ನಿರ್ದೇಶಕ ಶ್ರೀನಿವಾಸ್ ರಾಜು ನಿರ್ದೇಶಿಸುವ ಬಹುತೇಕ ಚಿತ್ರಗಳು ವಿಭಿನ್ನವಾ ಗಿಯೇ ಮೂಡಿಬರುತ್ತವೆ. ಒಂದಷ್ಟು ವಿವಾದ ಗಳನ್ನು ಎಬ್ಬಿಸುತ್ತವೆ. ಈ ಹಿಂದೆ ತೆರೆಗೆ ಬಂದ ದಂಡುಪಾಳ್ಯ ರಾ ಸ್ಟೈಲ್ ಕಥೆಯನ್ನು ಹೊತ್ತುಬಂದಿತ್ತು. ಒಂದು ಕಾಲದಲ್ಲಿ ಅಮಾನವೀಯವಾಗಿ ಕ್ರೌರ್ಯ ಮೆರೆದ ಆಗಂತಕರ ಕಥೆಯನ್ನು ಶ್ರೀನಿವಾಸ್ ಬಿಚ್ಚಿಟ್ಟರು. ಈಗ ಅದೇ ದಾಟಿಯಲ್ಲಿ ಹುಬ್ಬಳ್ಳಿ ಡಾಬಾ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದು ಕೂಡ ನೈಜ ಘಟನೆಯಾಧಾರಿತ ಸಿನಿಮಾವಾಗಿದೆ. ಹುಬ್ಬಳ್ಳಿ ಡಾಬಾ ಚಿತ್ರದ ಕುರಿಂತೆ ಶ್ರೀನಿವಾಸ್ ರಾಜು ವಿ.ಸಿನಿಮಾಸ್‌ನೊಂದಿಗೆ ಮಾತ ನಾಡಿದ್ದಾರೆ.
ವಿ.ಸಿನಿಮಾಸ್ : ಹುಬ್ಬಳ್ಳಿ ಡಾಬಾ ಚಿತ್ರವೂ ಕ್ರೌರ್ಯದ ಕಥೆಯನ್ನೇ ಒಳಗೊಂಡಿದೆಯೆ ?
ಶ್ರೀನಿವಾಸ್ ರಾಜು : ಹುಬ್ಬಳ್ಳಿ ಡಾಬಾ ನೈಜ ಘಟನೆಯಾಧಾರಿತ ಸಿನಿಮಾ, ಇಲ್ಲಿ ಲವ್, ಕ್ರೈಂ ಡ್ರಾಮಾ, ಥ್ರಿಲ್ಲರ್ ಕಥೆಯೂ ಇದೆ. ಶ್ವೇತ ವರ್ಣದ ಮೇಲೆ ಚಿಕ್ಕ ರಕ್ತದ ಕಲೆ ಕಂಡರೂ ಅದು ದಟ್ಟವಾಗಿ ಕಾಣುತ್ತದೆ ಅಂತೆಯೇ ಚಿತ್ರದಲ್ಲಿ ಕ್ರೈಂ ಕಥೆ ಇರುವುದುರಿಂದ ಇಲ್ಲಿ ಕ್ರೌರ್ಯದ ಕಥೆ ಎಂದು ಅನ್ನಿಸುತ್ತದೆ. ಆದರೆ ಚಿತ್ರದಲ್ಲಿ ಮನರಂಜನೆಯೇ ಮುಖ್ಯವಾಗಿದೆ. ಪ್ರೀತಿ, ಅರಿಂದಾಗುವ ದೋಖಾ, ಅದಕ್ಕಾಗಿ ಸೇಡು ತೀರಿಸಿಕೊಳ್ಳುವ ತವಕ ಇದೆಲ್ಲವನ್ನು ಚಿತ್ರದಲ್ಲಿ ಹೇಳಲಾಗಿದೆ. ಚಿತ್ರದಲ್ಲಿ ಬರುವ ಕಥೆಯ ಘಟನೆ ಎಲ್ಲಿ ನಡೆದಿದ್ದು ಎಂಬುದನ್ನು ಚಿತ್ರ ಬಿಡುಗಡೆಯ ಬಳಿಕ ರಿವಿಲ್ ಮಾಡುತ್ತೇವೆ.
ವಿ.ಸಿ : ಇದೇ ಶೀರ್ಷಿಕೆಯನ್ನು ಆಯ್ದುಕೊಳ್ಳಲು ಕಾರಣ ?
ಶ್ರೀನಿವಾಸ್ : ಈ ಚಿತ್ರದ ಕಥೆ ಒಂದು ಡಾಬಾದ ಸುತ್ತ ನಡೆಯುತ್ತದೆ. ಈ ಚಿತ್ರಕ್ಕೆ ಮೊದಲು ಡಾಬಾ ಎಂದು ಶೀರ್ಷಿಕೆ ಇಡಲಾಗಿತ್ತು. ಬಳಿಕ ಟೈಟಲ್ ಪಂಚಿಂಗ್ ಆಗಿರಲಿ ಎಂದು ಹುಬ್ಬಳ್ಳಿ ಡಾಬಾ ಎಂಬ ಟೈಟಲ್ ಅಂತಿಮಗೊಳಿಸಿದೆವು. ಬೆಂಗಳೂರು ಹಾಗೂ ಹೈದರಾಬಾದ್‌ನಲ್ಲಿ ಸೆಟ್ ಹಾಕಿ ಚಿತ್ರೀಕರಣ ನಡೆಸಿದ್ದೇವೆ.
ವಿ.ಸಿ : ಇಲ್ಲಿಯೂ ಡಂಡುಪಾಳ್ಯದ ಶೇಡ್ ಇದೆಯಲ್ಲ ?
ಶ್ರೀನಿವಾಸ್ : ಹೆದ್ದಾರಿಯ ಬದಿಯಲ್ಲಿರುವ ಡಾಬಾದಲ್ಲಿ ನಡೆಯುವ ಕಥೆಯಿದು. ಕಥೆಗೆ ತಕ್ಕಂತೆ ಪಾತ್ರಧಾರಿಗಳು ನಟಿಸಿದ್ದಾರೆ. ಹಾಗಂತ ಈ ಚಿತ್ರದ ಕಥೆಗೂ ದಂಡು ಪಾಳ್ಯದ ಕಥೆಗೂ ಸಂಬಂಧವಿಲ್ಲ. ಇದು ಬೇರೆಯದ್ದೇ ರೀತಿಯ ಕಥೆಯನ್ನು ಒಳಗೊಂಡಿದೆ. ಅದನ್ನು ತೆರೆಯಲ್ಲಿ ನೋಡಿದರೆ ತಿಳಿಯುತ್ತದೆ. ದಂಡು ಪಾಳ್ಯದಲ್ಲಿ ನಟಿಸಿದ್ದ ರವಿಶಂಕರ್, ಪೂಜಾ ಗಾಂಧಿ, ಡ್ಯಾನಿ ಕುಟ್ಟಪ್ಪ ಸೇರಿದಂತೆ ಬಹುತೇಕ ಕಲಾವಿದರೂ ಈ ಚಿತ್ರದಲ್ಲಿಯೂ ನಟಿಸಿದ್ದಾರೆ.
ವಿ.ಸಿ: ಹುಬ್ಬಳ್ಳಿ ಡಾಬಾ ಪ್ಯಾನ್ ಇಂಡಿಯಾ ಸಿನಿಮಾವಾಗಲಿದೆಯೆ ?
ಶ್ರೀನಿವಾಸ್ : ಇಲ್ಲ, ಈ ಚಿತ್ರ ಕನ್ನಡ ಹಾಗೂ ತೆಲುಗಿನಲ್ಲಿ ನಿರ್ಮಾಣವಾಗಿದೆ. ಮುಂದೆ ಬೇರೆ ಭಾಷೆಗೆ ಡಬ್ ಆಗುವ ನಿರೀಕ್ಷೆ ಇದೆ. ಆ ಬಗ್ಗೆ ಇನ್ನು ಯಾವುದೇ ನಿರ್ಧಾರ ಮಾಡಿಲ್ಲ. ಈ ವಾರ ತೆಲುಗಿನ ಚಿತ್ರ ಬಿಡುಗಡೆಯಾಗಲಿದ್ದು, ಮುಂದಿನ ವಾರ ಕನ್ನಡದಲ್ಲಿ ಸಿನಿಮಾ ತೆರೆಗೆ ಬರಲಿದೆ.