Saturday, 14th December 2024

ಅರ್ಧಂಬರ್ಧ ಪ್ರೇಮಕತೆಯಲ್ಲಿ ಒಂದಾದ ಅರವಿಂದ್‌, ದಿವ್ಯಾ

ಬಿಗ್ ಬಾಸ್ ಖ್ಯಾತಿಯ ದಿವ್ಯಾ ಉರುಡುಗ, ಅರವಿಂದ್ ಕೌಶಿಕ್ ನಿರ್ದೇಶನದ ಹುಲಿರಾಯ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ ದ್ದರು. ಈಗ ಮತ್ತೆ ಅರವಿಂದ್ ಕೌಶಿಕ್ ಜತೆಯಾಗಿ ದ್ದಾರೆ.

ವಿಭಿನ್ನ ಶೀರ್ಷಿಕೆಯ ಅರ್ಧಂಬರ್ಧ ಪ್ರೇಮ ಕಥೆ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಚಿತ್ರೀ ಕರಣವೂ ಮುಕ್ತಾಯವಾಗಿದ್ದು ಇನ್ನೇನು ಚಿತ್ರ ತೆರೆಗೆ ಬರಲಿದೆ. ಆದರೆ ಈ ವರೆಗೂ ಈ ಚಿತ್ರದ ನಾಯಕ ನಟ ಯಾರು ಅಂತ ಚಿತ್ರ ತಂಡ ರಿವೀಲ್ ಮಾಡಿಲ್ಲ. ವಿಜಯದಶಮಿ ಪ್ರಯುಕ್ತ ಟೀಸರ್ ಬಿಡುಗಡೆ ಮಾಡಲಿರುವ ಚಿತ್ರತಂಡ ನಾಯಕನ ಯಾರೆಂಬು ದನ್ನು ರಿವಿಲ್ ಮಾಡಲಿದೆ.

ಅರವಿಂದ್ ಕೌಶಿಕ್ ಏನೇ ಮಾಡಿದರೂ ಅದರಲ್ಲಿ ಹೊಸತನವಿರುತ್ತದೆ. ಆರಂಭದಲ್ಲಿ ತುಘ್ಲಕ್, ನಮ್ ಏರಿಯಾಲ್ ಒಂದಿನ ಸಿನಿಮಾಗಳಿಂದ ಪ್ರಸಿದ್ಧಿ ಪಡೆದಿದ್ದಾರೆ. ಅದರಂತೆ ಈಗ ಅರ್ಧಂಬರ್ಧ ಪ್ರೇಮಕಥೆಯೂ ಕುತೂಹಲ ಮೂಡಿಸಿದೆ. ಬಕ್ಸಸ್ ಮೀಡಿಯಾ ಅರ್ಧಂಬರ್ಧ ಪ್ರೇಮ ಕಥೆ ಚಿತ್ರವನ್ನು ನಿರ್ಮಿಸಿದೆ.

ಶ್ರೇಯಾ ಬಾಬು, ವೆಂಕಟ್ ಶಾಸ್ತ್ರಿ, ಪ್ರದೀಪ್ ರೋಷನ್, ಸೂರಜ್ ಹೂಗಾರ್, ಸುಜಿತ್ ಶೆಟ್ಟಿ ಮೊದಲಾದವರು ಚಿತ್ರದ ತಾರಾ ಬಳಗದಲ್ಲಿದ್ದಾರೆ.