Thursday, 1st December 2022

ಕೊಡಗು ಪಿಎಸ್‌ಐ ಡಬ್ಲ್ಯೂ ಚಿನ್ನಪ್ಪ ನಾಯಕ ನಿಧನ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ನಿಯಂತ್ರಣ ಕೊಠಡಿಯ ಪಿಎಸ್‌ಐ ಡಬ್ಲ್ಯೂ ಚಿನ್ನಪ್ಪ ನಾಯಕ ಅವರು ಬುಧವಾರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ರಜೆಯಲ್ಲಿದ್ದ ಚಿನ್ನಪ್ಪ ನಾಯ್ಕ ಬುಧವಾರ ಬೆಳಿಗ್ಗೆ ಕಡಬದ ಮನೆಯಲ್ಲಿ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಕಡಬ ಆಸ್ಪತ್ರೆಗೆ ತರುವಾಗ ಮಾರ್ಗ ಮಧ್ಯೆ ಮೃತರಾಗಿದ್ದರು.

ಮೃತರು ಕಳೆದ ತಿಂಗಳು ಪಿಎಸ್‌ಐ ಆಗಿ ಬಡ್ತಿ ಹೊಂದಿದ್ದರು. ಈ ತಿಂಗಳ ಕೊನೆಯಲ್ಲಿ ನಿವೃತ್ತಿ ಹೊಂದಬೇಕಾಗಿತ್ತು. ಚಿನ್ನಪ್ಪ ನಾಯಕರ ನಿಧನಕ್ಕೆ ಕೊಡಗು ಪೊಲೀಸರು ಸಂತಾಪ ಸೂಚಿಸಿದ್ದಾರೆ.