Wednesday, 11th December 2024

ಖಡ್ಗ ಹಿಡಿದು ಅಧೀರ ಪ್ರತ್ಯಕ್ಷ

ಬಾಲಿವುಡ್ ಖಳನಾಯಕ್ ಸಂಜಯ್‌ದತ್ ಅವರಿಗೆ ಜನುಮ ದಿನದ ಸಂಭ್ರಮ. 62 ನೇ ವಸಂತಕ್ಕೆ ಕಾಲಿಟ್ಟ ಸಂಜಯ್ ದತ್‌ಗೆ ಕೆಜಿಎಫ್ ಚಾಪ್ಟರ್ 2 ಚಿತ್ರತಂಡ ದಿಂದ ಭರ್ಜರಿ ಗಿಫ್ಟ್ ಸಿಕ್ಕಿದೆ. ಈ ಚಿತ್ರದಲ್ಲಿ ಸಂಜಯ್ ದತ್ ಅಧೀರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಈ ಪಾತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿದ್ದು,
ಇದನ್ನು ನೋಡಿದ ಅಭಿಮಾನಿಗಳು ಸಂಜುಗೆ ಬಹು ಪರಾಕ್ ಎಂದಿದ್ದಾರೆ. ಈ ಪೋಸ್ಟರ್‌ನಲ್ಲಿ ಖಡ್ಗ ಹಿಡಿದ ಅಧೀರ ಗಮನಸೆಳೆಯುತ್ತಾರೆ.

ಖಡಕ್ ಲುಕ್ ಬೆಚ್ಚಿ ಬೀಳಿಸುವಂತಿದೆ. ಚಿತ್ರದಲ್ಲಿ ಸಂಜಯ್ ದತ್ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಬರೀ ವಿಲನ್ ಮಾತ್ರವಲ್ಲ ಕ್ರೂರತೆ ಮೆರೆಯುವ ಖಳನಟ ನಾಗಿ ಆರ್ಭಟ ತೋರಲಿದ್ದಾರೆ. ಈ ಹಿಂದೆ ಅಧೀರನ ಲುಕ್ ಬಿಡುಗಡೆಯಾಗಿದ್ದರು, ಮುಖದ ಭಾಗ ತೋರಿಸಿರಲಿಲ್ಲ, ಯಶ್ ಹುಟ್ಟಹಬ್ಬದಂದು ಬಿಡುಗಡೆಯಾದ ಟೀಸರ್ ನಲ್ಲೂ ಅಧೀರನ ದರ್ಶನವೇ ಆಗಲಿಲ್ಲ. ಈಗ ಕಡೆಗೂ ಅಧೀರನ ಮುಖ ದರ್ಶನವಾಗಿದೆ.

ಹೊಸ ಲುಕ್ ನೋಡಿ ಅಭಿಮಾನಿಗಳು ಬೆಚ್ಚಿ ಬಿದ್ದಿದ್ದಾರೆ. ನರಾಚಿ ಎಂಬ ನರಕ ಸದೃಶ ಕೋಟೆಯನ್ನು ತನ್ನ ವಶಕ್ಕೆ ಪಡೆಯಲು ಅಧೀರ ಏನೆಲ್ಲಾ ಪ್ರಯತ್ನ ಮಾಡುತ್ತಾನೆ. ಅದಕ್ಕಾಗಿ ಆತ ಮೆರೆಯುವ ಕ್ರೌರ್ಯ ಎಂತಹದ್ದು ಎಂಬುದನ್ನು ತೆರೆಯಲ್ಲಿಯೇ ನೋಡಬೇಕಂತೆ. ಇದಕ್ಕೆ ಪೂರಕ ಎಂಬಂತೆ ಪೋಸ್ಟರ್‌ನ ಕೆಳಗಿರುವ ಯುದ್ಧವು ಪ್ರಗತಿಗಾಗಿ ಆಗಿದೆ. ಇದನ್ನು ರಣಹದ್ದುಗಳು ಸಹ ನನ್ನೊಂದಿಗೆ ಅಪ್ಪುತ್ತವೆ ಎಂಬ ಕ್ಯಾಪ್ಷನ್ ಅಽರನ ಪಾತ್ರದ ಬಗ್ಗೆ ಮತ್ತಷ್ಟು ಕುತೂಹಲ
ಮೂಡಲು ಕಾರಣವಾಗಿದೆ.

ಹೊಸ ಪೋಸ್ಟರ್ ಶೇರ್ ಮಾಡಿರುವ ಸಂಜಯ್ ದತ್, ಕೆಜಿಎಫ್ ಚಾಪ್ಟರ್ 2 ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಹೊಂದಿದ್ದಾರೆ. ಚಿತ್ರದ ಬಿಡುಗಡೆಗೆ ನಾನು ಕಾತರ ನಾಗಿದ್ದೇನೆ ಎಂದು ತಿಳಿಸಿದ್ದಾರೆ. ಕೆಜಿಎಫ್ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ಕನ್ನಡ, ತೆಲುಗು, ತಮಿಳು, ಮಲಯಾಂ ಹಾಗೂ ಹಿಂದಿಯಲ್ಲೂ ಬಿಡುಗಡೆ ಯಾಗಲಿದೆ. ಹಿಂದಿಯಲ್ಲಿ ಅಧೀರನ ಪಾತ್ರಕ್ಕೆ ಸಂಜಯ್ ದತ್ ಅವರೇ ಡಬ್ ಮಾಡುತ್ತಿದ್ದಾರೆ.

ಗಮನಸೆಳೆದ ರಮಿಕಾ ಸೇನ್ ಕೆಜಿಎಫ್ ಚಾಪ್ಟರ್ 2 ನಲ್ಲಿ ಬಾಲಿವುಡ್ ನಟಿ ರವೀನಾ ಟಂಡನ್ ನಟಿಸಿದ್ದಾರೆ. ಪ್ರಧಾನಿ ರಮಿಕಾ ಸೇನ್ ಪಾತ್ರದಲ್ಲಿ ರವೀನಾ ಬಣ್ಣ ಹಚ್ಚಿದ್ದು, ಈ ಪಾತ್ರವೂ ಪ್ರಮುಖವಾಗಿರಲಿದೆ. ಈಗ ರಮಿಕಾ ಸೇನ್ ಮೇಕಿಂಗ್ ವಿಡಿಯೊ ರಿಲೀಸ್ ಆಗಿದ್ದು, ಸಖತ್ ವೈರಲ್ ಆಗುತ್ತಿದೆ. ರವೀನಾ ಲುಕ್ ಗಮನ ಸೆಳೆಯುತ್ತಿದೆ. ಡಿಸೆಂಬರ್‌ಗೆ ಕೆಜಿಎಫ್ 2 ತೆರೆಗೆ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಜುಲೈನಲ್ಲೇ ಕೆಜಿಎಫ್ ೨ ಭರ್ಜರಿಯಾಗಿ ತೆರೆಗೆ ಬರಬೇಕಿತ್ತು. ಆದರೆ ಕರೋನಾ ಕಾರಣದಿಂದಾಗಿ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿತ್ತು.

ಡಿಸೆಂಬರ್‌ನಲ್ಲಿ ಚಿತ್ರ ತೆರೆಗೆ ಬರಬಹುದು ಎಂಬ ಮಾಹಿತಿಯೂ ಇದೆ. ಡಿಸೆಂಬರ್ ಕನ್ನಡ ಚಿತ್ರರಂಗದ ಪಾಲಿಗೆ ಲಕ್ಕಿ ತಿಂಗಳು. ಕೆಜಿಎಫ್ ಚಾಪ್ಟರ್ 1 ಕೂಡ ಡಿಸೆಂಬರ್‌ನಲ್ಲಿಯೇ ತೆರೆಕಂಡು ಹೊಸ ದಾಖಲೆ ಬರೆದಿತ್ತು. ಹಾಗಾಗಿ ಕೆಜಿಎಫ್ ಚಾಪ್ಟರ್ ೨ ಕೂಡ ಡಿಸೆಂಬರ್‌ನಲ್ಲಿಯೇ ತೆರೆಗೆ ಬರಲಿದೆ ಎನ್ನಲಾಗುತ್ತಿದೆ. ಮುಂದಿನ ದಿನಗಳಲ್ಲಿ ಚಿತ್ರದ ಬಿಡುಗಡೆಯ ದಿನಾಂಕ ಅಧಿಕೃತವಾಗಿ ಘೋಷಣೆಯಾಗಲಿದೆ.