Saturday, 14th December 2024

ಬದಲಾಯ್ತು ಗೋದ್ರಾ ಟೈಟಲ್‌

ನೀನಾಸಂ ಸತೀಶ್ ವಿಭಿನ್ನ ಪಾತ್ರಗಳಲ್ಲೆ ನಟಿಸಿದ್ದಾರೆ. ಅಂತಹ ಕಥೆಗಳನ್ನೇ ಆಯ್ದುಕೊಳ್ಳುತ್ತಿದ್ದಾರೆ. ಅದರಂತೆ ಅಪರೂಪದ ಕಥೆಯ ಗೋದ್ರಾ ಎಂಬ ಚಿತ್ರದಲ್ಲಿಯೂ ಅಭಿನಯಿಸಿದ್ದಾರೆ. ಈ ಹಿಂದೆಯೇ ಗೋದ್ರಾ ಚಿತ್ರದ ಚಿತ್ರೀ ಕರಣ ಆರಂಭವಾಗಿತ್ತು. ಸದ್ಯ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ತೆರೆಗೆ ತರಲು ಸಿದ್ಧತೆ ನಡೆಸಿದೆ.

ಇದು ಕ್ರಾಂತಿ ಮತ್ತು ಪ್ರೀತಿಯ ಸುತ್ತಲೂ ಹೆಣೆದಿರುವ ಸುಂದರವಾದ ಕಥನ ವಾಗಿದೆ. ಸಿನಿಮಾದ ಪ್ರತಿ ಹೆಜ್ಜೆಯಲ್ಲೂ ಸಮಾಜ ದಲ್ಲಿರುವ ಸಮಸ್ಯೆಗಳನ್ನು ಎತ್ತಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಗೋದ್ರಾ ಪ್ರಸ್ತುತ ಸನ್ನಿವೇಶದ ರಾಜಕೀಯ ಅರಾಜಕತೆಗೆ ಹಿಡಿದ ಕೈಗನ್ನಡಿಯಾಗಿದೆ. ಆದರೀಗ ಸಿನಿಮಾದ ಟೈಟಲ್ ವಿಚಾರವಾಗಿ ಒಂದಷ್ಟು ಚರ್ಚೆಗಳ ಜೋರಾಗಿವೆ. ಚಿತ್ರದ ಶೀರ್ಷಿಕೆ ಯನ್ನು ಬದಲಾಯಿಸಿ ಎನ್ನುವ ಒತ್ತಾಯಗಳೂ ಕೇಳಿಬಂದಿವೆ.

ಇದಕ್ಕೆ ಮಣಿದ ಚಿತ್ರತಂಡ ಡಿಯರ್ ವಿಕ್ರಮ್ ಶೀರ್ಷಿಕೆಯನ್ನು ಅಂತಿಮಗೊಳಿಸಿದ್ದು, ಇದೇ ಟೈಟಲ್‌ನಲ್ಲಿ ಚಿತ್ರ ಬಿಡುಗಡೆ ಯಾಗಲಿದೆ. ನಮ್ಮ ಸಿನಿಮಾ ಯಾವುದೇ ನೈಜ ಘಟನೆ, ಪ್ರದೇಶ ವನ್ನು ಆಧರಿಸಿಲ್ಲ. ಬದಲಾಗಿ ಇದೊಂದು ಕಾಲ್ಪನಿಕ ಕಥೆ ಯಾಗಿದೆ. ಹೀಗಾಗಿ ಜನರಲ್ಲಿ ಗೊಂದಲ ಮೂಡಿಸಬಾರದು ಎನ್ನುವ ಕಾರಣಕ್ಕೆ ಸಿನಿಮಾದ ಶೀರ್ಷಿಕೆಯನ್ನು ಬದಲಾಯಿಸಿ ದ್ದೇವೆ ಎನ್ನುತ್ತಾರೆ ನಿರ್ದೇಶಕ ನಂದೀಶ.

ಸತೀಶ್ ನಿನಾಸಂ ಜತೆಗೆ ನಾಯಕಿಯಾಗಿ ಶ್ರದ್ಧಾ ಶ್ರೀನಾಥ್ ಬಣ್ಣಹಚ್ಚಿದ್ದಾರೆ. ಶ್ರದ್ಧಾ ವಿಭಿನ್ನ ಗಟೆಪ್‌ನಲ್ಲಿ ಮಿಂಚಿದ್ದಾರೆ. ಉಳಿದಂತೆ ಅಚ್ಯುತ್ ಕುಮಾರ್, ವಸಿಷ್ಠ ಸಿಂಹ, ರಕ್ಷಾ ಸೋಮ ಶೇಖರ್, ಸೋನುಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೂಡಾ ಸ್ಯಾಂಡಿ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದು, ಹಿನ್ನೆಲೆ ಸಂಗೀತ ಕೂಡ ಪ್ರೇಕ್ಷಕರನ್ನು ಕಾಡಲಿದೆ.

ಶಶಿಕುಮಾರ್ ಮತ್ತು ಜಾಕೆಬ್.ಕೆ.ಗಣೇಶ್ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ. ಈ ಸಿನಿಮಾ ಮೂಲಕ ನಂದೀಶ ಭರವಸೆಯ ನಿರ್ದೇಶಕನಾಗಿ ಚಂದನವನಕ್ಕೆ ಪರಿಚಿತರಾಗು ತ್ತಿದ್ದಾರೆ. ಡಿಯರ್ ವಿಕ್ರಂ ಸಿನಿಮಾವು ಒಟಿಟಿಯಲ್ಲಿ ಬಿಡುಗಡೆ ಆಗಲಿದ್ದು, ರಿಲೀಸ್ ದಿನಾಂಕ ಸದ್ಯದಲ್ಲಿಯೇ ಘೋಷಣೆ ಯಾಗಲಿದೆ.