ಪಾಂಡವರು ವನವಾಸದಲ್ಲಿದ್ದಾಗ, ಕೃಷ್ಣ ಒಮ್ಮೆ ಅವರಿದ್ದೆಡೆಗೆ ಅವರನ್ನು ವಿಚಾರಿಸಲೆಂದು ಬಂದ. ಎಲ್ಲರಿಗೂ ಅವನನ್ನು ನೋಡಿ ಬಹಳ ಸಂತೋಷ ವಾಯಿತು. ದ್ರೌಪದಿಯ ಕಣ್ಣಲ್ಲೂ ನೀರು ಹರಿಯಲಾರಂಭಿಸಿತು. ‘ಚಿಂತಿಸಬೇಡ ಸಹೋದರಿ, ಶೀಘ್ರದ ಎಲ್ಲವೂ ಸರಿಹೋಗುತ್ತದೆ’ ಎಂದು ಹೇಳಿ ಆಕೆಯನ್ನು ಸಮಾಧಾನ ಪಡಿಸಿದ.
‘ಇರಲಿ ಬಿಡು ಅಣ್ಣಾ, ಅದು ಬಂದಾಗ ಬರಲಿ, ನೀನು ಬಂದಿದ್ದೇ ನನಗೆ ಬಹಳ ಸಂತೋಷ, ಈಗ ನೀನು ಸ್ನಾನ ಮಾಡಿ ನಿನ್ನ ಆಯಾಸವನ್ನು
ಪರಿಹರಿಸಿಕೋ. ನಂತರ ಭೋಜನ ಮಾಡುವೆಯಂತೆ’ ಎಂದು ಹೇಳಿ, ದ್ರೌಪದಿ ಕೃಷ್ಣನ ಸ್ನಾನಕ್ಕಾಗಿ ಬಿಸಿ ನೀರನ್ನು ಸಿದ್ಧಪಡಿಸಲು ಹೊರಟಳು. ಭೀಮ, ಒಣಗಿದ ಸೌದೆಯನ್ನು ದ್ರೌಪದಿಗೆ ತಂದುಕೊಟ್ಟು, ಒಲೆ ಉರಿಸಲು ಸಹಾಯ ಮಾಡಿದ. ದ್ರೌಪದಿ ಕೃಷ್ಣನ ಸ್ನಾನಕ್ಕಾಗಿ ಒಲೆ ಉರಿಸತೊಡಗಿದಳು.
ಆಗ ಎಲ್ಲರೂ ಗುಡಿಸಲ ಹೊರಗೆ ಕುಳಿತು ಮಾತನಾಡುತ್ತಿದ್ದರು. ಆಗ ಕೃಷ್ಣ, ಅರ್ಜುನನನ್ನು ಕುರಿತು, ‘ವನವಾಸದ ಜೀವನ ಹೇಗೇನಿಸುತ್ತಿದೆ?’
ಎಂದು ಕೇಳಿದ. ‘ನೀನು ನಮ್ಮನ್ನೆ ರಕ್ಷಿಸುತ್ತಿರುವಾಗ, ನಮಗೆ ಯಾವುದರ ಚಿಂತೆಯೂ ಇ ಕೃಷ್ಣಾ, ಎಲ್ಲರೂ ಚೆನ್ನಾಗಿಯೇ ಇದ್ದೇವೆ,’ ಎಂದ ಅರ್ಜುನ.
‘ ಯುಧಿಷ್ಟಿರಾ, ಇವನ ಮಾತನ್ನು ಕೇಳಿದೆಯಾ, ನಿನ್ನ ತಮ್ಮನಿಗೆ ಇ ಹೆಚ್ಚು ಸಂತೋಷವಂತೆ!’ ಎಂದು ಹೇಳಿದ ಕೃಷ್ಣ.
‘ಅವನು ಹೇಳುವುದು ನಿಜ ತಾನೇ? ಪ್ರಕೃತಿಯ ಸೌಂದರ್ಯದ ಜತೆಗಿರುವುದಕ್ಕಿಂತ ಬೇರೆ ಇನ್ನೇನು ಬೇಕು ಕೃಷ್ಣಾ?’ ಎಂದ ಯುಧಿಷ್ಠಿರ. ‘ ನಿನಗೇನಿಸುತ್ತೆ, ತಂಗಿ ದ್ರೌಪದಿ?’ ಕೃಷ್ಣ ಕೇಳಿದಾಗ, ‘ ನನ್ನ ಗಂಡಂದಿರು ಎಲ್ಲಿರುತ್ತಾರೆ ಅ ನನಗೆ ಸಂತೋಷ ಕೃಷ್ಣ, ಅದು ಕಾಡಾದರೇನು? ಅರಮನೆಯಾದರೇನು?’ ಎಂದಳು ದ್ರೌಪದಿ. ‘ ಒಟ್ಟಲ್ಲಿ ನೀವೆ ಸಂತೋಷವಾಗಿರುವುದೇ ನನಗೆ ಮುಖ್ಯ, ನೀರು ಸಿದ್ಧವಾಯಿತೆ? ನಾನು ಸ್ನಾನಕ್ಕೆ ಹೋಗುತ್ತೇನೆ’ ಎಂದ ಕೃಷ್ಣ. ‘ಇಷ್ಟೊತ್ತಿಗೆ, ಅದು ಕಾದಿರಬೇಕು ನೋಡಿ ಬರುತ್ತೇನೆ’ ಎಂದಳು ದ್ರೌಪದಿ.
ಅಲ್ಲಿ ದ್ರೌಪದಿಗೆ ಆಶ್ಚರ್ಯ ಕಾದಿತ್ತು. ‘ಒಲೆ ಜೋರಾಗಿ ಉರಿಯುತ್ತಿದೆ, ಆದರೆ ನೀರು ಸ್ವಲ್ಪವೂ ಬೆಚ್ಚಗೆ ಆಗಿಲ್ಲ’ ಎಂದಳು ದ್ರೌಪದಿ. ಭೀಮ ಬಂದು
ನೋಡಿದ, ‘ಅರೆ, ಇದೇನು, ಇಷ್ಟು ಜೋರಾಗಿ ಒಲೆ ಉರಿಯುತ್ತಿದೆ, ಆದರೆ ಸ್ವಲ್ಪ ಬೆಚ್ಚಗೂ ಆಗಿಲ್ಲವಲ್ಲ, ನೀರು ಇದ್ದ ಹಾಗೆ ಇದೆಯ’ ಎನ್ನುತ್ತಾ ಕೃಷ್ಣನ ಬಳಿಗೆ ಹೋದ. ‘ಯಾಕೆ ಏನಾಯ್ತು?’ ಎಂದು ಕೃಷ್ಣನೂ ಒಲೆಯ ಹತ್ತಿರ ಬಂದು, ಹಂಡೆಯೊಳಗೆ ಕೈ ಹಾಕಿ ನೋಡಿ, ‘ಹೌದು ನೀರು ತಣ್ಣಗಿದೆಯ, ಆ ನೀರನ್ನು ಪೂರ್ತಿ ಹೊರಗೆ ಸುರಿಯಿರಿ, ಯಾಕೆ ಬಿಸಿಯಾಗುತ್ತಿಲ?’ ಎಂದು ನೋಡೇ ಬಿಡೋಣ ಎಂದ.
ಭೀಮ ಹಂಡೆಯಲ್ಲಿದ್ದ ನೀರನ್ನೆ ಹೊರಗೆ ಸುರಿದ. ಆಗ ಅದರೊಳಗೆ ಇದ್ದ ಕಪ್ಪೆ ಹಾರಿ ಹೊರಗೆ ಬಂದಿತು. ಇದು ಹೇಗೆ ಅದರೊಳಗೆ ಹೋಯಿತು
ಎಂದು, ಎಲ್ಲರೂ ಆಶ್ಚರ್ಯಗೊಂಡರು. ‘ ಆಶ್ಚರ್ಯ ಪಡುವುದೇನಿಲ್ಲ, ಹಂಡೆಯೊಳಗೆ ಅದು ಹೋಗಿ ಸೇರಿಕೊಂಡಿತ್ತು, ಅಷ್ಟೇ. ನೀವು ಬೆಂಕಿ ಹಚ್ಚಿದಾಗ, ಕಪ್ಪೆ ನನಗೆ ಶರಣಾಯಿತು. ಅದನ್ನು ರಕ್ಷಿಸುವುದು ನನ್ನ ಕರ್ತವ್ಯ, ಆದ್ದರಿಂದ ನೀರು ಬಿಸಿಯಾಗಲೇ ಇಲ್ಲ. ನಾನು ಅದನ್ನು ಕಾಪಾಡಿದೆ’ ಎಂದ ಕೃಷ್ಣ.
ಎಲ್ಲರೂ ಭಕ್ತಿಯಿಂದ ಕೃಷ್ಣನಿಗೆ ನಮಸ್ಕರಿಸಿ, ‘ನಾವು ಕೂಡ ನಿನಗೆ ಶರಣಾಗಿದ್ದೇವೆ, ನಮ್ಮನ್ನೂ ರಕ್ಷಿಸು ದೇವಾ’ ಎಂದು ಬೇಡಿಕೊಂಡರು. ಕಷ್ಟ ಎಂದು ಬೇಡಿಕೊಂಡಾಗ ಕಪ್ಪೆಯಂತಹ ಒಂದು ಜೀವಿಯನ್ನು ಬಿಡದೆ ರಕ್ಷಿಸುವ ಭಗವಂತ ನಮ್ಮನ್ನು ಕಡೆಗಣಿಸಿಯಾನೆ? ನಂಬಿಕೆ ಒಂದಿದ್ದರೆ ಅಲ್ಲಿ ಭಗವಂತ ಇದ್ದೇ ಇರುತ್ತಾನೆ. ಅದಕ್ಕೆ ದಾಸರು ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣ ಎನಬಾರದೆ? ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ ಕೃಷ್ಣ ಎನಬಾರದೆ ಎಂದು ಹಾಡಿ ಸಾರಿರುವುದು.