Friday, 13th December 2024

ರಂಗಭೂಮಿ ಪ್ರತಿಭೆಗಳ ಪ್ರೀತಿಗಿಬ್ಬರು

ಹಳ್ಳಿಗಾಡಿನ ಪ್ರೇಮ ಕಥೆಯ ಪ್ರೀತಿಗಿಬ್ಬರು ಚಿತ್ರ ತೆರೆಗೆ ಸಿದ್ಧವಾಗಿದೆ. ಬಹುತೇಕ ಕಲಾವಿದರು ಚಿತ್ರದಲ್ಲಿ ನಟಿಸಿರುವುದು ವಿಶೇಷ. ಹಲವು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ಬಿ.ಟಿ.ಷಾಂಡಿಲ್ಯ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ತಿರುಪತಿ ಮೂಲದ ಉದ್ಯಮಿ ಬಿ.ಬಾಲಾಜಿ ಬೊರ್ಲಿಗೊರ್ಲ, ಅಕ್ಷತಾ ಮೂವೀಸ್ ಮುಖಾಂತರ ಸಿನಿಮಾ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ. ಒಂದು ಹಳ್ಳಿಯಲ್ಲಿ ನಡೆಯುವ ಪ್ರೇಮಕಥೆ ಚಿತ್ರದ ಪ್ರಮುಖ ಕಥಾ ವಸ್ತುವಾಗಿದೆ. ಕೆಲವು ಕಷ್ಟಕರ ಸನ್ನಿವೇಶದಲ್ಲಿ ಪ್ರೇಮಿಗಳು ತಮ್ಮ ಬದುಕಿನಲ್ಲಿ ಹೇಗೆ ಒಂದಾಗುತ್ತಾರೆ. ತಮ್ಮ ಪ್ರೀತಿಗೆ ಜಾತಿ ಅಡ್ಡಬಂದಾಗ ಅದನ್ನು ಮೀರಿ ಪ್ರೀತಿಗೆ ಜಾತಿ ಇಲ್ಲ ಎಂಬುದನ್ನು ಹೇಗೆ ನಿರೂಪಿಸುತ್ತಾರೆ ಎಂಬುದೇ ಚಿತ್ರದ ಇಂಟರೆಸ್ಟಿಂಗ್ ಅಂಶ.

ಇಬ್ಬರು ನಟಿಯರು ಖಳನಾಯಕಿ ಯರಾಗಿ ಕಾಣಿಸಿಕೊಂಡಿರುವುದು ಚಿತ್ರದ ಮತ್ತೊಂದು ವಿಶೇಷ. ನಾಯಕನಾಗಿ ಗೋವಿಂದ ನಟಿ ಸಿದ್ದು, ನಾಯಕಿ ಯಾಗಿ ನಿರೋಷಾ ಶೆಟ್ಟಿ ಬಣ್ಣಹಚ್ಚಿದ್ದಾರೆ. ವಿಲನ್ ಗಳಾಗಿ ಮಂಜುಳಾ ಮತ್ತು ಕಾವ್ಯಾ ಪ್ರಕಾಶ್, ಅಣ್ಣನಾಗಿ ಚಿರಾಗ್, ಇವರೊಂದಿಗೆ ಶೈಲೇಶ್, ಸಂದೀಪ್ ಮುಂತಾದವರು ನಟಿಸಿದ್ದಾರೆ.

ಸಂಗೀತ ಅನುರಾಗ್ ರೆಡ್ಡಿ, ಎ.ಟಿ. ರವೀಶ್, ಛಾಯಾಗ್ರಹಣ ರಮೇಶ್‌ಗೌಡ, ಸಂಕಲನ ಅರ್ಜುನ್ ಕಿಟ್ಟು, ಸಾಹಿತ್ಯ ಡಾ.ದೊಡ್ಡರಂಗೇಗೌಡ, ಸಾಹಸ ಆರ್ಯನ್ ಶ್ರೀನಿವಾಸನ್, ಅಶೋಕ್, ನೃತ್ಯ ಪ್ರವೀಣ್ ಅವರದಾಗಿದೆ.

ಚಾಮರಾಜನಗರ, ಉಡುಪಿ, ಬಳ್ಳಾರಿ, ಬೀದರ್, ನಾಗ ಮಂಗಲ, ಕೊಳ್ಳೆಗಾಲ, ಮರವಂತೆ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಈಗಾಗಲೇ ಸೆನ್ಸಾರ್ ಮುಗಿಸಿರುವ ಪ್ರೀತಿ ಗಿಬ್ಬರು ಚಿತ್ರತಂಡ ಯು/ಎ ಪ್ರಮಾಣಪತ್ರ ಪಡೆದಿದೆ. ಇದೇ ತಿಂಗಳು ಚಿತ್ರ ತೆರೆಗೆ ಬರಲಿದೆ.