Wednesday, 11th December 2024

ಕಿರುತೆರೆಯಲ್ಲಿ ಹೊಸ ಕಾದಂಬರಿ

ಕಿರುತೆರೆ ಪ್ರಿಯರಿಗಾಗಿ ಮತ್ತೊಂದು ಕೌಟುಂಬಿಕ ಕಥೆಯ ಧಾರಾವಾಹಿ ಕಾದಂಬರಿ ಪ್ರಸಾರ ಆರಂಭಿಸಿದೆ. ಕಥೆಯ ನಾಯಕಿಯೇ ಕಾದಂಬರಿ. ಇದು ಮಧ್ಯಮ ವರ್ಗದ ಕುಟುಂಬದ ಹುಡುಗಿಯ ಕಥೆಯನ್ನು ತೆರೆದಿದಡಲಿದೆ.

ಹೊರ ದೇಶಕ್ಕೆ ತೆರಳಿ ಹಣ ಸಂಪಾದಿಸಿಕೊಂಡು ಬರುವುದಾಗಿ ಹೇಳಿ ಹೊರಟ ಅಪ್ಪನ ಸುಳಿವಿಲ್ಲ. ಇದ್ದೊಬ್ಬ ಅಣ್ಣ ಜೀವನದಲ್ಲಿ ಸೋತು ಮದ್ಯದ ದಾಸನಾಗಿರುತ್ತಾನೆ. ಹೀಗಿರುವಾಗ ಇಡೀ ಕುಟುಂಬಕ್ಕೆ ಕಾದಂಬರಿಯೇ ಆಧಾರ. ತಮ್ಮ ಕುಟುಂಬಕ್ಕಾಗಿ ಖಾಸಗಿ ಕಂಪನಿಯೊಂದರಲ್ಲಿ ಹಗಲಿರುಳು ಶ್ರಮಿಸುತ್ತಾಳೆ. ಮನೆ ಮಗನಂತೆ ದುಡಿಯುವ ಕಾದಂಬರಿಗೆ ಪುಟ್ಟ ಕನಸೊಂದಿರುತ್ತದೆ. ಅದು, ಇವಳ ಮನಸನ್ನ ಅರ್ಥ ಮಾಡಿಕೊಳ್ಳುವ ಒಬ್ಬ ಸಂಗಾತಿಯ
ಕೈಹಿಡಿದು, ಎರಡು ಮುದ್ದಾದ ಮಕ್ಕಳನ್ನು ಹೆತ್ತು ಗೃಹಿಣಿಯಾಗಿ ಸಂಸಾರ ತೂಗಿಸಬೇಕು ಎಂಬುದು. ಆದರೆ ಬೆನ್ನೇರಿರುವ ಮನೆಯ ಜವಾಬ್ದಾರಿಯ ನಡುವೆ ಇವಳ ಕನಸು ನನಸಾಗುತ್ತದೆಯೇ ಎಂಬುದು ಈ ಧಾರಾ ವಾಹಿಯ ಸಾರಾಂಶ.

ದರ್ಶಿತ್ ಭಟ್ ನಿರ್ದೇಶನದಲ್ಲಿ ಕಾದಂಬರಿ ಧಾರಾವಾಹಿ ಮೂಡಿಬರುತ್ತಿದೆ. ಈ ಹಿಂದೆ ಹಲವು ಪ್ರಸಿದ್ಧ ಧಾರಾ ವಾಹಿಗಳನ್ನು ನಿರ್ಮಿಸಿರುವ ಗಣಪತಿ ಭಟ್ ಈ ಧಾರಾವಾಹಿಯ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಉದಯ ವಾಹಿನಿಯಲ್ಲಿ ಕಾದಂಬರಿ ಪ್ರಸಾರವಾಗಲಿದೆ. ಕಾದಂಬರಿ ಪಾತ್ರದಲ್ಲಿ ಪವಿತ್ರಾ ನಾಯಕ್ ನಟಿಸುತ್ತಿದ್ದಾರೆ. ಉಳಿದಂತೆ ರಕ್ಷಿತ್, ನಾಗೇಂದ್ರ ಶಾ, ಮಾಲತಿ ಸರ್ ದೇಶಪಾಂಡೆ, ಸುರೇಶ್ ರೈ, ಗಾಯಿತ್ರಿ ಪ್ರಭಾಕರ್, ಪ್ರಥಮಾ ರಾವ್, ನಿರಂಜನ್, ಶ್ವೇತಾ, ಪ್ರಗತಿ, ಅರ್ಪಿತಾ, ಪೃಥ್ವಿ ಯುವಸಾಗರ್, ಲಿಖಿತಾ ಅಶೋಕ್, ರಾಧಿಕಾ ಶೆಟ್ಟಿ, ಆನಂದ್ ಮತ್ತಿತರರು ಪಾತ್ರ ನಿರ್ವಹಿಸುತ್ತಿದ್ದಾರೆ.