್ರತಿಭಟನೆಯ ಹೆಸರಲ್ಲಿ ಡಿಕೆಶಿ ಬೆಂಬಲಿಗರು ಗೂಂಡಾ ವರ್ತನೆ ಮಾಡುತ್ತಿದ್ದಾರೆ ಎನ್ನುವ ಆರೋಪ ಇದೀಗ ಶುರುವಾಗಿದೆ.

ಡಿ.ಕೆ.ಶಿವಕುಮಾರ್ ಬಂಧನ ಬೆನ್ನಲ್ಲೇ ಹಳೇ ಮೈಸೂರು ಭಾಗ, ಅದರಲ್ಲಿಯೂ ರಾಮನಗರ ಭಾಗದಲ್ಲಿ ಡಿಕೆಶಿ ಬೆಂಬಲಿಗರಿಂದ ಭಾರಿ ಆಕ್ರೋೋಶ ವ್ಯಕ್ತವಾಗಿದೆ. ಪ್ರತಿಭಟನೆಯ ಹೆಸರಲ್ಲಿ ಸಾರ್ವಜನಿಕ ಆಸ್ತಿಿಪಾಸ್ತಿಿಯನ್ನು ನಾಶ ಮಾಡುವ ಕೆಲಸಕ್ಕೆೆ ಬೆಂಬಲಿಗರು ನಿಂತಿದ್ದಾಾರೆ ಎನ್ನುವ ಆರೋಪ ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಕೇಳಿಬಂದಿದೆ.

ರಾಜಕೀಯ ಪ್ರೇರಿತ ಬಂಧನವೆಂದು ಬೀದಿಗಿಳಿದ ಶಿವಕುಮಾರ್ ಬೆಂಬಲಿಗರು ಹಾಗೂ ಅಭಿಮಾನಿಗಳು ರಾಮನಗರ ಹಾಗೂ ಕನಕಪುರ ಭಾಗದ ರಸ್ತೆೆಗಳನ್ನು ತಡೆಗಟ್ಟಿಿ ಆಕ್ರೋೋಶ ವ್ಯಕ್ತಪಡಿಸುವುದರೊಂದಿಗೆ, ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ಕಲ್ಲು ತೂರಾಟ ಹಾಗೂ ಬೆಂಕಿ ಹಚ್ಚುವ ಮೂಲಕ ತಮ್ಮ ಆಕ್ರೋೋಶವನ್ನು ಹೊರಹಾಕಿದ್ದಾಾರೆ. ಆದರೆ ಪ್ರತಿಭಟನೆಯ ಹೆಸರಲ್ಲಿ ಡಿಕೆಶಿ ಬೆಂಬಲಿಗರು ಗೂಂಡಾಗಿರಿ ಮಾಡುವುದು ಅಪರಾಧ ಎನ್ನುವ ಮಾತನ್ನು ಅನೇಕರು ಹೇಳಿದ್ದಾಾರೆ.

ಪ್ರತಿಭಟನಾ ನಿರತರ ಆಕ್ರೋೋಶಕ್ಕೆೆ 18ಕ್ಕೂ ಹೆಚ್ಚು ಬಸ್‌ಗಳು ಜಖಂಗೊಂಡಿವೆ. ಇದರಲ್ಲಿ ಎರಡು ಬಸ್ ಸಂಪೂರ್ಣ ಅಗ್ನಿಿಗೆ ಆಹುತಿಯಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾಾರೆ. ಇದರೊಂದಿಗೆ ಮಂಗಳೂರು ಸೇರಿದಂತೆ ಹಲವು ಭಾಗದಲ್ಲಿ ಖಾಸಗಿ ವಾಹನ, ಬಿಜೆಪಿ ಕಚೇರಿಯ ಮೇಲೂ ದಾಳಿ ನಡೆಸಿ, ಹಾನಿ ಮಾಡಿದ್ದಾಾರೆ ಎನ್ನುವ ಆರೋಪ ಕೇಳಿಬಂದಿದೆ.
ಬಲವಂತವಾಗಿ ಅಂಗಡಿ ಬಂದ್

ಇನ್ನು ಕುಣಿಗಲ್ ಸೇರಿದಂತೆ ಹಲವು ಭಾಗದಲ್ಲಿ ಪ್ರತಿಭಟನಾ ನಿರತರು, ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದಾಾರೆ. ಈ ವೇಳೆ ಮಾಲೀಕರು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಆದ್ದರಿಂದ ಕಾನೂನು ಸುವ್ಯವಸ್ಥೆೆ ಸಂಬಂಧ ಗೃಹ ಸಚಿವ ಬಸವರಾಜ ಬೊಮ್ಮಾಾಯಿ ಹಿರಿಯ ಅಧಿಕಾರಿಗಳ ಸಭೆ ನಡೆಸಿ, ಪ್ರತಿಭಟನೆ ನಡೆಸಲು ಅವಕಾಶ ನೀಡಿ. ಆದರೆ ಶಾಂತಿಯುತವಾಗಿ ನಡೆಸದೇ ಗೂಂಡಾ ಪ್ರವೃತಿ ತೋರಿದರೆ ಕಠಿಣ ಕ್ರಮ ಕೈಗೊಳ್ಳಿಿ ಎಂದು ಸೂಚನೆ ನೀಡಿದ್ದಾಾರೆ ಎಂದು ಮೂಲಗಳು ತಿಳಿಸಿವೆ.