Friday, 13th December 2024

ಜೀವನದ ಸಾರ ಸಾರಿದ ಭೀಮಸೇನ ನಳಮಹಾರಾಜ

ಭೀಮಸೇನ ನಳಮಹಾರಾಜ, ಈ ಶೀರ್ಷಿಕೆ ಕೇಳಿದಾಕ್ಷಣ ಇದೊಂದು ಪೌರಾಣಿಕ ಕಥೆಯಾಧಾರಿತ ಚಿತ್ರವೇ ಅಂದುಕೊಳ್ಳಬಹುದು. ಖಂಡಿತ ಇಲ್ಲ, ಇದು ಪ್ರಸ್ತುತತೆಯ ಕಥೆ ಹೇಳುವ ಅಪ್ಪಟ ಕನ್ನಡ ಚಿತ್ರವಾಗಿದೆ. ಭೀಮಸೇನ ಹಾಗೂ ನಳಮಹಾರಾಜ ಇಬ್ಬರೂ ಪೌರಾಣಿಕ ಪುರುಷರಾಗಿದ್ದರೂ, ಅವರು ಇಂದಿಗೂ, ಎಂದೆಂದಿಗೂ ಪ್ರಸ್ತುತರಾಗಿದ್ದಾರೆ. ಈಗ ಅವರ ಹೆಸರನ್ನೇ ಶೀರ್ಷಿಕೆಯಾಗಿ ರಿಸಿಕೊಂಡ ಭೀಮಸೇನ ನಳಮಹಾರಾಜ ಚಿತ್ರ ತೆರೆಗೆ ಬಂದಿದೆ. ನಿರ್ದೇಶಕ ಕಾರ್ತಿಕ್, ಮನರಂಜನಾತ್ಮಕವಾಗಿ ಚಿತ್ರಕಥೆ ಹೆಣೆ ದಿದ್ದು, ತೆರೆಗೆ ತಂದಿದ್ದಾರೆ.

ಡಾ.ರಾಜ್‌ಕುಮಾರ್ ಅಭಿನಯದ ಹಾಲುಜೇನು ಚಿತ್ರದ ಹಾಯಾಗಿ ನಗುತಿರು ನೀನು ರಾಣಿಯ ಹಾಗೆ.. ಚಿತ್ರದ ಹಾಡೇ ಈ ಭೀಮ ಸೇನ ನಳಮಹಾರಾಜ ಚಿತ್ರಕ್ಕೆ ಸ್ಫೂರ್ತಿಯಾಯಿತಂತೆ. ಹಾಡಿನಲ್ಲೇ ಬರುವ ಸಾಲನ್ನೇ ಚಿತ್ರದ ಹೆಸರಾಗಿಸಿ, ಅದಕ್ಕೆ ಮನರಂಜನೆ ಯ ಸ್ಪರ್ಶ ನೀಡಿದ್ದಾರೆ. ಎಲ್ಲಾ ರಸಗಳು ಬೆರತರೆ ಮಾತ್ರ ಅಡುಗೆ ಸವಿಯಲು ರುಚಿಯಾಗಿರುತ್ತದೆ. ಅಂತೆಯೇ ಕುಟುಂಬ ದಲ್ಲಿಯೂ ನವರಸಗಳು ಇದ್ದರೆ ಮಾತ್ರ ಸುಂದರ ಬದುಕು ನಮ್ಮದಾಗುತ್ತದೆ ಎಂಬುದೇ ಚಿತ್ರದ ಕಥಾ ಸಾರಾಂಶ. ಕಥೆಗೆ ತಕ್ಕಂತೆ ಪಾತ್ರಗಳನ್ನು ಆಯ್ಕೆ ಮಾಡಿದ್ದು, ಎಲ್ಲರೂ ಮೆಚ್ಚುವಂತಹ ಕಥೆಯನ್ನು ತೆರೆಗೆ ತಂದಿದ್ದಾರೆ ಕಾರ್ತಿಕ್.

ವೇದವಲ್ಲಿಯಾದ ಆರೋಹಿ

ನಟಿ ಆರೋಹಿ ನಾರಾಯಣ್ ಈ ಚಿತ್ರದಲ್ಲಿ ವೇದವಲ್ಲಿಯಾಗಿ ಕಾಣಿಸಿಕೊಂಡಿ ದ್ದಾರೆ. ವೇದವಲ್ಲಿ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದ ಹೆಣ್ಣುಮಗಳು, ಆದರೆ ಸಂಪ್ರದಾಯವನ್ನು ಮರೆತ ತುಂಟಾಟದ ಹುಡುಗಿಯ ಪಾತ್ರ ಈಕೆ ಯದ್ದು. ಮನೆಯವರು ಹೇಳುವುದೇ ಒಂದು, ಈಕೆ ಮಾಡುವುದು ಇನ್ನೊಂದು. ಈ ಹಿಂದೆ ದೃಶ್ಯಂ, ಶಿವಾಜಿ ಸುರತ್ಕಲ್ ಚಿತ್ರದಲ್ಲಿ ಬಣ್ಣಹಚ್ಚಿದ್ದ ಆರೋಹಿ, ಈಗ ಭಿಮಸೇನ ನಳಮಹಾರಾಜ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದು, ಖುಷಿ ತಂದಿದೆಯಂತೆ. ನಟಿ ಪ್ರಿಯಾಂಕಾ ತಿಮ್ಮೇಶ್ ಕೂಡ ಪ್ರಮುಖ ಪಾತ್ರದಲ್ಲಿ ಕಂಗೊಳಿಸುತ್ತಾಾರೆ. ಒಟ್ಟಾಾರೆ ಈ ಕರೋನಾ ಕಾಲದಲ್ಲಿ ಭೀಮಸೇನ ನಳ ಮಹಾರಾಜ ಪ್ರೇಕ್ಷಕರನ್ನು ರಂಜಿಸುತ್ತಿದೆ.

ಭಿಮಸೇನನಾದ ಅರವಿಂದ
ಚಿತ್ರದ ಪ್ರಮುಖ ಪಾತ್ರದಲ್ಲಿ ನಟ ಅರವಿಂದ್ ಅಭಿನಯಿಸಿದ್ದಾರೆ. ಈ ಹಿಂದೆ ಕಿರಿಕ್ ಪಾರ್ಟಿ ಚಿತ್ರದಲ್ಲಿ ನಟಿಸಿದ್ದ ಅರವಿಂದ್, ಭಿಮಸೇನ ನಳಮಹರಾಜ ಚಿತ್ರದ ಮೂಲಕ ಮೊದಲ ಬಾರಿಗೆ ನಾಯಕನಾಗಿ ಬಣ್ಣಹಚ್ಚಿದ್ದಾರೆ. ಭಿಮನಂತಹ ಮೈಕಟ್ಟು, ನಳನಂತಹ ಸ್ವಭಾವವನ್ನು ಎಲ್ಲರೂ ಬಯಸುತ್ತಾರೆ. ಇಂತಹ ಚಿತ್ರದಲ್ಲಿ ನನಗೆ ನಟಿಸಲು ಅವಕಾಶ ಸಿಕ್ಕಿದ್ದು, ಸಂತಸ ತಂದಿದೆ. ಭೀಮ ಹಾಗೂ ನಳಮಹಾರಾಜನ ಕಥೆಯನ್ನು ಕೇಳಿದ್ದೆ, ಚಿತ್ರದಲ್ಲಿ ನಟಿಸುವಾಗ ಅದರ ಕುರಿತು ಓದಿಕೊಂಡಿದೆ. ಜತೆಗೆ ಅಡುಗೆ ಯನ್ನು ಬಲ್ಲೆ, ಹಾಗಾಗಿ ಚಿತ್ರದಲ್ಲಿ ಅಂದುಕೊಂಡಂತೆ ನಟಿಸಲು ಸಾಧ್ಯವಾಯಿತು ಎನ್ನುತ್ತಾರೆ ಅರವಿಂದ್.

ನಾನು ಗಾಂಧಿನಗರದ ಹುಡುಗ, ಇದು ನನ್ನ ಮೊದಲ ಚಿತ್ರ, ಹಾಗಾಗಿ ಗಾಂಧಿನಗರದಲ್ಲಿ ಕಟೌಟ್ ಇರಬೇಕು ಎಂಬ ಆಸೆಯಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಕರೋನಾ ಅದಕ್ಕೆಲ್ಲ ಅಡ್ಡಿಪಡಿಸಿದೆ. ಆದರೂ ನಮ್ಮ ಚಿತ್ರ ದೇಶ ವಿದೇಶದಲ್ಲೂ ತೆರೆಗೆ ಬಂದಿರು ವುದು ಸಂತಸ ತಂದಿದೆ ಎನ್ನುತ್ತಾರೆ ಅರವಿಂದ್. ಕಥೆಗೆ ತಕ್ಕಂತೆ ಮೈಕಟ್ಟು ಹೊಂದಿರುವ ಅರವಿಂದ್ ವಿವಿಧ ಶೇಡ್‌ ಗಳಲ್ಲಿ ಮಿಂಚಿದ್ದಾರೆ.