Friday, 13th December 2024

ಟಕ್ಕರ್‌ ಕೊಡಲು ಬಂದ ಮನೋಜ್‌

ಸೈಬರ್ ಕ್ರೈಂ ಕಥಾಹಂದರದ ಟಕ್ಕರ್ ಈ ವಾರ ತೆರೆಗೆ ಬಂದಿದೆ. ಈ ಚಿತ್ರದ ಮೂಲಕ ಮನೋಜ್ ನಾಯಕನಾಗಿ ಚಂದನವನಕ್ಕೆ ಪರಿಚಿತರಾಗುತ್ತಿದ್ದಾರೆ. ಹಾಗಂತ ಮನೋಜ್ ಚಿತ್ರರಂಗಕ್ಕೆ ಹೊಸರಬರೇನು ಅಲ್ಲ, ಈ ಹಿಂದೆ ಹಲವು ಚಿತ್ರಗಳಲ್ಲಿ ಸಹ ನಟನಾಗಿ ಅಭಿನಯ ತೋರಿದ್ದಾರೆ.

ಇದೇ ಮೊದಲ ಬಾರಿಗೆ ನಾಯಕನಾಗಿ ಮಿಂಚಲಿದ್ದಾರೆ. ಟಕ್ಕರ್ ಶೀರ್ಷಿಕೆಯೇ ಪಂಚಿಂಗ್ ಆಗಿದೆ. ಅದೇ ರೀತಿ ಒಳ್ಳೆಯ ಕಥೆ ಚಿತ್ರದಲ್ಲಿದೆ. ಆಧುನಿಕ ಯುಗದಲ್ಲಿ ಮೈಮರೆತಿರುವ ನಮಗೆಲ್ಲರಿಗೂ ಚಿತ್ರದಲ್ಲಿ ಒಳ್ಳೆಯ ಸಂದೇಶವೂ ಇದೆ. ಟಕ್ಕರ್ ಟ್ರೇಲರ್ ನೋಡಿದವರಿಗೆಲ್ಲಾ ಇದು ಥ್ರಿಲ್ಲರ್, ಆಕ್ಷನ್ ಸಿನಿಮಾ ಎಂಬುದು ಖಚಿತವಾಗಿದೆ. ಚಿತ್ರದಲ್ಲಿ ಯಾರು ಯಾರಿಗೆ ಟಕ್ಕರ್ ಕೊಡಲಿದ್ದಾರೆ ಎಂಬುದೇ ಕುತೂಹಲ ಕೆರಳಿಸುವ ಅಂಶ.

ಇಂದಿನ ಆಧುನಿಕ ಯುಗದಲ್ಲೂ ನಾವೆಲ್ಲರೂ ಮೊಬೈಲ್, ಲ್ಯಾಪ್ ಬಳಸುತ್ತೇವೆ. ಮೊಬೈಲ್ ಇಲ್ಲದಿದ್ದರೆ, ನಮಗೆ ಏನೂ ತೋಚದಂತಹ ಪರಿಸ್ಥಿತಿಗೆ ನಾವು ತಲುಪಿದ್ದೇವೆ. ಹೀಗಿರುವಾಗ ಎಚ್ಚರ ತಪ್ಪಿದರೆ, ನಮಗೆ ಅರಿವಿಲ್ಲದೆ ನಮ್ಮ ಖಾಸಗಿತನ ಹೇಗೆ ಬೇರೆಯವರಿಗೆ ಬಂಡವಾಳವಾಗಬಹುದು. ಅದರಿಂದ ಏನೆಲ್ಲಾ ಅನಾಹುತಗಳು ಸಂಭವಿಸಬಹುದು. ಎಂಬುದನ್ನು ಟಕ್ಕರ್ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ.

ಭರ್ಜರಿ ತಯಾರಿ
ಈ ಚಿತ್ರದ ಕಥೆ ಕೇಳಿದ ಮನೋಜ್, ಬಲು ಇಷ್ಟಪಟ್ಟು ನಟಿಸಿದ್ದಾರೆ. ಕಥೆಗೆ ತಕ್ಕಂತೆ ಚಿತ್ರಕ್ಕೆ ಭರ್ಜರಿ ತಯಾರಿ ಆರಂಭಿಸಿದ್ದಾರೆ. ಸೈಬರ್ ಕ್ರೈಂಗೆ ಸಂಬಂಧ ಪಟ್ಟಂತೆ ಒಂದಷ್ಟು ವಿಚಾರಗಳನ್ನು ಕಲೆಹಾಕಿದ್ದಾರೆ. ಅದರ ಜತೆಗೆ ಈ ಹಿಂದೆ ಬಂದ ಸಿನಿಮಾಗಳನ್ನು ನೋಡಿ ಅದರಿಂದಲೂ ಒಂದಷ್ಟು ತಿಳಿದ  ಕೊಂಡಿ ದ್ದಾರೆ. ಬಳಿಕ ಕಥೆಗೆ ತಕ್ಕಂತೆ ಅಭಿನಯಿಸಿ ಚಿತ್ರಕ್ಕೆ ಜೀವತುಂಬಿದ್ದಾರೆ. ಯುವತಿಯರೇ ಸೈಬರ್ ಖದೀಮರ ಮೊದಲ ಟಾರ್ಗೆಟ್ ಅವರ ಖಾಸಗಿ ವಿಚಾರಗಳೇ ಅವರ ಬಂಡವಾಳ, ಸೈಬರ್ ಅನಾಹು ತಗಳಿಂದ ನೊಂದ ಹಲವು ಯುವತಿಯರು ಆತ್ಮಹತ್ಯೆ ಮಾಡಿ ಕೊಳ್ಳುತ್ತಾರೆ.

ಇನ್ನೂ ಕೆಲವರಿಗೆ ಅಭದ್ರತೆ ಕಾಡುತ್ತಿರುತ್ತದೆ. ಸೈಬರ್ ಕಳ್ಳತನಕ್ಕೆ ಕಡಿವಾಣವೇ ಇಲ್ಲವೇ ಎನ್ನುವ ಸಂದರ್ಭ ಬಂದಾಗ ನಾಯಕ ಬರುತ್ತಾನೆ. ಖದೀಮರಿಗೆ ಟಕ್ಕರ್ ಕೊಡಲು ಸಿದ್ಧವಾಗುತ್ತಾನೆ. ಪ್ರತಿ ಹಂತದಲ್ಲೂ ದುರುಳರಿಗೆ ದುಸ್ವ ಪ್ನವಾಗಿ ಕಾಡುತ್ತಾನೆ. ಇದಕ್ಕೆ ಒಂದಷ್ಟು ರೋಚಕ ಅಂಶಗಳನ್ನು ಬೆರೆಸಿ ಮನರಂಜನೆಯ ಮೂಲಕ ಚಿತ್ರದಲ್ಲಿ ಅಚ್ಚುಮಟ್ಟಾಗಿ ಕಟ್ಟಿಕೊಡಲಾಗಿದೆ.

ಹೊಸ ಹುಮ್ಮಸ್ಸು
ಮನೋಜ್ ಟಕ್ಕರ್ ಮೂಲಕ ನಾಯಕನಾಗಿ ಬೆಳ್ಳಿತೆರೆಯಲ್ಲಿ ಅಬ್ಬರಿಸಲು ಬರುತ್ತಿದ್ದಾರೆ. ಹಾಗಾಗಿ ಸಹಜವಾಗಿಯೇ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ.
ಚಿತ್ರದಲ್ಲಿ ಒಳ್ಳೆಯ ಕಂಟೆಂಟ್ ಇದೆ, ಇಂದು ಪ್ರೇಕ್ಷಕರು ಬಯಸುವ ಎಲ್ಲಾ ಅಂಶಗಳು ಚಿತ್ರದಲ್ಲಿವೆ. ಚಿತ್ರವನ್ನು ಖಂಡಿತಾ ಎಲ್ಲರೂ ಮೆಚ್ಚುತ್ತಾರೆ ಎಂಬ ನಂಬಿಕೆ ನನಗಿದೆ ಎನ್ನುತ್ತಾರೆ ಮನೋಜ್. ಟಕ್ಕರ್ ಚಿತ್ರದ ಹಾಡುಗಳು ಈಗಾಗಲೇ ಸಂಗೀತ ಪ್ರಿಯರ ಮನಗೆದ್ದಿವೆ.

ಮನೋಜ್‌ಗೆ ಜತೆಯಾಗಿ ರಂಜನಿ ರಾಘವನ್ ಬಣ್ಣಹಚ್ಚಿದ್ದಾರೆ. ಉಳಿದಂತೆ ಭಜರಂಗಿ ಲೋಕಿ, ಜೈ ಜಗದೀಶ್ , ಶ್ರೀಧರ್, ಶಂಕರ್ ಅಶ್ವತ್ಥ್ ಸಾಧು ಕೋಕಿಲ ಮತ್ತಿತರರು ಚಿತ್ರದ ತಾರಾಬಳಗದಲ್ಲಿದ್ದಾರೆ. ರಘು ಶಾಸಿ ನಿರ್ದೇಶನದಲ್ಲಿ ಸಿನಿಮಾ ಮೂಡಿಬಂದಿದ್ದು, ಎಸ್‌ಎಲ್‌ಎನ್ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ನಾಗೇಶ್ ಕೋಗಿಲು ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ.