Thursday, 3rd October 2024

ಮೂರು ಕೃಷಿ ಕಾನೂನು ಹಿಂಪಡೆತ, ಇದು ರೈತರ ಗೆಲುವು: ನಟಿ ರಿಚಾ ಚಡ್ಡಾ

ಮುಂಬೈ: ಬಾಲಿವುಡ್ ನ ರಿಚಾ ಚಡ್ಡಾ, ತಾಪ್ಸಿ ಪನ್ನು, ಸೋನು ಸೂದ್ ಮತ್ತು ಗುಲ್ ಪನಾಗ್ ಸೇರಿದಂತೆ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಶುಕ್ರವಾರ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ಪ್ರಧಾನಿ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

ಟ್ವಿಟರ್‌ನಲ್ಲಿ ರಿಚಾ ಚಡ್ಡಾ ಅವರು, ಇದು ರೈತರ ಗೆಲುವು ಎಂದು ಕರೆದಿದ್ದಾರೆ. ‘ಜೀತ್ ಗಯೇ ಆಪ್! ಆಪ್ ಕಿ ಜೀತ್ ಸಬ್ ಕಿ ಜೀತ್ ಹೈ (ನೀನು ಗೆದ್ದಿರುವೆ. ನೀನು ಗೆದ್ದಿರುವುದು ಎಲ್ಲರ ಗೆಲುವು)’ ಎಂದು ಟ್ವೀಟ್ ಮಾಡಿದ್ದಾರೆ. ತಾಪ್ಸಿ ಪನ್ನು ಎಲ್ಲರಿಗೂ ಗುರುನಾನಕ್ ಜಯಂತಿಯ ಶುಭಾಶಯಗಳು’ ಎಂದು ಬರೆದಿದ್ದಾರೆ.

‘ಇದೊಂದು ಅದ್ಭುತ ಸುದ್ದಿ! ಕೃಷಿ ಕಾನೂನುಗಳನ್ನು ಹಿಂಪಡೆದಿದ್ದಕ್ಕಾಗಿ ಧನ್ಯವಾದ ಗಳು, ರೈತರೇ, ಶಾಂತಿಯುತ ಪ್ರತಿಭಟನೆಗಳ ಮೂಲಕ ನ್ಯಾಯಯುತ ಬೇಡಿಕೆಗಳನ್ನು ಎತ್ತಿದ್ದಕ್ಕಾಗಿ ಧನ್ಯವಾದಗಳು ಎಂದು ಸೋನು ಸೂದ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.