Friday, 13th December 2024

ಡಿಸೆಂಬರ್ 24 ಫಸ್‌ಟ್‌ ಲುಕ್ ರಿಲೀಸ್

ಈಗಾಗಲೇ ಕನ್ನಡದಲ್ಲಿ ಹಲವಾರು ಚಿತ್ರಗಳಿಗೆ ಸಹನಿರ್ದೇಶಕರಾಗಿ ಕೆಲಸ ಮಾಡಿರುವ ನಾಗರಾಜ್ ಎಂ.ಗೌಡ ಇದೇ ಮೊದಲಬಾರಿಗೆ ಕಥೆ ಬರೆದು ನಿರ್ದೇಶನ ಮಾಡುತ್ತಿಿರುವ ಚಿತ್ರ ‘ಡಿಸೆಂಬರ್ 24’. ಈ ಚಿತ್ರದ ಫಸ್‌ಟ್‌‌ಲುಕ್‌ನ್ನು ನಟಿ ಪ್ರಿಿಯಾಂಕ ಉಪೇಂದ್ರ ಬಿಡುಗಡೆ ಮಾಡಿ ಚಿತ್ರತಂಡಕ್ಕೆೆ ಶುಭ ಹಾರೈಸಿದ್ದಾಾರೆ. ‘ತನಿಖೆ’, ‘ಪಾಗಲ್‌ಪ್ರೇಮಿ’, ‘ರಾಜಾಧಿರಾಜ’ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಅಭಿನಯಸಿರುವ ಅಪ್ಪುು ಬಡಿಗೇರ ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿಿದ್ದಾಾರೆ. ಡಿಸೆಂಬರ್ ತಿಂಗಳಲ್ಲೇ ಈ ಚಿತ್ರದ ಚಿತ್ರೀಕರಣ ಪ್ರಾಾರಂಭವಾಗುತ್ತಿಿರುವುದು ವಿಶೇಷ. ಬೆಂಗಳೂರು, ಮಾಗಡಿ, ಹುಲಿಯೂರು ದುರ್ಗ, ಯಲ್ಲಾಾಪುರ ಹಾಗೂ ಚಿಕ್ಕಮಗಳೂರು ಸೇರಿದಂತೆ ಹಲವಾರು ಪ್ರವಾಸಿ ತಾಣಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಈ ಚಿತ್ರದಲ್ಲಿ ಸ್ಟಾಾರ್ ನಟರೊಬ್ಬರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾಾರೆ.

ಪ್ರತಿದಿನ ಹುಟ್ಟುವ ನೂರರಲ್ಲಿ ಮೂವರು ಮಕ್ಕಳು ಉಸಿರಾಟದ ತೊಂದರೆಯಿಂದಲೇ ಸಾಯುತ್ತಿಿವೆ. ಇದಕ್ಕೆೆ ಕಾರಣವಾದರೂ ಏನು, ಇದಕ್ಕೆೆ ಇಂಡಿಯನ್ ಮೆಡಿಕಲ್ ರೀಸರ್ಚ್‌ನಿಂದಲೂ ಮೆಡಿಸಿನ್ ಕಂಡುಹಿಡಿದಿಲ್ಲ. 2015ರಿಂದ 2019ರವರೆಗೆ ನಡೆದ ಕೆಲವೊಂದು ನೈಜ ಘಟನೆಗಳನ್ನು ಆಧರಿಸಿ ಈ ಚಿತ್ರದ ಕಥೆ ಹೆಣೆಯಲಾಗಿದೆ. ಈ ಚಿತ್ರ ಪಕ್ಕಾಾ ಫ್ಯಾಾಮಿಲಿ, ಲವ್, ಫ್ರೆೆಂಡ್‌ಷಿಪ್, ಹಾರರ್ ಹಾಗೂ ಥ್ರಿಿಲ್ಲರ್ ಎಲಿಮೆಂಟ್‌ಸ್‌‌ಗಳನ್ನು ಒಳಗೊಂಡಿರುತ್ತದೆ ಎನ್ನುತ್ತಾಾರೆ ನಿರ್ದೇಶಕರು.
ಎಂ.ಜೆ.ಎಸ್.ಪ್ರೊೊಡಕ್ಷನ್‌ಸ್‌ ಲಾಂಛನದಲ್ಲಿ ಬಸವರಾಜ್ ಎಸ್. ನಂದಿ ದೇವಹಾಸನ್ ಅವರು ನಿರ್ಮಿಸುತ್ತಿಿರುವ ಈ ಚಿತ್ರಕ್ಕೆೆ ಪ್ರವೀಣ್ ನಿಕೇತನ್ ಸಂಗೀತ, ಬಸವರಾಜ್ ಎಸ್. ನಂದಿ ಛಾಯಾಗ್ರಹಣ, ನಗಾರಿ ವಿಕಾಸ್, ನಾಗರಾಜ್ ಎಂ.ಜಿ.ಗೌಡ, ಕಿರಣ್‌ಕುಮಾರ್ ಜಿ. ಚಿತ್ರಕಥೆ, ಸಿರಿ ವೈ.ಎಸ್.ಆರ್. ಸಂಭಾಷಣೆ, ಸುರೇಶ್ ಡಿ.ಹೆಚ್. ಅವರ ಸಂಕಲನವಿದೆ. ಅಪ್ಪುು ಬಡಿಗೇರ್, ಶೈಲಜಾ, ರಘುಶೆಟ್ಟಿಿ, ಜಗದೀಶ್ ಹೆಚ್.ಜಿ.ದೊಡ್ಡಿಿ, ಕಿರಣ್‌ಗೌಡ. ರೀಶನ್ ಚೊಟ್ಟಾಾಳಿ, ಯಮ್ಮಂಡೆ. ಕುಮಾರ್ ಎಸ್, ಆನಂದ್ ಪಾಟೀಲ್ ಇನ್ನು ಮುಂತಾದವರ ತಾರಾಬಳಗ ಈ ಚಿತ್ರಕ್ಕಿಿದೆ.