Saturday, 12th October 2024

ಸಂಭ್ರಮದಿಂದ ಸೆಟ್ಟೇರಿದ ನಾನ್ ಪೋಲಿ

ಯಾವುದೇ ಜವಾಬ್ದಾರಿ ಇಲ್ಲದೆ ಪೋಲಿ ಥರ ಇದ್ದ ಹುಡುಗನೊಬ್ಬನ ಜೀವನ ಹೇಗೆಲ್ಲಾ ತಿರುವು ತೆಗೆದುಕೊಂಡಿತು ಎಂಬ ಕಥಾ ನಕ ಹೊಂದಿರುವ ಚಿತ್ರ ನಾನ್ ಪೋಲಿ.

ಎಂ.ಯಶವಂತ್ ಕಥೆ, ಚಿತ್ರಕಥೆ ಬರೆದು ಮೊದಲಬಾರಿಗೆ ನಿರ್ದೇಶನ ಮಾಡುತ್ತಿರುವ ಈ ಚಿತ್ರದ ಮುಹೂರ್ತ ಸಮಾರಂಭ ನಾಗರಭಾವಿಯ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ದಲ್ಲಿ ನೆರವೇರಿತು. ಹರೀಶ್ ವಿ. ಈ ಚಿತ್ರದ ನಾಯಕ ಮತ್ತು ನಿರ್ಮಾಪಕ, ದಿಶಾ ಶೆಟ್ಟಿ ನಾಯಕಿ, ಕೀರ್ತಿ ವರ್ಧನ್ ಅವರ ಕ್ಯಾಮೆರಾವರ್ಕ್ ಈ ಚಿತ್ರಕ್ಕಿದ್ದು, ಚೇತನ್ ಸಿ.ವಿ. ಸಂಗೀತ ಸಂಯೋಜಿಸುತ್ತಿದ್ದಾರೆ. ಈ ಚಿತ್ರಕ್ಕಾಗಿಯೇ ೬ ತಿಂಗಳ ಕಾಲ ವರ್ಕ್ ಮಾಡಿದೆ.

ಒಳ್ಳೆ ಕಂಟೆಂಟ್ ಸಿಕ್ಕಿತು, ಜೊತೆಗೆ ಒಳ್ಳೆಯ ತಂಡವೂ ರಚನೆ ಆಯಿತು. ಸ್ನೇಹಿತರಿಬ್ಬರ ಕಥೆಯಿದು. ನಾಯಕ ಹೈಸ್ಕೂಲ್ ಮುಗಿಸಿ ಕಾಲೇಜಿಗೆ ಹೋದಾಗ ಅಲ್ಲಿ ಒಂದಷ್ಟು ತೊಂದರೆಗಳುಂಟಾಗುತ್ತವೆ. ಪೋಷಕರ ಕನಸುಗಳ ಕಾರಣದಿಂದ ಮಕ್ಕಳ ಜೀವನ ಹೇಗೆ ಹಾಳಾಗುತ್ತೆ ಎಂದು ಈ ಚಿತ್ರದಲ್ಲಿ ಹೇಳಹೊರಟಿದ್ದೇನೆ. ಸ್ನೇಹದ ಮಹತ್ವ, ತಾಯಿ ಸೆಂಟಿಮೆಂಟ್ ಮೇಲೆ ಚಿತ್ರದ ಕಥೆ ಸಾಗುತ್ತದೆ. ನಾಯಕ ಹರೀಶ ನೇರ ಮಾತು ಮತ್ತು ಯಾರಿಗೂ ಹೆದರದ ಸ್ವಭಾವದ ಹುಡುಗ, ಆತನಿಗೆ ತಾಯಿ ಹಾಗೂ ಸ್ನೇಹಿತ ಯಶ್ ಎರಡು ಕಣ್ಣುಗಳಿದ್ದ ಹಾಗೆ.

ಇಂಥ ಸ್ನೇಹಿತರಿಬ್ಬರ ಸಂಬಂಧದಲ್ಲಿ ಹುಳಿ ಹಿಂಡುವ ಕೆಲಸ ವಿಲನ್ ಗಳಿಂದ ನಡೆಯುತ್ತದೆ. ನಂತರ ಕಥೆ ಹೇಗೆ ಟರ್ನ್ ಆಗುತ್ತದೆ ಅನ್ನೋದೇ ನಾನ್ ಪೋಲಿ ಚಿತ್ರದ ಕುತೂಹಲ. ತಾಯಿಯ ಪಾತ್ರದಲ್ಲಿ ಸ್ವಪ್ನರಾಜ್ ಹಾಗೂ ಖಳನಾಯಕನ ಪಾತ್ರದಲ್ಲಿ ಶೋಭರಾಜ್ ಅವರುಗಳು ನಟಿಸುತ್ತಿದ್ದಾರೆ. ಚಿತ್ರಕ್ಕೆ 45 ದಿನಗಳ ಕಾಲ ಚಿತ್ರೀಕರಣದ ಪ್ಲಾನ್ ಹಾಕಿಕೊಳ್ಳಲಾಗಿದ್ದು, ಬೆಂಗಳೂರಿ ನಲ್ಲಿ ಟಾಕಿ ಮುಗಿಸಿ, ಹಾಡುಗಳಿಗೆ ಉತ್ತರ ಬಾರತದ ಕಡೆ ಹೋಗುವ ಯೋಜನೆಯಿದೆ ಎನ್ನುತ್ತಾರೆ ನಿರ್ದೇಶಕ ಯಶವಂತ್.

ಕಲಾವಿದನಾಗಬೇಕೆಂದು ೨೦೦ಕ್ಕೂ ಹೆಚ್ಚು ಆಡಿಷನ್‌ಗಳಲ್ಲಿ ಭಾಗವಹಿಸಿದ್ದೆ, ಈ ಚಿತ್ರದ ಮೂಲಕ ನಾಯಕನಾಗುವ ಅವಕಾಶ ಸಿಕ್ಕಿದೆ. ಹೈಸ್ಕೂಲ್ ಮುಗಿಸಿ ಕಾಲೇಜಿಗೆ ಹೋದ ನಂತರ ನನ್ನ ಲೈಫ್ ನಲ್ಲಿ ಏನೆಲ್ಲ ಬದಲಾವಣೆಯಾಗುತ್ತದೆ, ಸ್ನೇಹಿತ ಯಶ್ ಬುದ್ದಿವಂತ, ಆ ಕಾರಣದಿಂದಲಾದರೂ ಮಗ ಒಂದಷ್ಟು ಓದಿಕೊಂಡರೆ ಸಾಕೆಂದು ಕನಸು ಕಾಣುವ ತಾಯಿಯ ಆಸೆ ಈಡೇರಿತೇ ಇಲ್ಲವೇ ಎಂದು ಈ ಚಿತ್ರದಲ್ಲಿ ಹೇಳುತ್ತಿದ್ದೇವೆ ಎಂದರು ಹರೀಶ್.