Wednesday, 11th December 2024

ಅದ್ದೂರಿಯಾಗಿ ಬರಲಿದ್ದಾನೆ ಅವತಾರ ಪುರುಷ

ಬಹುದಿನಗಳ ಬಳಿಕ ಶರಣ್ ಹೊಸ ಅವತಾರವೆತ್ತೆದ್ದು ತೆರೆಗೆ ಬರಲು ಸಿದ್ಧವಾಗಿದ್ದಾರೆ. ಅವತಾರ ಪುರುಷನಾಗಿ ತೆರೆಗೆ ಎಂಟ್ರಿ ಕೊಡಲಿದ್ದಾರೆ. ಟೈಟಲ್ ಮೂಲಕವೇ ಸದ್ಧು ಮಾಡಿದ್ದ ಈ ಸಿನಿಮಾ ಬಹಳ ಕುತೂಹಲ ಕೆರಳಿಸಿದೆ.

ಇನ್ನು ಸಿಂಪಲ್ ಸುನಿ ನಿರ್ದೇಶನದಲ್ಲಿ ಈ ಚಿತ್ರದ ಮೂಡಿಬಂದಿದೆ. ಹಾಗಾಗಿ ಚಿತ್ರದಲ್ಲಿ ಗಟ್ಟಿ ಕಥೆ ಇರುವುದು ಖಚಿತವಾಗಿದೆ.
ಅವತಾರ ಪುರುಷನ ಚಿತ್ರದಲ್ಲಿಯೂ ಭರಪೂರ ಕಾಮಿಡಿ ಇದೆ. ಜತೆಗೆ ಸಸ್ಪೆನ್ಸ್, ಥ್ರಿಲ್ಲರ್ ಕಥೆಯೂ ಅಡಕವಾಗಿದೆ. ಅದು ಈಗಾಗಲೇ ರಿಲೀಸ್ ಆಗಿರುವ ಟೀಸರ್‌ನಲ್ಲಿ ಸ್ಪಷ್ಟವಾಗಿದೆ. ಈ ಚಿತ್ರದಲ್ಲಿ ಶರಣ್ ಸಾದಾ ಸೀದ ಅಭಿನಯದ ಮೂಲಕ ಪ್ರೇಕ್ಷಕ ರನ್ನು ನಗಿಸುತ್ತಾರೆ. ಶರಣ್‌ಗೆ ಜತೆಯಾಗಿ ಮುಗುಳುನಗೆ ಬೆಡಗಿ ಆಶಿಕಾ ರಂಗನಾಥ್ ನಟಿಸಿದ್ದಾರೆ.

ರ‍್ಯಾಂಬೋ ೨ ಬಳಿಕ ಈ ಜೋಡಿ ಮತ್ತೆ ಒಂದಾಗಿದೆ. ವಾಮಾಚಾರದ ಕುರಿತಾದ ಕಥೆಯೂ ಈ ಚಿತ್ರದಲ್ಲಿದೆ. ಅದು ಈಗಾಗಲೇ ಸ್ಪಷ್ಟವಾಗಿದೆ. ಶ್ರೀನಗರ ಕಿಟ್ಟಿ ಈ ಚಿತ್ರದಲ್ಲಿ ಮಂತ್ರವಾದಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆಯೇ ಅವರ ಫಸ್ಟ್ ಲುಕ್ ರಿಲೀಸ್ ಆಗಿದ್ದು ಕುತೂಹಲ ಮೂಡಿಸಿತ್ತು. ಹಿಎಇಯ ನಟ ಸಾಯಿಕುಮಾರ್ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಅವತಾರಪುರುಷ ಎರಡು ಭಾಗದಲ್ಲಿ ಮೂಡಿಬರಲಿದೆ. ಮೊದಲ ಭಾಗ ತೆರೆಗೆ ಸಿದ್ಧವಾಗಿದ್ದು, ಮುಂದಿನ ಶುಕ್ರವಾರ ರಾಜ್ಯಾ ದ್ಯಂತ ಬಿಡುಗಡೆಯಾಗಲಿದೆ. ಎರಡನೇ ಭಾಗದ ಚಿತ್ರೀಕರಣವೂ ಬಹುತೇಕ ಮುಕ್ತಾಯವಾಗಿದ್ದು, ಈ ವರ್ಷದಲ್ಲಿಯೇ ತೆರೆಗೆ ಬರುವ ಸಾಧ್ಯತೆ ಇದೆ.

ಅವತಾರಪುರುಷ ಬಿಡುಗಡೆಗೂ ಮುನ್ನವೇ ಚಿತ್ರದ ಸ್ಯಾಟಲೈಟ್ ಹಕ್ಕು ಹಾಗೂ ಡಿಜಿಟಲ್ ಹಕ್ಕು ಭಾರೀ ಬೆಲೆಗೆ ಮಾರಾಟವಾಗಿವೆ. ಇದು ಚಿತ್ರತಂಡಕ್ಕೆ ಮತ್ತಷ್ಟು ಸಂತಸ ತಂದಿದೆ. ಹೈಬಜೆಟ್ ಚಿತ್ರಗಳನ್ನು ನಿರ್ಮಿಸಿ ಸೈ ಎನಿಸಿಕೊಂಡಿರುವ ಪುಷ್ಕರ್ ಮಲ್ಲಿಕಾ ರ್ಜನಯ್ಯ ಈ ಚಿತ್ರಕ್ಕೂ ಬಂಡವಾಳ ಹೂಡಿದ್ದಾರೆ.