Wednesday, 11th December 2024

ಡಬ್ಬಿಂಗ್‌ ಮುಗಿಸಿದ ನೀತಾ

ಕನ್ನಡ ಚಿತ್ರರಂಗದಲ್ಲಿ ವಿಕ್ರಾಂತ್ ರೋಣ ಹೊಸ ದಾಖಲೆ ಬರೆಯಲಿದೆ ಎನ್ನಲಾಗುತ್ತಿದೆ. ಡಬ್ಬಿಂಗ್ ಹಂತದಲ್ಲಿರುವ ವಿಕ್ರಾಂತ್ ರೋಣ ಈ ವರ್ಷವೇ ತೆರೆಗೆ ಬರಬಹುದು ಎಂಬ ನಿರೀಕ್ಷೆಯೂ ಇದೆ. ಅದಾಗಲೇ ಚಿತ್ರದ ನಟ, ನಟಿಯರು ವಿಕ್ರಾಂತ್ ರೋಣನ ಬಗ್ಗೆ ಆಡುತ್ತಿರುವ ಮಾತುಗಳು ಚಿತ್ರದ ಬಗ್ಗೆ ಕುತೂಹಲ ಹೆಚ್ಚುವಂತೆ ಮಾಡಿದೆ. ಈ ಹಿಂದೆ ನಟ ರವಿಶಂಕರ್ ಗೌಡ, ವಿಕ್ರಾಂತ್ ರೋಣ ಚಿತ್ರದ ಪ್ರತಿ ದೃಶ್ಯವೂ ಥ್ರಿಲ್ ಹೆಚ್ಚಿಸುತ್ತದೆ ಎಂದಿದ್ದರು.

ಈಗ ನಟಿ ನೀತಾ ಅಶೋಕ್ ಕೂಡ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚುವಂತೆ ಮಾಡಿದ್ದಾರೆ. ಚಿತ್ರದ ಡಬ್ಬಿಂಗ್ ಮುಗಿಸಿರುವ ನೀತಾ, ಚಿತ್ರದ ಬಗೆಗಿನ ಇಂಟ್ರೆಸ್ಟಿಂಗ್ ಅಂಶಗಳನ್ನು ಹಂಚಿಕೊಂಡಿದ್ದಾರೆ. ಡಬ್ಬಿಂಗ್ ಸಮಯದಲ್ಲಿ ವಿಕ್ರಾಂತ್ ರೋಣ ಸಿನಿಮಾ ನೋಡಿದ ನನಗೆ ನಿರೀಕ್ಷೆ, ಉತ್ಸಾಹ, ಸಂತೋಷ ಕುತೂಹಲ, ರೋಮಾಂಚನ ಎಲ್ಲವೂ ಹೆಚ್ಚಾಗಿದೆ. ಅನೂಪ್‌ ಭಂಡಾರಿ ಸರ್ ನಿಮ್ಮ ಪರಿಕಲ್ಪನೆಗೆ ನನ್ನ ಸೆಲ್ಯೂಟ್. ಸಂಪೂರ್ಣವಾಗಿ ಸಿನಿಮಾ ನೋಡಿದ ಮೇಲೆ ರೋಮಾಂಚನ ಉಂಟಾಗುತ್ತದೆ. ಎಂದು ನೀತಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಅನೂಪ್ ಭಂಡಾರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಡಿಫರೆಂಟ್ ಲುಕ್‌ನಲ್ಲಿ ಕಂಗೊಳಿಸಿದ್ದಾರೆ. ಚಿತ್ರದ ಫಸ್ಟ್‌ಲುಕ್ ಹಾಗೂ ಟೀಸರ್ ಜಗತ್ತಿನ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ಅನಾವರಣಗೊಂಡಿತ್ತು.