Wednesday, 11th December 2024

ಕ್ರಿಸ್‌ಮಸ್‌ಗೆ ಬಡವ ರಾಸ್ಕಲ್‌

ಡಾಲಿ ಧನಂಜಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವುಗಳಲ್ಲಿ ಕೆಲವೊಂದು ಚಿತ್ರಗಳು ಚಿತ್ರೀಕರಣ ಮುಗಿಸಿ ತೆರೆಗೆ ಸಿದ್ಧವಾಗಿವೆ.
ಅವುಗಳಲ್ಲಿ ‘ರತ್ನನ್ ಪ್ರಪಂಚ’ ಈಗಾಗಲೇ ಬಿಡುಗಡೆಯ ದಿನಾಂಕವನ್ನು ಘೋಷಿಸಿದೆ.

ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿಲ್ಲ ಬದಲಾಗಿ ಒಟಿಟಿಯಲ್ಲಿ ‘ರತ್ನನ್ ಪ್ರಪಂಚ’ ಅನಾವರಣಗೊಳ್ಳಲಿದೆ. ದೊಡ್ಡ ಪರದೆಯಲ್ಲಿ ಚಿತ್ರವನ್ನು ಕಣ್ತುಂಬಿಕೊಳ್ಳಬೇಕು ಎಂದು ಕಾದು ಕುಳಿತಿದ್ದ ಧನಂಜಯ ಅಭಿಮಾನಿಗಳಿಗೆ ಇದು ನಿರಾಸೆ ಮೂಡಿಸಿದೆ. ಡಾಲಿಯ ಮುಂದಿನ ಸಿನಿಮಾಗಳು ಒಟಿಟಿಯಲ್ಲಿಯೇ ಬಿಡುಗಡೆಯಾಗಬಹುದೇ ಎಂದು ಅಂದುಕೊಳ್ಳುತ್ತಿರುವುವಾಗಲೇ ಡಾಲಿ ಧನಂಜಯ ಅಭಿಮಾನಿಗಳಿಗೆ ಸಂತದ ಸುದ್ಧಿ ಸಿಕ್ಕಿದೆ. ಅದು ಬಹುನಿರೀಕ್ಷೆಯ ‘ಬಡವ ರಾಸ್ಕಲ್’ ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆಯಾಗಿದೆ.

ಡಿಸೆಂಬರ್ ೨೪ ರ ಕ್ರಿಸ್‌ಮಸ್ ಶುಭದಿನದಂದೇ ಚಿತ್ರ ತೆರೆಗೆ ಬರಲಿದೆ. ಅದು ಚಿತ್ರಮಂದಿರದಲ್ಲೇ ಚಿತ್ರವನ್ನು ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಟೈಟಲ್‌ನಲ್ಲೇ ಕುತೂಹಲ ಮೂಡಿಸಿದ್ದ ಬಡವ ರಾಸ್ಕಲ್, ಹಾಡಿನ ಮೂಲಕವೂ ಗಮನಸೆಳೆದಿದೆ. ಚಿತ್ರದ ‘ಉಡುಪಿ ಹೊಟೇಲ್…’ ಹಾಡು ಅದಾಗಲೇ
ಸಂಗೀತ ಪ್ರಿಯರನ್ನು ಸೆಳೆದಿದೆ.