Sunday, 1st December 2024

ಪೂಜಾ ಹೆಗ್ಡೆಗೆ ಬಲು ಬೇಡಿಕೆ

ನಟಿ ಪೂಜಾ ಹೆಗ್ಡೆಗೆ ಈಗ ಫುಲ್ ಡಿಮ್ಯಾಂಡ್. ಹಾಗಾಗಿಯೇ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿ ದ್ದಾರೆ. ತೆಲುಗು , ತಮಿಳುನಲ್ಲಿಯೂ ಅವಕಾಶ ಪಡೆಯುತ್ತಿರುವ ಪೂಜಾ, ತಮ್ಮ ಸಂಭಾವನೆಯನ್ನು ಹೆಚ್ಚಿಸಿ ಕೊಂಡಿದ್ದಾರೆ.

ಟಾಲಿವುಡ್ ನಿರ್ದೇಶಕ ವಂಶಿ ಪೈಡಪಲ್ಲಿ ಹೊಸ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ, ಈ ಚಿತ್ರದಲ್ಲಿ ನಿತಿನ್ ನಾಯಕ ನಾಗಿ ನಟಿಸುತ್ತಿದ್ದು, ಪೂಜಾ ನಾಯಕಿಯಾಗಿ ಅಭಿನಯಿಸಲಿದ್ದಾರೆ. ಈ ಚಿತ್ರಕ್ಕಾಗಿ ಪೂಜಾ ಹೆಗ್ಡೆ, ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ತಮ್ಮ ಹೊಸ ಚಿತ್ರಕ್ಕಾಗಿ 3.5 ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ.

ಪೂಜಾ ಸಂಭಾವನೆ ಹೆಚ್ಚಿಸಿಕೊಂಡಿದ್ದರು, ಚಿತ್ರಕ್ಕೆ ಅವರನ್ನೇ ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ ನಿರ್ಮಾ ಪಕರು. ಈ ಚಿತ್ರದ ಜತೆಗೆ ತಮಿಳಿನ ಖ್ಯಾತ ನಟ ವಿಜಯ್ ದಳಪತಿ ನಟಿಸುತ್ತಿರುವ ಬೀಸ್ಟ್ ಚಿತ್ರದಲ್ಲೂ ಪೂಜಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಮೂರು ಕೋಟಿ ಸಂಭಾವನೆ ಪಡೆದಿದ್ದಾರೆ.

ಅಲಾ ವೈಕುಂಟ ಪುರಮುಲೋ ಪೂಜಾಗೆ ಖ್ಯಾತಿ ತಂದುಕೊಟ್ಟ ಸಿನಿಮಾ, ಈ ಚಿತ್ರಕ್ಕಾಗಿ 1.40 ಕೋಟಿ ಸಂಭಾವನೆ ಪಡೆದುಕೊಂಡಿದ್ದರು. ಈ ಸಿನಿಮಾ ಬಳಿಕ ಸಂಭಾವನೆ ಏರಿಸಿಕೊಂಡರು.