Thursday, 19th September 2024

ಸತ್ಯಾನ್ವೇಷಣೆಗಾಗಿ ಶ್ರೀಶಂಕರರ ಪರಕಾಯ ಪ್ರವೇಶ

shankarachjarya

ಒಂದು ಸಲ ಶ್ರೀಶಂಕರಾಚಾರ್ಯರು ಮಂಡಲಾ ಎಂಬ ಊರಿಗೆ ಹೋದರು. ಆ ಊರು ಮಂಡನ ಮಿಶ್ರರ ಗ್ರಾಮ. ಮಂಡನ ಮಿಶ್ರರ ಹೆಸರಿನಿಂದಲೇ ಆ ಗ್ರಾಮಕ್ಕೆ ಮಂಡಲಾ ಎಂಬ ಹೆಸರು ಬಂದಿತ್ತು.

ಮಂಡನಮಿಶ್ರರು, ಶಂಕರಾಚಾರ್ಯರಿಗಿಂತ ವಯಸ್ಸಿನಲ್ಲಿ ಹಿರಿಯರು, ಬಹಳ ಖ್ಯಾತರಾದವರು. ಶಂಕರರು ಅವರೊಂದಿಗೆ ‘ಸತ್ಯಾನ್ವೇಷಣೆಗಾಗಿ ನಿಮ್ಮೊಂದಿಗೆ ನಾನು ವಾದ ಮಾಡ ಬಯಸುತ್ತೇನೆ’ ಎಂದು ಕೇಳಿದರು.
ಮಂಡನಮಿಶ್ರರು, ‘ನಿನ್ನೊಡನೆ ವಾದ ಸಮವಾದದಲ್ಲ ನಾನು ಬಹಳ ಹಿರಿಯ, ಆದರೂ ನೀ ಹೇಳುವೆ ಎಂದು ಪಾಲ್ಗೊಳ್ಳುತ್ತೇನೆ. ನೀನೇ ತೀರ್ಪುಗಾರರನ್ನು ಆರಿಸು’ ಎಂದಾಗ ಶಂಕರರು ಅವರ ಮಂಡನ ಮಿಶ್ರರ ಪತ್ನಿ ಭಾರತಿ ದೇವಿಯನ್ನೇ ತೀರ್ಪು ನೀಡಲು ಕೇಳಿಕೊಂಡರು.

ಈ ರೀತಿಯ ಪಾದಗಳಲ್ಲಿ ಜ್ಞಾನವನ್ನು ಪ್ರದರ್ಶಿಸುವ ಅಹಂಕಾರಕ್ಕಿಂತ ಒಬ್ಬರನ್ನು ಮತ್ತೊಬ್ಬರು ತಿಳಿದುಕೊಳ್ಳುವ ಅವರ ಜ್ಞಾನನವನ್ನು ಪಡೆದು ಕೊಳ್ಳುವ ಕಾತುರತೆ ಇತ್ತು. ಶಂಕರರಲ್ಲದೇ ಬೇರೆ ಯಾರೇ ಆಗಿದ್ದರೂ, ಈ ತೀರ್ಮಾನ ಮಾಡುತ್ತಿರಲಿಲ್ಲ. ಏಕೆಂದರೆ, ಪತ್ನಿಯನ್ನು ನಿರ್ಣಾಯಕಳಾಗಿ ಆರಿಸಿದರೆ ಅವರು ಬಹುಶಃ ತನ್ನ ಪತಿಯ ಪಕ್ಷವನ್ನೇ ಆರಿಸಬಹುದಿತ್ತು. ಆದರೆ ಇದೊಂದು ಸತ್ಯಾನ್ವೇಷಣೆಯ ಚರ್ಚೆ-ವಾದ ಎಲ್ಲವೂ ಮುಗಿದ ನಂತರ ಭಾರತಿ ದೇವಿಯವರೇ ಅವರ ವಿದ್ವಾಂಸ ಪತಿ ಸೋತರೆಂದು ನಿರ್ಣಯಿಸಿ, ಶಂಕರರು ಗೆದ್ದರೆಂದು ತುಂಬಿದ ಸಭೆಯಲ್ಲಿ ತೀರ್ಮಾನವಿತ್ತಳು. ಆದರೆ ಆಕೆ ಇನ್ನೂ ಒಂದು ಮಾತು ಹೇಳಿದರು, ‘ಈ ಸೋಲು ಇನ್ನೂ ಅಪೂರ್ಣ. ಏಕೆಂದರೆ ನಾನು ಅವರ ಅರ್ಧಾಂಗಿನಿ. ಈಗ ನೀವು ಅವರ ಅರ್ಧಾಂಗಿನಿಯಾಗಿರುವ ನನ್ನಲ್ಲಿ ಕೂಡಾ ವಾದ ಮಾಡಿ ಗೆದ್ದಾಗ ಪೂರ್ತಿ ಗೆಲುವು ನಿಮ್ಮದು’ ಎಂದರು.

ಎಲ್ಲರಿಗೂ ಇದಂತೂ ತುಂಬಾ ತಮಾಷೆ ಎನಿಸಿದರೂ, ಅವರು ಹೇಳಿದ ಮಾತು ಸರಿಯಾಗಿತ್ತು. ಇದನ್ನು ಶಂಕರರು ಅಲ್ಲಗೆಳೆಯಲಾರದೆ ಒಪ್ಪಿಕೊಂಡರು. ಇದು ಶಂಕರರಿಗೆ ಸಣ್ಣ ಕಸಿವಿಸಿ ಯನ್ನುಂಟು ಮಾಡಿತು.
ಚರ್ಚೆ ಪ್ರಾರಂಭವಾದಾಗ ಭಾರತಿದೇವಿ ಕೇಳಿದ ಕೆಲವು ಪ್ರಶ್ನೆಗಳಿಂದ ಶಂಕರರು ತಬ್ಬಿಬ್ಬಾದರು. ತಾಯಿ ಭಾರತಿದೇವಿ ಬ್ರಹ್ಮ ತತ್ವದ ಬಗ್ಗೆ ತಮ್ಮ ಪತಿ ವಾದ ಮಾಡಿ ಸೋತಿರುವುದನ್ನು ತಾವೇ ತೀರ್ಪು ನೀಡಿದ್ದರು. ಹೀಗಿರುವಾಗ ಈಗ ಪತಿ ವಾದದಲ್ಲಿ ಪೂರ್ತಿಯಾಗಿ ಸೋಲುವುದನ್ನೂ ಅವಳು ಸಹಿಸಲಿಲ್ಲ. ಅದಕ್ಕಾಗಿಯೇ ಅವಳು ಕಾಮವಾಸನೆಯ ಬಗ್ಗೆ ಶಂಕರರಿಗೆ ಪ್ರಶ್ನೆಗಳನ್ನು ಕೇಳುತ್ತಾ ವಾದಕ್ಕೆ ಇಳಿದರು.

ಬಾಲಸನ್ಯಾಸಿಯಾಗಿದ್ದರಿಂದ ಭಾರತಿದೇವಿ ಪ್ರಶ್ನೆಯಿಂದ ಪೇಚಿಗೆ ಸಿಲುಕಿದರು. ಕೊನೆಗೆ ‘ಈ ಪ್ರಶ್ನೆಗೆ ಉತ್ತರ ನೀಡಲು, ನಾನು ಬಾಲಸನ್ಯಾಸಿ ಆದುದರಿಂದ ತನಗೆ ಪ್ರೇಮವೂ ತಿಳಿಯದು ಕಾಮವೂ ತಿಳಿಯದು. ಈಗ  ಞನು ವಾದಕ್ಕೆ ಹೋದರೆ ತನಗೆ ಸೋಲು ಖಚಿತವೆಂದು ತಿಳಿದು, ಶಂಕರಾಚಾರ್ಯರು ಅದರ ಬಗ್ಗೆ ಅನುಭವ ಪಡೆದು ಹಿಂತಿರುಗಿ ಬರುವೆ, ನೀವು ನನಗೆ ಆರು ತಿಂಗಳ ಸಮಯ ನೀಡಿ’ ಎಂದು ಕೇಳಿದರು. ಇದು ಸತ್ಯ ವಾದದ್ದರಿಂದ ಭಾರತಿದೇವಿ ಇದಕ್ಕೆ ಒಪ್ಪಿಕೊಂಡರು.

ಶಂಕರರು ಬಹಳ ಯೋಚಿಸಿ, ತಮ್ಮ ದೇಹವನ್ನು ತ್ಯಜಿಸಿ, ಮೃತನಾದ ಒಬ್ಬ ರಾಜನ ಶರೀರವನ್ನು ಹೊಕ್ಕು ಅದರ ಮೂಲಕ ಆರು ತಿಂಗಳ ಕಾಲ ಭೌತ ಸುಖ, ಕಾಮವಾಸನೆಗಳ ಅನುಭವ ಪಡೆದು ಹೇಳಿದ ಸಮಯಕ್ಕೆ ಸರಿಯಾಗಿ ಹಿಂತಿರುಗಿ ಬಂದರು. ಅವರ ಮುಖವನ್ನು ನೋಡಿದೊಡನೆ ಭಾರತಿದೇವಿ, ‘ಇನ್ನು ನಿಮ್ಮೊಡನೆ ವಾದ ವಿವಾದದ ಅವಶ್ಯಕತೆ ಇಲ್ಲ, ನೀವು ತಿಳಿದೇ ಬಂದಿರುವುದು ನಿಮ್ಮ ಮುಖ ನೋಡಿದರೆ ಗೊತ್ತಾಗುತ್ತದೆ, ಇಲ್ಲಿಗೆ ವಿವಾದ ಮುಗಿಯಿತು, ನೀವೇ ಗೆದ್ದಿರುವಿರಿ. ನನ್ನನ್ನು ನಿಮ್ಮ ಶಿಷ್ಯೆಯಾಗಿ ಸ್ವೀಕರಿಸಿ’ ಎಂದರು. ಇಲ್ಲಿ ಇವರಿಬ್ಬರಲ್ಲೂ, ಯಾವ ದ್ವೇಷ ಭಾವವೂ, ಇರಲಿಲ್ಲ. ಪರಸ್ಪರ ಅಪಾರವಾದ ಶ್ರದ್ಧೆ, ಒಬ್ಬರ ಬಗ್ಗೆ ಮತ್ತೊಬ್ಬರಲ್ಲಿ ಗೌರವ ಭಾವ ಮಾತ್ರ ಇತ್ತು. ಇಂತಹ ಭಾರತೀಯ ಪರಂಪರೆ ನಮ್ಮದು. ನಮಗಿಂತ ಜ್ಞಾನನಿಗಳಿಗೆ ನಾವು ನೀಡುವ ಗೌರವ ಖಂಡಿತ ನಮ್ಮನ್ನು ಚಿಕ್ಕವರನ್ನಾಗಿಸುವುದಿಲ್ಲ

Leave a Reply

Your email address will not be published. Required fields are marked *