Friday, 2nd December 2022

ಕೋಲಾರದ ಬಸ್ ಡಿಪೋ ಬಳಿ ದಿಢೀರ್ ಪ್ರತಿಭಟನೆ

ಕೋಲಾರ: ಸಾರಿಗೆ ನೌಕರರು ನಡೆಸುತ್ತಿರುವ ಬಸ್ ಮುಷ್ಕರ ಸತತ ಒಂಬತ್ತನೇ ದಿನಕ್ಕೆ ಕಾಲಿಟ್ಟಿದೆ.

ಗುರುವಾರ ಕೋಲಾರದ ಬಸ್ ಡಿಪೋ ಬಳಿ ಸಾರಿಗೆ ನೌಕರರ ಕುಟುಂಬಸ್ಥರಿಂದ ದಿಢೀರ್ ಪ್ರತಿಭಟನೆ ನಡೆಸಲಾಗುತ್ತಿದೆ. ನೌಕರರಿಗೆ ಮಾರ್ಚ್ ತಿಂಗಳ ವೇತನ ನೀಡುವಂತೆ ಆಗ್ರಹಿಸಿ ಪ್ರತಿಭಟಿಸಿದರು. ಈ ವೇಳೆ ಕೋಲಾರದ ಬಸ್ ಡಿಪೋ ಬಳಿ ಸಾರಿಗೆ ನೌಕರರು ಹಾಗೂ ಪೊಲೀಸರ ಜೊತೆ ಮಾತಿನ ಚಕಮಕಿ ನಡೆದಿದ್ದು, ಪ್ರತಿ ಭಟನಾಕಾರರನ್ನು ಡಿಪೋ ಒಳಗೆ ಬಿಡದೆ ಗೇಟ್ ಬಳಿ ಪೊಲೀಸರು ತಡೆದಿದ್ದಾರೆ.

ಸಾರಿಗೆ ನೌಕರರ ಜೊತೆ ಮಹಿಳೆಯರು ಮತ್ತು ಮಕ್ಕಳು ಪ್ರತಿಭಟನೆ ನಡೆಸುತ್ತಿದ್ದು, ನಮ್ಮ ನ್ಯಾಯ ನಾವು ಕೇಳುತ್ತಿದ್ದೇವೆ ಎಂದು ಪಟ್ಟುಹಿಡಿದಿದ್ದಾರೆ. ಪೊಲೀಸರು ಪ್ರತಿಭಟನಾ ನಿರತ 20 ಜನ ಮಹಿಳೆಯರನ್ನು ಬಂಧಿಸಿದ್ದು, 144 ಸೆಕ್ಷನ್ ಜಾರಿ ಹಿನ್ನೆಲೆ ಪ್ರತಿಭಟನೆಗೆ ಅವಕಾಶ ನೀಡದೆ ಬಂಧಿಸಿದ್ದಾರೆ.