Friday, 13th December 2024

ಅಪ್ಪು ಕುಟುಂಬಕ್ಕೆ ಅಲ್ಲು ಅರ್ಜುನ್‌ ಸಾಂತ್ವನ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನಗಲಿ ಮೂರು ತಿಂಗಳುಗಳೇ ಕಳೆದಿವೆ. ಇಂದಿಗೂ ದೂರದೂರಿ ನಿಂದ ಅಭಿಮಾನಿಗಳು ಆಗಮಿಸಿ ಪುನೀತ್ ಸಮಾಧಿಅಯ ದರ್ಶನ ಮಾಡುತ್ತಿದ್ದಾರೆ.

ಇನ್ನು ಪರ ಭಾಷಾ ನಟ, ನಟಿಯರೂ ಕೂಡ ಪುನೀತ್ ಮನೆಗೆ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಳುತ್ತಿದ್ದಾರೆ. ತೆಲುಗು ನಟ ಅಲ್ಲು ಅರ್ಜುನ್ ಪುನೀತ್ ರಾಜ್‌ಕುಮಾರ್ ಅವರ ಮನೆಗೆ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಮನೆಯಲ್ಲಿ ಅಪ್ಪು ಭಾವಚಿತ್ರಕ್ಕೆ ನಮಿಸಿ ಭಾವುಕರಾದರು. ಬಳಿಕ ಕಂಠೀರವ ಸ್ಟುಡಿಯೋಗೆ ತೆರಳಿ, ಅಪ್ಪು ಸಮಾಧಿ ದರ್ಶನ ಮಾಡಿದರು. ಈ ವೇಳೆ ಅಲ್ಲು ಕಂಗಳಲ್ಲಿ ಕಣ್ಣೀರು ತುಂಬಿತ್ತು.

ಡಾ.ರಾಜ್‌ಕುಮಾರ್, ಪಾರ್ವತಮ್ಮ ರಾಜ್‌ಕುಮಾರ್ ಹಾಗೂ ಅಂಬರೀಷ್ ಅವರ ಸಮಾಧಿಗೂ ತೆರಳಿ ನಮಿಸಿದರು. ಈ ಸಂದರ್ಭ ಮಾತನಾಡಿದ ಅಲ್ಲು ಅರ್ಜುನ್, ಅಪ್ಪು ಹಾಗೂ ನನ್ನ ನಡುವೆ ಒಳ್ಳೆಯ ಗೆಳೆತನವಿತ್ತು. ಹೈದರಾಬಾದ್‌ಗೆ ಬಂದಾಗ ಭೇಟಿಯಾಗುತ್ತಿದ್ದೆವು. ಅಲಾ ವೈಕುಟುಂಬ ಪುರಮಲೋ
ಸಿನಿಮಾ ಬಿಡುಗಡೆಯಾದಾಗ ಅಪ್ಪು ನನಗೆ ಕರೆ ಮಾಡಿ ಶುಭಕೋರಿದ್ದರು. ಆ ಬಳಿಕ ಬಿಡುವು ಮಾಡಿಕೊಂಡು ಭೇಟಿಯಾಗಬೇಕು ಎಂದುಕೊಂಡಿದ್ದೆವು. ಆದರೆ ಕರೋನಾ ಕಾಡಿದ್ದರಿಂದ ಭೇಟಿಯಾಗಲು ಸಾಧ್ಯ ವಾಗಲೇ ಇಲ್ಲ.

ಅಪ್ಪು ಅವರನ್ನು ಕಳೆದುಕೊಂಡಿದ್ದು ಅಪಾರ ನೋವು ತಂದಿದೆ ಎಂದು ಅಲ್ಲು ಅರ್ಜುನ್ ದುಃಖ ವ್ಯಕ್ತಪಡಿಸಿದರು. ಇದಕ್ಕೂ ಮೊದಲು ಶಿವ ರಾಜ್‌ಕುಮಾರ್ ಅವರ ಮನೆಗೆ ಭೇಟಿ ನೀಡಿದ ಅಲ್ಲು ಅರ್ಜುನ್, ಶಿವಣ್ಣನಿಗೆ ಸಾಂತ್ವನ ಹೇಳಿದರು. ಅವರೊಂದಿಗೆ ಒಂದಷ್ಟು ಹೊತ್ತು ಮಾತುಕತೆ ನಡೆಸಿದರು.