Saturday, 14th December 2024

ಸೋಮಾರಿ ಸಿದ್ದ ಹರಿ-ಮೋಸ್ಟ್ ರೆಸ್ಪಾನ್ಸಿಬಲ್ ಪರ್ಸನ್

ದಢೂತಿ ದೇಹದ ನಾಯಕನನ್ನು ಇಟ್ಟುಕೊಂಡು ಹೀಗೂ ಸಿನಿಮಾ ಮಾಡಬಹುದು. ತೆರೆಯಲ್ಲಿ ಮನರಂಜನೆಯನ್ನು ಕಟ್ಟಿ ಕೊಡಬಹುದು ಎಂಬುದನ್ನು ನಿರ್ದೇಶಕ ಬಾಹುಬಲಿ ಎಂಆರ್‌ಪಿ ಚಿತ್ರದ ಮೂಲಕ ತೋರಿಸಿಕೊಟ್ಟಿದ್ದಾರೆ. ಮೋಸ್ಟ್ ರೆಸ್ಪಾನ್ಸಿ ಬಲ್ ಪರ್ಸನ್ ಎಂಬುದೇ ಚಿತ್ರದ ವಿಸ್ತೃತ ರೂಪ.

ಅರೆ ಸೋಮಾರಿಯಾದ ದಢೂತಿ ದೇಹದ ವ್ಯಕ್ತಿ ಹೇಗೆ ರೆಸ್ಪಾನ್ಸಿಬಲ್ ಪರ್ಸನ್ ಆಗಬಹುದು ಎಂದು ನೀವು ಆಶ್ಚರ್ಯಪಡ ಬಹುದು. ಅದೇ ಎಂಆರ್‌ಪಿಯ ಸಸ್ಪೆಷಾಲಿಟಿ. ಎಂಆರ್‌ಪಿ ನೈಜ ಘಟನೆಯಿಂದ ಪ್ರೇರೆಪಿತವಾದ ಸಿನಿಮಾ. ನಿರ್ದೇಶಕ ಬಾಹುಬಲಿ ತಮ್ಮ ಸುತ್ತಮುತ್ತ ನಡೆದ ಘಟನೆಗಳನ್ನೇ ಕಲೆ ಹಾಕಿ, ಕಥೆ ರಚಿಸಿ ಅದನ್ನು ಸಿನಿಮಾ ತೂಪದಲ್ಲಿ ತೆರೆಗೆ ತಂದಿದ್ದಾರೆ. ಸೋಮಾರಿ ಯಾದ ದಢೂತಿ ದೇಹಿ, ಎಷ್ಟು ಅವಮಾನ ಅನುಭವಿಸುತ್ತಾನೆ.

ಕಷ್ಟಕ್ಕೆ ಸಿಲುಕುತ್ತಾನೆ ಎಂಬುದನ್ನು ಸೂಚ್ಯವಾಗಿ ಈ ಚಿತ್ರದಲ್ಲಿ ಹೇಳಿದ್ದಾರೆ. ಅದಕ್ಕೆ ಒಂದಷ್ಟು ಹಾಸ್ಯವನ್ನು ಬೆರೆಸಿ, ತೆರೆಗೆ ತಂದಿದ್ದಾರೆ. ಚೈತನ್ಯದ ಚಿಲುಮೆ ಇಲ್ಲಿ ನಾಯಕ ದೈತ್ಯದೇಹಿ. ತಿನ್ನುವುದು ಎಂದರೆ ಬಲು ಅಚ್ಚುಮೆಚ್ಚು. ಅದೇ ಕೆಲಸ ಎಂದರೆ ಹಿಂದೇಟು ಹಾಕುತ್ತಾನೆ. ಇದರಿಂದಲೇ ಆಗಾಗ ಪೇಚಿಗೆ ಸಿಲುಕುತ್ತಾನೆ. ಎಲ್ಲರೂ ಈತನನ್ನು ರೇಗಿಸುವವರೆ, ಆತನ ವರ್ತನೆಯಿಂದ ಅವನಿಗೆ ಯಾವ ಜವಾಬ್ದಾರಿಯನ್ನು ನೀಡಲು ಸಿಬ್ಬಂದಿಗಳು ಹಿಂದೇಟು ಹಾಕುತ್ತಾರೆ. ಕೊನೆಗೆ ಆತ ಇದ್ದಕ್ಕಿದ್ದಂತೆ ಬದಲಾಗು ತ್ತಾನೆ.

ಜವಾಬ್ದಾರಿಯುತ ವ್ಯಕ್ತಿಯಾಗಿ ಗುರುತಿಕೊಂಡು ಎಲ್ಲರ ಹೃದಯವನ್ನು ಗೆಲ್ಲುತ್ತಾನೆ. ಹುಡುಗಿ ಯ ಪ್ರೀತಿಯಲ್ಲಿಯೂ ಬೀಳುತ್ತಾನೆ. ಈ ಸೋಮಾರಿ ಸಿದ್ಧನಿಗೆ ಇದೆಲ್ಲ ಹೇಗೆ ಸಾದ್ಯವಾಯಿತು. ರೆಸ್ಪಾನ್ಸಿಬಲ್ ವ್ಯಕ್ತಿಯಾಗಲು ಯಾರು ಸ್ಫೂರ್ತಿ ನೀಡಿದರು ಎಂಬುದೇ ಚಿತ್ರದ ಸಸ್ಪೆನ್ಸ್. ಅದನ್ನು ತೆರೆಯಲ್ಲಿ ನೋಡಿಯೇ ತಿಳಿಯಬೇಕು ಎನ್ನುತ್ತಾರೆ ನಿರ್ದೇಶಕರು.

ಛಲವಿದ್ದರೆ ಎಲ್ಲವೂ ಸಾಧ್ಯ
ಈ ಹಿಂದೆ ಫ್ರೆಂಡ್ಸ್ ಚಿತ್ರದಲ್ಲಿ ಡುಮ್ಮಣ್ಣನ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರನ್ನೂ ನಗಿಸಿದ್ದ, ಹರಿ ಎಂಆರ್‌ಪಿ ಚಿತ್ರದ ಮೂಲಕ ನಾಯಕನಾಗಿ ನಟಿಸುತ್ತಿದ್ದಾರೆ. ನಾಯಕಿಯೊಂದಿಗೆ ಡ್ಯುಯೆಟ್ ಹಾಡುತ್ತಾರೆ. ತನ್ನನ್ನು ಕೆಣಕಿದ ದುರಳರಿಗೆ ತಕ್ಕ ಶಾಸ್ತಿಯನ್ನು ಮಾಡುತ್ತಾರೆ. ಸಿಟ್ಟು ಬಂದಾಗ, ಸಿಕ್ಕ ಬೈಕನ್ನು ಹಿಡಿದು ಗಿರಗಿರನೆ ತಿರುಗಿಸಿ ಎಸೆಯುತ್ತಾರೆ. ಇದೆಲ್ಲವೂ ಹೇಗೆ ಸಾಧ್ಯವಾಯಿತು ಎಂದು ಹರಿಯನ್ನು ಕೇಳಿದರೆ, ನಮ್ಮಲ್ಲಿ ಛಲವೊಂದಿದ್ದರೆ ಅಂದುಕೊಂಡದ್ದನ್ನು ಸಾಧಿಸಬಹುದು ಎಂದು ನಗುತ್ತಾ ಹೇಳುತ್ತಾರೆ.

*

ನಿರ್ಮಾಪಕರು ನನ್ನ ನಂಬಿ ಚಿತ್ರಕ್ಕೆ ಹಣ ಹೂಡಿದ್ದಾರೆ. ನಿರ್ದೇಶಕರು ಕಥೆ ಬರೆದು ನನಗಾಗಿ ಸಿನಿಮಾ ಮಾಡಿದ್ದಾರೆ. ಮಾಡು ತ್ತಾರೆ. ಅಂದರೆ ನನ್ನ ಜವಾಬ್ದಾರಿ ಎಷ್ಟಿದೆ ಎಂದು ಅರಿತುಕೊಂಡೆ. ಚಿತ್ರದ ಕಥೆಗೆ ತಕ್ಕಂತೆ ಸಿದ್ಧತೆ ಆರಂಭಿಸಿದೆ. ಡ್ಯಾನ್ಸ್ ಮಾಸ್ಟರ್ ಅವರಿಂದ ತಕ್ಕಮಟ್ಟಿಗೆ ನೃತ್ಯ ಕಲಿತೆ. ಸಾಹಸ ನಿರ್ದೇಶಕ ರಿಂದ ಫೈಟಿಂಗ್ ಟಿಕ್ನಿಕ್ ಕಲಿತುಕೊಂಡೆ, ಎಲ್ಲರ ಸಹಕಾರದಿಂದ ಕಥೆಗೆ ತಕ್ಕಂತೆ ನಟಿಸಿದ್ದೇನೆ. ಚಿತ್ರದಲ್ಲಿ ಸಿಕ್ಸ್ ಪ್ಯಾಕ್ ಹೊರತುಪಡಿಸಿದರೆ, ಕಂಪ್ಲೀಟ್ ಫ್ಯಾಮಿಲಿ ಪ್ಯಾಕ್ ಇದೆ.
-ಹರಿ ನಾಯಕ ನಟ