Saturday, 14th December 2024

ಟ್ರೇಲರ್‌ನಲ್ಲಿ ಪ್ರಜ್ವಲ್‌ ಅಬ್ಬರ

ಕೆ.ರಾಮ್ ನಾರಾಯಣ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಅಬ್ಬರ ಚಿತ್ರ ಮುಂದಿನ ವಾರ ರಾಜ್ಯಾದ್ಯಂತ ತೆರೆಗೆ ಬರಲಿದೆ. ಚಿತ್ರ ರಿಲೀಸ್‌ಗೂ ಮುನ್ನವೇ ಸಖತ್ ಸದ್ದು ಮಾಡುತ್ತಿದೆ. ಟ್ರೇಲರ್ ಮೂಲಕ ಸಿನಿಮಾದ ಒಂದಷ್ಟು ಕಂಟೆಂಟ್ ಜನರಿಗೆ ಪರಿಚಯಿಸ ಲಾಗಿದೆ.

ನಾಯಕನ ತಂದೆ ಅರಿಯದೆಯೇ ಒಂದು ತಪ್ಪು ಮಾಡಿರುತ್ತಾರೆ. ಅದನ್ನು ಸರಿಪಡಿಸುವುಕ್ಕೆ ಹೋಗಿ ಮತ್ತೊಂದು ತಪ್ಪು ಮಾಡುತ್ತಾರೆ. ನಂತರ ಮಗ ಅದನ್ನು ಹೇಗೆ ಸರಿಪಡಿಸುತ್ತಾನೆ ಎಂಬುದೇ ಚಿತ್ರದ ಕಥೆ.

ಸಿ.ಅಂಡ್ ಎಂ.ಮೂವೀಸ್ ಲಾಂಛನದಲ್ಲಿ ಬಸವರಾಜ್ ಮಂಚಯ್ಯ ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ. ಕೌಟುಂಬಿಕ ಕಥೆಯ ಜತೆಗೆ ಕಾಮಿಡಿ ಕಥಾಹಂದರ ಹೊಂದಿ ರುವ ಈ ಚಿತ್ರದಲ್ಲಿ ಪ್ರಜ್ವಲ್ ನಾಯಕನಾಗಿ ನಟಿಸಿದ್ದಾರೆ. ರಾಶಿ ಪೊನ್ನಪ್ಪ, ನಿಮಿಕಾ ರತ್ನಾಕರ್ ಹಾಗೂ ಲೇಖಾಚಂದ್ರ ನಾಯಕಿಯರಾಗಿ ಅಭಿನಯಿಸಿದ್ದಾರೆ. ಉಳಿದಂತೆ ಶೋಭರಾಜ್, ಶಂಕರ್ ಅಶ್ವಥ್, ವಿಕ್ಟರಿವಾಸು, ಕೋಟೆ ಪ್ರಭಾಕರ್ ತಾರಾಬಳಗದಲ್ಲಿದ್ದಾರೆ. ಪ್ರಜ್ವಲ್ ದೇವರಾಜ್ ಇಲ್ಲಿ ಐದು ವಿಭಿನ್ನ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

*

ಅಂದುಕೊಂಡಂತೆ ಚಿತ್ರ ಮೂಡಿಬಂದಿದೆ. ಇಡೀ ಕುಟಂಬ ಸಮೇತ ಕುಳಿತು ನೋಡುವ ಕಥೆ ಇದಾಗಿದೆ. ಸಿನಿಮಾದಲ್ಲಿ
ಯಾವುದೇ ಕೊರತೆ ಕಾಣಿಸದಂತೆ, ಕಥೆ ಬಯಸಿದ್ದನ್ನಲೆಲ್ಲಾ ಒದಗಿಸಿದ್ದೇವೆ. ಎರಡು ಹಾಡುಗಳನ್ನು ಥೈಲ್ಯಾಂಡ್‌ನಲ್ಲಿ
ಚಿತ್ರೀಕರಿಸಿದ್ದೇವೆ.

-ಬಸವರಾಜ್ ಮಂಚಯ್ಯ ನಿರ್ಮಾಪಕ