Friday, 13th December 2024

ಪದವಿ ಪೂರ್ವ ಬಳಗ ಸೇರಿದ ದಿವ್ಯಾ

Divya Uruduga

ಸ್ಯಾಂಡಲ್‌ವುಡ್ ವಿಕಟ ಕವಿ ಯೋಗರಾಜ್ ಭಟ್ ಗಾಳಿಪಟ 2 ಚಿತ್ರದ ಚಿತ್ರೀಕರಣ ಮುಗಿಸಿದ್ದು, ಸದ್ಯ ಪದವಿ ಪೂರ್ವ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.

ಯೋಗರಾಜ್ ಸಿನಿಮಾಸ್ ಹಾಗೂ ರವಿ ಶಾಮನೂರ್ ಫಿಲಂಸ್ ಜಂಟಿ ನಿರ್ಮಾಣ ದಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು, ಹರಿಪ್ರಸಾದ್ ಜಯಣ್ಣ ನಿರ್ದೇಶಿಸು ತ್ತಿದ್ದಾರೆ. ಪದವಿ ಪೂರ್ವ ಚಿತ್ರದಲ್ಲಿ ಹೊಸ ಕಲಾವಿದರ ದಂಡೇ ಇದೆ. ಈಗ ಈ ಬಳಗಕ್ಕೆ ಬಿಗ್‌ಬಾಸ್ ಖ್ಯಾತಿಯ ನಟಿ, ದಿವ್ಯಾ ಉರುಡುಗ ಪ್ರವೇಶ ಪಡೆದುಕೊಂಡಿ ದ್ದಾರೆ. ದಿವ್ಯಾ ಈ ಚಿತ್ರದಲ್ಲಿ ಅತಿಥಿ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ.

ಆದರೂ ಈ ಪಾತ್ರಕ್ಕೆ ಬಹಳ ಪ್ರಾಮುಖ್ಯತೆ ಇದ್ದು, ಭಟ್ಟರ ತಂಡ ಸೇರಿದ್ದು ಅತ್ಯಂತ ಸಂತಸದ ವಿಷಯ ಎನ್ನುತ್ತಾರೆ. ದಿವ್ಯಾ ನಟಿಸಲಿರುವ ಭಾಗದ ಚಿತ್ರೀಕರಣವು ಬೆಂಗಳೂರು ಹಾಗೂ ಮಂಗಳೂರಿನ ಸುತ್ತಮುತ್ತ ಶೀಘ್ರದ ಆರಂಭ ವಾಗಲಿದ್ದು, ಚಿತ್ರದ ಐದನೇ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಸಕಲ ಸಿದ್ಧತೆ ನಡೆಸಿದೆ. ಚಿತ್ರದ ನಾಲ್ಕನೇ ಹಂತದ ಚಿತ್ರೀ ಕರಣವು ಕಳೆದ ತಿಂಗಳಷ್ಟೇ ಪೂರ್ಣಗೊಂಡಿದ್ದು, ಬೆಂಗಳೂರಿನ ವಿವಿಧ ಭಾಗಗಳಲ್ಲಿ ಶೂಟಿಂಗ್ ನಡೆಸಲಾಗಿದೆ.

ಸಿನಿಮಾದ ದೃಶ್ಯಗಳು ಅತ್ಯಂತ ಸೊಗಸಾಗಿ ಮೂಡಿಬಂದಿದೆ, ಪ್ರತಿ ದೃಶ್ಯಗಳು ಪ್ರೇಕ್ಷಕರನ್ನು ರಂಜಿಸಲಿವೆ ಎನ್ನುತ್ತಾರೆ ನಿರ್ದೇಶಕ ಹರಿಪ್ರಸಾದ್ ಜಯಣ್ಣ. ಹೊಸಬರ ದಂಡೇ ಇರುವ ಈ ಚಿತ್ರದಲ್ಲಿ ಪೃಥ್ವಿ ಶಾಮನೂರು ನಾಯಕನಾಗಿ ನಟಿಸು ತ್ತಿದ್ದಾರೆ. ಅಂಜಲಿ ಅನೀಶ್ ಮತ್ತು ಯಶಾ ಶಿವಕುಮಾರ್ ನಾಯಕಿಯರಾಗಿ ಕಾಣಿಸಿ ಕೊಳ್ಳುತ್ತಿದ್ದಾರೆ. ಯೋಗರಾಜ್ ಭಟ್ ಅವರೇ ಚಿತ್ರದ ಹಾಡುಗಳಿಗೆ ಸಾಹಿತ್ಯ ರಚಿಸಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿ ದ್ದಾರೆ.

ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಮಧು ತುಂಬಕೆರೆ ಸಂಕಲನ ಈ ಚಿತ್ರಕ್ಕಿದೆ. ಪದವಿ ಪೂರ್ವ ಚಿತ್ರದ ಶೀರ್ಷಿಕೆ ಹೇಳು ವಂತೆ ಇಲ್ಲಿ ಕಾಲೇಜು ಯುವ ಮನಸುಗಳಲ್ಲಿ ಚಿಗುರುವ ಪ್ರೇಮಕಥೆಯೂ ಚಿತ್ರದಲ್ಲಿ ಮಿಳಿತವಾಗಿದೆ. ಇದರ ಜೆತೆಗ ಸಾಮಾಜಿ ಕ ಸಂದೇಶವೂ ಚಿತ್ರದ ಕಥೆಯಲ್ಲಿ ಅಡಕವಾಗಿದೆಯಂತೆ.