Saturday, 14th December 2024

ಬೋಲ್ಡ್ ಲುಕ್‌ನಲ್ಲಿ ಆಶಿಕಾ ರಂಗನಾಥ್

ಮುಗುಳುನಗೆ ಬೆಡಗಿ ಆಶಿಕಾ ರಂಗನಾಥ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇವರ ಜನುಮ ದಿನಕ್ಕೆ ಮದಗಜ ತಂಡ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಭರ್ಜರಿ ಉಡುಗೊರೆ ನೀಡಿದೆ.

ಸದ್ಯ ರಿಲೀಸ್ ಆಗಿರುವ ಹೊಸ ಪೋಸ್ಟರ್ ನಲ್ಲಿ ಸಿಗರೇಟು ಹಿಡಿದ ಆಶಿಕಾ, ಪ್ರೇಕ್ಷರನ್ನು ನಿಬ್ಬೆರಗಾಗಿಸಿದ್ದಾರೆ. ಆಶಿಕಾ ಹೊಸ ಲುಕ್ ನೋಡಿದ ಪ್ರೇಕ್ಷಕರು ಅಯ್ಯೋ.. ಇದೇನಿದು ಆಶಿಕಾ ಕೈಯಲ್ಲಿ ಸಿಗರೇಟು ಎಂದು ಉದ್ಘರಿಸುತ್ತಿದ್ದಾರೆ. ಮದಜಗ ಚಿತ್ರದಲ್ಲಿ ನಾಯಾಕಿಯಾಗಿ ನಟಿಸುತ್ತಿರುವ ಆಶಿಕಾ, ಎರಡು ವಿಭಿನ್ನ ಶೇಡ್‌ ನಲ್ಲಿ ಕಂಗೊಳಿಸಿದ್ದಾರೆ. ಹಳ್ಳಿ ಹುಡುಗಿಯಾಗಿ ಮತ್ತು ಬೋಲ್ಡ್ ಗರ್ಲ್ ಆಗಿ, ಗ್ಲಾಮರ್ ಲುಕ್‌ನಲ್ಲಿ ಗಮನಸೆಳೆಯಲಿದ್ದಾರೆ. ಈ ಹಿಂದೆಯೇ ಆಶಿಕಾ ಹಳ್ಳಿ ಹುಡುಗಿಯಾಗಿ ಲಂಗ ದಾವಣಿ ತೊಟ್ಟ ಪೋಸ್ಟರ್ ಬಿಡುಗಡೆಗೊಳಿಸಲಾಗಿತ್ತು. ಈಗ ಬೋಲ್ಡ್ ಲುಕ್ ರಿವಿಲ್ ಆಗಿದೆ.

ರೋರಿಂಗ್ ಸ್ಟಾರ್ ಶ್ರೀಮುರಳಿ ನಟಿಸುತ್ತಿರುವ ಮದಗಜ ಕೊನೆಯ ಹಂತದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ. ಅಯೋಗ್ಯ ಚಿತ್ರವನ್ನು ನಿರ್ದೇಶಿಸಿ ಯಶಸ್ವಿಯಾದ ಮಹೇಶ್ ಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಜತೆಗೆ ರೆಮೊ ಚಿತ್ರದಲ್ಲಿಯೂ ಆಶಿಕಾ ನಟಿಸಿದ್ದು, ರೆಮೊ ಚಿತ್ರತಂಡ ಆಶಿಕಾ ಪೋಸ್ಟರ್ ಬಿಡುಡೆಗೊಳಿಸಿ ಶುಭಕೋರಿದೆ.