Friday, 13th December 2024

ಮೂರು ಮತ್ತೊಂದರಲ್ಲಿ ಮಮತಾ

ವಿಪ್ರ ಪ್ರೊಡಕ್ಷನ್ಸ್ ಲಾಂಛನದಲ್ಲಿ ವೀಣಾ, ನಿರ್ಮಿಸುತ್ತಿರುವ ‘ಮೂರು ಮತ್ತೊಂದು’ ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ನಡೆಯುತ್ತಿದೆ. ಪ್ರಶಾಂತ್ ಅಂಕಪುರ ಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಲವ್, ಸಸ್ಪೆನ್ಸ್ ಹಾಗೂ ಹಾರರ್ ಕಥಾಹಂದರವಿದೆ.

‘ಮೂರು ಮತ್ತೊಂದು’, ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇಬ್ಬರು ಪ್ರೇಮಿಗಳ ನಡುವೆ ಬರುವ ಮತ್ತೊಬ್ಬ ವ್ಯಕ್ತಿ, ಅದರಿಂದ ಏನೆಲ್ಲಾ ಅನಾಹುತಗಳು ಸಂಭ ವಿಸುತ್ತದೆ. ಎಂಬುದೇ ಚಿತ್ರದ ಸಸ್ಪೆನ್ಸ್. ಚಿತ್ರದ ನಾಯಕಿಯಾಗಿ ಮಮತಾ ಅಭಿನಯಿಸುತ್ತಿದ್ದಾರೆ. ಪುಟ್‌ಬಾಲ್ ಆಟಗಾರ್ತಿಯಾದ ಮಮತಾ, ರಾಷ್ಟ್ರ ಮಟ್ಟದ ಪುಟ್‌ಬಾಲ್ ಪಂದ್ಯಾವಳಿಯಲ್ಲಿಯೂ ಭಾಗವಹಿಸಿ ಪ್ರಶಸ್ತಿಯನ್ನು
ಪಡೆದುಕೊಂಡಿದ್ದಾರೆ.

ಬಾಲ್ಯದಿಂದಲೂ ಸಿನಿಮಾದಲ್ಲಿ ಆಸಕ್ತಿ ಇದ್ದ ಕಾರಣ ಇಂದು ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಬೆಂಗಳೂರು ಮೂಲದ ಮಮತಾ, ನೃತ್ಯ ನಾಟಕ, ಸಂಗೀತದ ಬಗ್ಗೆ ಆಸಕ್ತಿ ಹೊಂದಿದ್ದು, ಭರತ ನಾಟ್ಯದಲ್ಲೂ ಪರಿಣಿತಿ ಪಡೆದಿ ದ್ದಾರೆ. ‘ಹರಹರ ಮಹಾ ದೇವ’, ‘ಜೈ ಹನುಮಾನ್’ ,‘ಮಹಾಕಾಳಿ’, ‘ಶನಿ’, ‘ಗಟ್ಟಿಮೇಳ’, ಧಾರಾವಾಹಿಗಳಲ್ಲಿ ನಟಿಸಿರುವ ರಾಜ್ ಮಣೀಶ್, ನಾಯಕನಾಗಿ ನಟಿಸುತ್ತಿದ್ದಾರೆ.

ರಿಸ್ ಜಾನಿ ಸಾಹಸ ನಿರ್ದೇಶನದ ಜವಾಬ್ಧಾರಿ ಹೊತ್ತುಕೊಂಡಿದ್ದಾರೆ. ಚಿತ್ರಕ್ಕೆ ಸುರೇಶ್ ಬಾಬು ಛಾಯಾಗ್ರಹಣ, ಪಳನಿ ಸೇನಾಪತಿ ಸಂಗೀತ, ಗಣೇಶ್ ಶೆಟ್ಟಿ ಚಿತ್ರಕಥೆ,  ಸಂಭಾಷಣೆ ಹಾಗೂ ಸಹಕಾರ ನಿರ್ದೇಶನದೆ. ಚಿತ್ರದಲ್ಲಿ ಮೂರು ಹಾಡುಗಳಿವೆ. ಮೈಸೂರು, ಸಕಲೇಶಪುರ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.