Wednesday, 11th December 2024

ತೆರೆಗೆ ಸಿದ್ದವಾದ ಚಡ್ಡಿದೋಸ್ತ್ ಗಳು

ಈ ಹಿಂದೆ ‘ಆಸ್ಕರ್’, ‘ಮನಸಿನ ಮರೆಯಲಿ’, ‘ಮಿಸ್ ಮಲ್ಲಿಗೆ’, ‘ಮೋನಿಕಾ ಈಸ್ ಮಿಸ್ಸಿಂಗ್’ ಹೀಗೆ ವಿಭಿನ್ನ ಶೈಲಿಯ ಚಿತ್ರಗಳನ್ನು ನಿರ್ದೇಶಿಸಿದ್ದ ಆಸ್ಕರ್ ಕೃಷ್ಣ ಈಗ ಕಾಮಿಡಿ ಥ್ರಿಲ್ಲರ್ ಜಾನರ್‌ನ ‘ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ’ ಚಿತ್ರವನ್ನು ತೆರೆಗೆ ತರು ತ್ತಿದ್ದಾರೆ.

ರೆಡ್ ಅಂಡ್ ವೈಟ್ಖ್ಯಾತಿಯ ಸೆವೆನ್‌ರಾಜ್ ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ. ಆಸ್ಕರ್ ಕೃಷ್ಣ ನಾಯಕನಾಗಿ ನಟಿಸಿ ದ್ದಾರೆ. ಈಗಾಗಲೇ ಚಿತ್ರದ ಡಬ್ಬಿಂಗ್ ಸೇರಿದಂತೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲ ಮುಗಿಸಿರುವ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಇತ್ತೀಚೆಗಷ್ಟೇ ಚಿತ್ರದ ಸೆನ್ಸಾರ್ ಪ್ರಕ್ರಿಯೆ ಸಹ ಪೂರ್ಣಗೊಂಡಿದ್ದು ಸದ್ಯದಲ್ಲೇ ಚಿತ್ರದ ಹಾಡುಗಳು ಬಿಡುಗಡೆಯಾಗಲಿವೆ.

ಕೌಂಡಿನ್ಯ ಅವರ ‘ಮೈ ಡಿಯರ್ ಫ್ರೆಂಡ್’ ಎನ್ನುವ ಕಾದಂಬರಿಯನ್ನು ಆಧರಿಸಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಲೋಕೇಂದ್ರ ಸೂರ್ಯ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಜತೆಗೆ ಚಿತ್ರದ ಮತ್ತೊಂದು ಪ್ರಮುಖ ಪಾತ್ರವನ್ನು ಸಹ ನಿಭಾಯಿಸಿದ್ದಾರೆ.

ಮಲಯಾಳಿ ಚೆಲುವೆ ಗೌರಿನಾಯರ್ ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಅನಂತ್ ಆರ್ಯನ್ ಅವರ ಸಂಗೀತ ಸಂಯೋಜನೆ, ಗಗನ್‌ಕುಮಾರ್ ಛಾಯಾಗ್ರಹಣ, ವೈಲೆಂಟ್ ವೇಲು ಸಾಹಸವಿದೆ.