Saturday, 23rd November 2024

ಕಿರುತೆರೆಯಲ್ಲಿ ದೀಪಾವಳಿಯ ಸಂಭ್ರಮ

ಇಂದು ಕಿರುತೆರೆ ಪ್ರೇಕ್ಷಕರಿಗೆ ಮನರಂಜನೆಯ ಹೂರಣವಾಗಿದೆ. ಹಲವು ಧಾರಾವಾಹಿಗಳು ಪ್ರಸಾರವಾಗುತ್ತಿದ್ದು ಪ್ರೇಕ್ಷಕರ ಮೆಚ್ಚುಗೆಗೂ ಪಾತ್ರವಾಗಿವೆ.

ಹಾಗಾಗಿಯೇ ಹಲವು ಧಾರಾವಾಹಿಗಳು ಐನ್ನೂರು ಸಂಚಿಕೆಯನ್ನು ಪೂರೈಸಿವೆ. ಗೌರಿಪುರದ ಗಯ್ಯಾಳಿಗಳು, ಕನ್ಯಾದಾನ, ಅಣ್ಣ ತಂಗಿ, ನೇತ್ರಾವತಿ, ಸುಂದರಿ, ರಾಧಿಕಾ, ಜನನಿ, ನಯನತಾರಾ ಸೇವಂತಿ ಧಾರಾವಾಹಿಗಳು ಅತಿರಂಜಿತವಲ್ಲದ ನೈಜ ನಿರೂಪಣೆ ಯೊಂದಿಗೆ ಜನಮನ ಗೆಲ್ಲುತ್ತಿವೆ. ಕೆಲವು ಉದಯ ಧಾರಾ ವಾಹಿಗಳು ಈ ಹಬ್ಬದ ಋತುವಿನಲ್ಲಿ ಐನ್ನೂರು ಸಂಚಿಕೆಗಳ ಸಂಭ್ರಮ ಕಾಣುತ್ತಿವೆ. ಸುಂದರಿ, ನಯನತಾರಾ ಧಾರಾವಾಹಿಗಳು ಇತ್ತೀಚೆಗಷ್ಟೇ ಐನ್ನೂರು ಸಂಚಿಕೆ ದಾಟಿದ್ದರೆ, ನೇತ್ರಾವತಿ ಹಾಗೂ ಗೌರಿಪುರದ ಗಯ್ಯಾಳಿಗಳು ಐನ್ನೂರರ ಹೊಸ್ತಿಲಲ್ಲಿವೆ.

ಸೇವಂತಿ ಧಾರಾವಾಹಿ ಈಗಾಗಲೇ ಸಾವಿರ ಸಂಚಿಕೆಗಳನ್ನು ದಾಟಿದೆ. ಉದಯ ಧಾರಾವಾ ಹಿಗಳಲ್ಲಿ ದೀಪಾವಳಿ ಸಡಗರ ಜೋರಾ ಗಿದೆ. ಅಣ್ಣತಂಗಿ ಧಾರಾವಾಹಿಯಲ್ಲಿ ತಂಗಿ ತುಳಸಿಯ ಮದುವೆ ನಂತರ ಮೊದಲ ದೀಪಾವಳಿ. ಅಣ್ಣ ಶಿವಣ್ಣ, ತಂಗಿ-ಭಾವ ಇಬ್ಬರನ್ನೂ ಆಹ್ವಾನಿಸಿ ಸಂಭ್ರಮಿಸುತ್ತಾನೆ. ಕಾಣಿಕೆ ನೀಡುತ್ತಾನೆ. ಇದೇ ಕಾಣಿಕೆ ಮುಂದೆ ಊಹಿಸಲಾಗದ ಘಟನೆಗಳಿಗೆ ಕಾರಣವಾಗುತ್ತದೆ. ಇನ್ನು ನಯನತಾರಾ ಧಾರಾವಾಹಿ ಯಲ್ಲಿ ಅವ್ವೆ ಭಗವತಿಯ ಮೈಮೇಲೆ ದೇವಿಯ ಆವಾಹನೆಯಾಗಿ ನಾಯಕಿ ನಯನಾಳ ಮನೆಯಲ್ಲಿ ಅವಳ ಅತ್ತೆ ಇಂದ್ರಾಣಿ ನಡೆಸುತ್ತಿರುವ ಅಕ್ರಮಗಳ ಬಗ್ಗೆ ಕಾರಣಿಕ ನುಡಿಯುತ್ತದೆ.

ಪಾದಪೂಜೆ ಮಾಡಲು ನಿರಾಕರಿಸುವ ಇಂದ್ರಾಣಿಯ ಅಹಂಕಾರವನ್ನು ಭಗವತಿ ದಮನ ಮಾಡುತ್ತಾಳೆ. ಸೇವಂತಿ ಧಾರಾವಾಹಿ ಯಲ್ಲಿ ನಾಯಕಿ ಸೇವಂತಿಗೆ ಬದುಕಿಲ್ಲ ಎಂದು ತಿಳಿದುಕೊಂಡಿದ್ದ ತಾಯಿ ಸಿಕ್ಕ ಸಡಗರ. ಆದರೆ ತಾಯಿ ಶಾಂತಾ ಮಗಳನ್ನು ಗುರುತಿಸು ತ್ತಿಲ್ಲ. ಬದಲಿಗೆ ದುಷ್ಟೆ ಪ್ರಿಯಾಳನ್ನು ಮಗಳು ಅಂತ ನಂಬಿಬಿಟ್ಟಿದ್ದಾಳೆ. ಈ ಕಗ್ಗಂಟನ್ನು ಬಿಡಿಸಿ ಪತಿ ಲಾಯರ್
ಅರ್ಜುನ್ ನೆರವಿನಿಂದ ಅಡೆತಡೆ ದಾಟಿ ತಾನೇ ನಿಜವಾದ ಮಗಳು ಎಂಬುದನ್ನು ಸಾಬೀತುಪಡಿಸುವುದು ಸೇವಂತಿಯ ಮುಂದಿ ರುವ ಸವಾಲಾಗಿದೆ. ಹೀಗೆ ಹಬ್ಬದ ಋತುವಿನಲ್ಲಿ ಧಾರಾವಾಹಿಗಳಲ್ಲಿ ಒಂದಿಲ್ಲೊಂದು ವಿಶೇಷತೆಯಿದ್ದು ಮನೆಮಂದಿ ಸಂಭ್ರಮಿಸಬಹುದಾಗಿದೆ.