Friday, 13th December 2024

ಅಬ್ಬರ ಶುರುಮಾಡಿದ ಮಹಿಷಾಸುರ

ವಿಭಿನ್ನ ಶೀರ್ಷಿಕೆಯ ‘ಮಹಿಷಾಸುರ’ ತೆರೆಯಲ್ಲಿ ಅಬ್ಬರ ಶುರು ಮಾಡಿದ್ದಾನೆ. ಟೈಟಲ್ ಕೇಳಿದಾಕ್ಷಣ ಇದು ಕ್ರೈಂ ಥ್ರಿಲ್ಲರ್ ಸಿನಿಮಾವಿರಬೇಕು ಎಂದು ಅನ್ನಿಸುವುದು ಸಹಜ. ಅಂದುಕೊಂಡಂತೆ ಈ ಚಿತ್ರದಲ್ಲಿ ಥ್ರಿಲ್ಲರ್ ಕಥೆಯ ಜತೆಗೆ ಕಾಮಿಡಿ, ಪ್ರೇಮಕಥೆಯೂ ಮಿಳಿತವಾಗಿದೆ. ನಮ್ಮ ಸಮಾದಲ್ಲಿ ದಿನನಿತ್ಯ ನಡೆಯುತ್ತಿರುವ ಘಟನೆಗಳೇ ಚಿತ್ರದ ಕಥಾ ವಸ್ತುವಾಗಿದ್ದು, ಚಿತ್ರ ನೋಡುತ್ತಿದ್ದಂತೆ, ಇದು ನಮಗೆ ಅರಿವಾಗುತ್ತದೆ. ಇದರ ಜತೆಗೆ ಮಾನವನ ದುರಾಸೆ, ದುರಾ ಲೋಚನೆಗಳು, ಸ್ವಾರ್ಥಪರತೆ ಹೀಗೆ ಎಲ್ಲವೂ ನಮ್ಮ ಕಣ್ಣಮುಂದೆ ಹಾದು ಹೋಗುತ್ತದೆ. ಅದಕ್ಕೆ ಬಲಿಯಾದ ಸಾಮಾನ್ಯನ ನೋವಿನ ದನಿಯಾಗಿ ಚಿತ್ರಮೂಡಿ ಬಂದಿದೆ.

ನಮ್ಮ ಬದುಕಿನ ಬಂಡಿ ಸಾಗಲೇ ಬೇಕು. ಅದಕ್ಕಾಗಿ ದಿನನಿತ್ಯ ನಾವೆಲ್ಲಾ ಕಾಯಕಯೋಗಿಗಳಾಗ ಲೇಬೇಕು. ಸಮಾಜಕ್ಕೆ ಸರಿ ಏನಿಸಿದ, ಸ್ವಾಭಿಮಾನದಿಂದ ಬದುಕಲು ನಾವೆಲ್ಲಾ ನಾನಾ ರೀತಿಯ ಕಾಯಕವನ್ನು ಕೈಗೊಳ್ಳುತ್ತಲೇ ಇರುತ್ತೇವೆ. ಈ ನಮ್ಮ ಮುಗ್ಧತೆಯನ್ನು ಅರಿತುಕೊಂಡ ಕೆಲವು ಸ್ವಾರ್ಥಪರರು, ಅವರ ಸ್ತಹಿತಾಸಕ್ತಿಗೋಸ್ಕರ ನಮ್ಮ ಹಿತವನ್ನು ಬಲಿಕೊಡಲು ಸದಾ ಹವಣಿಸು ತ್ತಿರುತ್ತಾರೆ.

ಏನೂ ಅರಿಯದ ಬಡವರು, ಮುಗ್ಧರು ಆ ಸ್ವಾರ್ಥಕ್ಕೆ ಬಲಿಯಾಗಿ ಪಡಬಾರದ ಪಾಡುಪಡು ವಂತಾಗುತ್ತದೆ. ಅದು ಯಾಕೆ? ಹೇಗೆ? ಎಂಬುದೇ ಚಿತ್ರದ ಕಥೆಯಾಗಿದೆ. ಹುಟ್ಟುತ್ತಲೇ ಯಾರೂ ಕೆಟ್ಟವರಾಗಿ ಹುಟ್ಟುವುದಿಲ್ಲ. ಆದರೆ ನಮ್ಮ ಸುತ್ತಲಿನ ವಾತಾವರಣ, ಜನರ ಪ್ರಭಾವ ನಮ್ಮನ್ನು ಕೆಟ್ಟವರನ್ನಾಗುವಂತೆ ಪ್ರೇರೇಪಿಸುತ್ತದೆ, ನರಕದ ಕೂಪಕ್ಕೆ ತಳ್ಳುತ್ತದೆ.

ಹಾಗಾದರೆ ಅದರಿಂದ ಎದ್ದು ಬರಲು ಸಾಧ್ಯವೇ ಇಲ್ಲವೆ. ದುರುಳರ ವಿರುದ್ದ ನಮ್ಮ ಹೋರಾಟ ಹೇಗಿರಬೇಕು ಎಂಬುದನ್ನು ‘ಮಹಿಷಾರಸುರ’ ಹೇಳ ಹೊರಟಿದೆ. ತ್ರಿಕೋನಾ ಪ್ರೇಮಕಥೆ ‘ಮಹಿಷಾರ’ ಚಿತ್ರ ಸಸ್ಪೆನ್ಸ್‌, ಥ್ರಿಲ್ಲರ್ ಕಥೆಗಷ್ಟೇ ಸೀಮಿತವಾಗಿಲ್ಲ, ಅದರ ಜತೆಗೆ ತ್ರಿಕೋನಾ ಪ್ರೇಮ ಕಥೆಯೂ ಇದೆ. ಈ ಹೊಡಿ ಬಡಿದಾಟದ ನಡುವೆಯೂ ಚಿಗುರುವ ಪ್ರೇಮ, ಅದಕ್ಕೆ ಎದುರಾಗುವ ಅಡೆತಡೆಗಳು ಇವೆಲ್ಲವೂ ತೆರೆಯಲ್ಲಿ ಹಾದು ಹೋಗುತ್ತದೆ. ಈ ನಡುವೆ ರಿವೆಂಜ್ ಕಥೆಯೂ ಆರಂಭವಾಗುತ್ತದೆ. ಹಾಗಾದರೆ ಪ್ರೀತಿಸಿದ ಹುಡುಗಿಯೇ ನಾಯಕನ ಪಾಲಿಗೆ ವಿಲನ್ ಆಗುತ್ತಾಳಾ ಎಂಬುದೇ ಚಿತ್ರದ ಮತ್ತೊಂದು ಟ್ವಿಸ್ಟ್.

ಅದನ್ನು ತೆರೆಯಲ್ಲಿಯೇ ನೋಡಬೇಕು ಎನ್ನುತ್ತಾರೆ ನಿರ್ದೇಶಕ ಉದಯ ಪ್ರಸನ್ನ. ಈಗಾಗಲೇ ಚಿತ್ರವನ್ನು ವಿಕ್ಷೀಸಿದ ಸೆನ್ಸಾರ್ ಮಂಡಳಿ ಚಿತ್ರಕ್ಕೆೆ‘ಯು/ಎ’ ಸರ್ಟಿಫಿಕೆಟ್ ನೀಡಿದೆ. ಚಿತ್ರವನ್ನು ತಮಿಳಿನ ‘ಅಸುರನ್’ ಚಿತ್ರಕ್ಕೆೆ ಹೋಲಿಸಿರುವುದು ಚಿತ್ರತಂಡ ಮತ್ತು ನಿರ್ದೇಶಕರ ಶ್ರಮಕ್ಕೆ ಸಿಕ್ಕ ಉತ್ತಮ ಪ್ರತಿಕ್ರಿಯೆಯಾಗಿದೆ. ಕಂಡ ಕನಸು ನನಸಾಗಿದೆ. ನಿರ್ದೇಶಕ ಉದಯ ಪ್ರಸನ್ನ ತಾನು ನಟರಾಗಬೇಕೆಂಬ ಆಸೆಯಿಂದ ಬಂದವರು. ಹೀಗೆ ಆಸೆ ಹೊತ್ತು ಬಂದವರೇ, ಹಲವು ನಿರ್ದೇಶಕರ ಬಳಿ ಕೆಲಸ ನಿರ್ವಹಿಸಿದರು. ‘ನಿಂಬೆ ಹುಳಿ’, ‘ಆಟ’, ‘ತಂಗಿಯ ಮನೆ’ ಹೀಗೆ ಹಲವು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು.

ಅಲ್ಲಿಂದ ಇವರಿಗೆ ನಿರ್ದೇಶನದ ಮೇಲೆ ಆಸಕ್ತಿ ಮೂಡಿತು. ಹಾಗಾಗಿ ತಾವೇ ಚಿತ್ರವನ್ನು ನಿರ್ದೇಶನ ಮಾಡಲು ಮುಂದಾದರು. ಚೊಚ್ಚಲ ಚಿತ್ರದಲ್ಲಿಯೇ ಒಳ್ಳೆಯ ಕಥೆಯನ್ನು ತೆರೆಗೆ ತರಬೇಕು ಎಂಬ ಹಂಬಲ ಇವರಲ್ಲಿತ್ತು. ಅದಕ್ಕಾಗಿ ನೈಜಘಟನೆಯನ್ನು ಅರಸುತ್ತಾ ಹೊರಟರು. ಆಗ ಇವರ ಸ್ನೇಹಿತರು ಅನುಭವಿಸಿದ ನೋವಿನ ಕಥೆಯನ್ನು ಆಯ್ದುಕೊಂಡು ಚಿತ್ರಕಥೆ ಹೆಣೆದರು. ಅಂತು ಆ ಕಥೆಯನ್ನು ತೆರೆಯ ಮೇಲೆ ತರುವಲ್ಲಿಯೂ ಯಶಸ್ವಿಯಾಗಿದ್ದಾರೆ.

ಚಿತ್ರದ ಕಥಾವಸ್ತು ಮತ್ತು ನಿರೂಪಣೆಯು ಭಿನ್ನವಾಗಿದ್ದು, ಎಲ್ಲರಿಗೂ ಮೆಚ್ಚುಗೆಯಾಗಲಿದೆ ಎನ್ನುತ್ತಾರೆ ನಿರ್ದೇಶಕರು. ಮೆಳೇ ಕೋಟೆ ಟೂರಿಂಗ್ ಟಾಕೀಸ್ ಹಾಗೂ ಮೈತ್ರಿ ಪ್ರೊಡಕ್ಷನ್‌ನಲ್ಲಿ ನಿರ್ಮಾಣವಾಗಿರುವ ‘ಮಹಿಷಾಸುರ’ದಲ್ಲಿ ಬಿಂದುಶ್ರೀ ಹಾಗೂ ಮಂಜು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಜ್ಯದ ಸುಮಾರು 70ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ
‘ಮಹಿಷಾಸುರ’ನ ಅಬ್ಬರ ಆರಂಭವಾಗಿದೆ.