Wednesday, 11th December 2024

ಕಾಕ್‌ಟೇಲ್‌ ಫಸ್ಟ್ ಲುಕ್ ರಿಲೀಸ್‌

ವಿಭಿನ್ನ ಶೀರ್ಷಿಕೆಯ ಕಾಕ್‌ಟೇಲ್ ಚಿತ್ರದ ಚಿತ್ರೀಕರಣ ಮುಕ್ತವಾಗಿದ್ದು, ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಬ್ಯುಸಿಯಾಗಿದೆ. ಸದ್ಯ ಚಿತ್ರದ ಫಸ್ಟ್‌ಲುಕ್ ರಿಲೀಸ್ ಆಗಿದೆ.

ನಿರ್ದೇಶಕ ಜೋಗಿ ಪ್ರೇಮ್ ಫಸ್ಟ್‌ಲುಕ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ಫಸ್ಟ್‌ಲುಕ್ ನೋಡಿದ ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೊಂದು ಸೆಸ್ಪೆನ್ಸ್ ಥ್ರಿಲ್ಲರ್ ಹಾಗೂ ಮರ್ಡರ್ ಮಿಸ್ಟರಿ ಕಥೆಯನ್ನು ಒಳಗೊಂಡಿದೆ. ಒಂದೇ ಹೆಸರಿನ ಮತ್ತು ವಯಸ್ಸಿನ ಹಲವು ಹುಡುಗಿಯರ ಸರಣಿ ಕೊಲೆಯ ಸುತ್ತ ಚಿತ್ರದ ಕಥೆ ಸಾಗುತ್ತದೆ. ಆದರೆ ಕ್ಲೈಮ್ಯಾಕ್ಸ್‌ನಲ್ಲಿ ಬೇರೆಯದೆ ಷಯಗಳು ತೆರೆದುಕೊಳ್ಳುತ್ತವೆ. ಅನೇಕ ಅಂಶಗಳನ್ನು ಬೆರೆಸಿ ಕಾಕ್‌ಟೇಲ್ ಪಾನೀಯದ ರೀತಿಯಲ್ಲಿ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ.

ಗಣೇಶನ ಹಬ್ಬಕ್ಕೆ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. ಶ್ರೀರಾಮ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿ ದ್ದಾರೆ. ರೇನ್ ಕೇಶವ್ ನಾಯಕನಾಗಿ ನಟಿಸಿದ್ದು, ಚರಿಷ್ಮಾ ನಾಯಕಿ ಕಾಣಿಸಿಕೊಳ್ಳುತ್ತಿದ್ದಾರೆ. ಶೋಭರಾಜ್, ರಮೇಶ್ ಪಂಡಿತ್, ಮಹಾಂತೇಶ್ ರೇಮಠ್, ಶಿವಮಣಿ, ಚಂದ್ರಕಲಾ ಮೋಹನ್, ಕರಿಸುಬ್ಬು, ಮುಂತಾ ದವರು ಚಿತ್ರದ ತಾರಗಣದಲ್ಲಿದ್ದಾರೆ.

ಹೃದಯಶಿವ- ಸಿರಾಜ್ ಸಾಹಿತ್ಯದ ಗೀತೆಗಳಿಗೆ ಅರ್ಮಾನ್ ಮಲ್ಲಿಕ್, ಅನುರಾಧ ಭಟ್ ಧನಿಯಾಗಿದ್ದಾರೆ. ಲೋಕಿತವಸ್ಯ
ಸಂಗೀತ ಸಂಯೋಜಿಸಿದ್ದಾರೆ. ರವಿವರ್ಮ ಛಾಯಾಗ್ರಹಣ, ಮೋಹನ್.ಬಿ.ರಂಗಕಹಳೆ ಸಂಕಲನ, ನರಸಿಂಹ ಸಾಹಸ, ಸುನಿಲ್
ನೃತ್ಯನಿರ್ದೇಶನ ಈ ಚಿತ್ರಕ್ಕಿದೆ. ಜಯಲಕ್ಷೀ ಕಂಬೈನ್ಸ್ ಬ್ಯಾನರ್‌ನಲ್ಲಿ ಡಾ.ಶಿವಪ್ಪ ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ.