Wednesday, 11th December 2024

ಕತ್ರಾ ಡೇಂಜರಸ್‌ನಲ್ಲಿ ಆಪ್ಸರಾ

ಟಾಲಿವುಡ್ ಮತ್ತು ಬಾಲಿವುಡ್‌ನಲ್ಲಿ ಪ್ರಸಿದ್ಧಿ ಪಡೆದಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮ ಈ ಬಾರಿ ಸಲಿಂಗಕಾಮಿ ಕಥೆಯನ್ನು ಹೊಂದಿರುವ ಕತ್ರಾ ಡೇಂಜರಸ್ ಚಿತ್ರವನ್ನು ತೆರೆಗೆ ತರಲು ಸಿದ್ಧತೆ ನಡೆಸಿದ್ದಾರೆ.

ಚಿತ್ರದ ಚಿತ್ರೀಕರಣವು ಮುಕ್ತಾಯವಾಗಿದ್ದು, ಏಪ್ರಿಲ್ ೮ರಂದು ಕತ್ರಾ ಡೇಂಜ ರಸ್ ವಿಶ್ವದಾದ್ಯಂತ ರಿಲೀಸ್ ಆಗಲಿದೆ. ಕನ್ನಡ ಸೇರಿದಂತೆ ತೆಲುಗು, ಹಿಂದಿ, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ಚಿತ್ರ ನಿರ್ಮಾಣವಾಗಿದೆ. ಸದ್ಯ ಟ್ರೇಲರ್ ರಿಲೀಸ್ ಆಗಿದ್ದು, ರಾ ಆಗಿ ಮೂಡಿಬಂದಿದೆ. ಹಸಿ ಬಿಸಿ ದೃಶ್ಯಗಳೇ ಟ್ರೇಲರ್‌ನಲ್ಲಿ ಹೆಚ್ಚಾಗಿವೆ. ಸೆಕ್ಷನ್ 377ರ ಪ್ರಕಾರ ಸಲಿಂಗಿಗಳು ಪರಸ್ಪರ ಪ್ರೀತಿ ಮಾಡುವುದು ಅಪರಾಧವಲ್ಲ ಎಂದು ಸುಪ್ರಿಂ ಕೋರ್ಟ್ 2018ರಲ್ಲಿ ಮಹತ್ವದ ತೀರ್ಪು ನೀಡಿತ್ತು. ಇದನ್ನೇ ಆಧರಿಸಿ ಚಿತ್ರದ ಕಥೆ ಹೆಣೆಯಲಾಗಿದೆ.

ಇಬ್ಬರು ಹೆಣ್ಣು ಮಕ್ಕಳ ಸಲಿಂಗಿ ಜೀವಿಗಳ ಬದುಕಿನಲ್ಲಿ ನಡೆದಿರುವ ಕಾಲ್ಪನಿಕ ಘಟನೆಗೆ ಆಕ್ಷನ್, ಕ್ರೈಂ ಸನ್ನಿವೇಶಗಳನ್ನು
ಸೇರಿಸಲಾಗಿದೆ. ಇಲ್ಲಿ ಮನರಂಜನೆಗಿಂತ ಸಲಿಂಗಿ ಪ್ರೇಮವನ್ನೇ ತೋರಿಸಿದ್ದಾರೆ ರಾಮ್ ಗೋಪಾಲ್ ವರ್ಮ. ರಿಂಪಿ ಆರ್ಟ್ಸ್ ಮಿಡಿಯಾ ಅಂಡ್ ರಿಂಪಿ ಆರ್ಟ್ಸ್ ಇಂಟರ್‌ನ್ಯಾಷನಲ್ ಪ್ರೊಡಕ್ಷನ್ ಸಂಸ್ಥೆ ಯು ನಿರ್ಮಾಣದ ಜವಬ್ದಾರಿಯನ್ನು ಹೊತ್ತು ಕೊಂಡಿದೆ.

ಸಲಿಂಗ ಕಾಮಿಗಳು, ಲೈಂಗಿಕ ಕಾರ್ಯಕರ್ತರನ್ನು ಸಮಾಜವು ನೋಡುವ ರೀತಿಯೇ ಬೇರೆಯಾಗಿದೆ. ಇನ್ನಾದರೂ ಅವರನ್ನು ನೋಡುವ ರೀತಿ ಬದಲಾಗಬೇಕು. ಸಲಿಂಗಿಗಳದ್ದೂ ಪ್ರೇಮಕಥೆಯಾಗಿ ಉಳಿಯಬೇಕು, ಕಾಮ ಕಥೆಯಾಗಿಯಲ್ಲ ಎಂಬುದನ್ನು ರಾಮ್‌ಗೋಪಾಲ್ ವರ್ಮ ಈ ಚಿತ್ರದಲ್ಲಿ ಹೇಳಲು ಹೊರಟ್ಟಿದ್ದಾರೆ. ಈ ವರ್ಗದ ಜನರನ್ನು ದೋಷಿಸದೆ, ಸಾಮಾಜಿಕ ನ್ಯಾಯ ನೀಡಬೇಕು ಎಂಬುದರ ಅರಿವು ಮೂಡಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.

ಬೋಲ್ಡ್ ಲುಕ್‌ನಲ್ಲಿ ಮಿಂಚಿ ಪಡ್ಡೆ ಹುಡುಗರ ನಿದ್ದೆಗೆಡಿಸಿರುವ ಅಪ್ಸರಾ ರಾಣಿ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇವರ ಜತೆಗೆ ನೈನಾ ಗಂಗೂಲಿ ಕೂಡ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿ ದ್ದಾರೆ. ಉಳಿದಂತೆ ರಾಜ್‌ಪಾಲ್ ಯಾದವ್, ಘಾಜಿ, ಮಿಥುನ್ ಪುರಂದರಿ ನಟಿಸಿದ್ದಾರೆ. ಪ್ರವೀಣ್ ಪೌಲ್ ಸಂಗೀತ, ಮಲ್ ಹಾರ‍್ಬತ್ ಜೋಷಿ ಛಾಯಾಗ್ರಹಣ, ಕಮಲ್ ರಮದುಗು ಸಂಕಲನ
ಈ ಚಿತ್ರಕ್ಕಿದೆ. ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆದಿದೆ.