Friday, 13th December 2024

ಕೈಮರಕ್ಕೆ ಚಾಲನೆ

ಪ್ರಿಯಾಂಕಾ ಉಪೇಂದ್ರ ವಿಭಿನ್ನ ಕಥೆಯ ಚಿತ್ರಗಳನ್ನೇ ಆಯ್ದುಕೊಳ್ಳುತ್ತಿದ್ದಾರೆ, ಈಗ ಅಂತಹದ್ದೇ ಕಥೆಯ ಕೈಮರ ಚಿತ್ರದಲ್ಲಿ ನಟಿಸಲು ಸಿದ್ಧತೆ ನಡೆಸಿದ್ದಾರೆ.

ವಿಜಯದಶಮಿಯಂದೇ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದೆ. ಈ ಚಿತ್ರವನ್ನು ಗೌತಮ್ ವಿಮಲ್ ನಿರ್ದೇಶಿಸುತ್ತಿದ್ದು, ವಿ.ಮತ್ತಿಯಳಗನ್ ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ. ಪ್ರಿಯಾಂಕಾ ಉಪೇಂದ್ರ ಜತೆಗೆ ಪ್ರಿಯಾಮಣಿ ಹಾಗೂ ಛಾಯಾಸಿಂಗ್ ಕೂಡ ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.

ಮತ್ತಿಯಳಗನ್ ನಿರ್ಮಾಣದ ಜತೆಗೆ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ. ಇದೊಂದು ಹಾರರ್ ಸೈಕಲಾಜಿಕಲ್ ಕಥಾಹಂದರದ ಚಿತ್ರ. ಕಳೆದ ಮೂರು ವರ್ಷಗಳಿಂದ ಕೈಮರ ಚಿತ್ರದ ಕೆಲಸಗಳು ನಡೆಯುತ್ತಿದ್ದವು. ಕರೋನಾ ಕಾರಣದಿಂದ ಚಿತ್ರೀಕರಣ ಆರಂಭ ವಾಗುವುದು ಸ್ವಲ್ಪ ತಡವಾಯಿತು. ಈಗ ದಸರಾದಂದೇ ಮುಹೂರ್ತ ನೆರವೇರಿದೆ. ಅಕ್ಟೋಬರ್ ಹತ್ತರಿಂದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ಚಿಕ್ಕಮಗಳೂರಿ ನಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕ ಗೌತಮ್ ವಿಮಲ್ ತಿಳಿಸಿದರು.

ಕೈಮರ ವಿಭಿನ್ನವಾಗಿ ಮೂಡಿಬರಲಿದೆ. ಪಿ.ವಿಮಲ್ ಕಥೆ ಬರೆದಿದ್ದು, ಗುರುಕಿರಣ್ ಸಂಗೀತ ನಿರ್ದೇಶನ, ಮಣಿಕಂಠನ್ ಛಾಯಾಗ್ರಹಣ, ಮೋಹನ್.ಬಿ.ಕೆರೆ ಕಲಾ ನಿರ್ದೇಶನ ಹಾಗೂ ವಿನೋದ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

**

ನಾನು ಈ ಹಿಂದೆ ಸಾಕಷ್ಟು ಹಾರಾರ್ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಕೈಮರ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳು ತ್ತಿದ್ದೇನೆ. ಪ್ರಿಯಾಮಣಿ, ಛಾಯಾಸಿಂಗ್ ಅವರೊಟ್ಟಿಗೆ ಅಭಿನಯಿಸುತ್ತಿರುವುದು ಖುಷಿಯಾಗಿದೆ. ನಮ್ಮ ಕೈಮರ ಚಿತ್ರದ ಕಥೆ ಡಿಫರೆಂಟ್ ಆಗಿದ್ದು, ಪ್ರೇಕ್ಷಕರಿಗೆ ಖಂಡಿತಾ ಇಷ್ಟವಾಗಲಿದೆ.
– ಪ್ರಿಯಾಂಕಾ ಉಪೇಂದ್ರ ನಟಿ