Friday, 13th December 2024

ನವೆಂಬರ್‌ ಮಳೆಯಲಿ ಹೊಸ ಪ್ರೇಮಕಾವ್ಯ

ಸಂಜು ವೆಡ್ಸ್ ಗೀತಾ, ಮೈನಾ, ಅಮರ್‌ನಂತಹ ಅದ್ಭುತ ಚಿತ್ರಗಳನ್ನು ನೀಡಿದ ನಿರ್ದೇಶಕ ನಾಗಶೇಖರ್ ಈಗ ತಮಿಳು ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

ನವೆಂಬರ್ ಮಳೆಯಲ್ ನಾನುಂ ಅವಳುಂ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಮಾತ್ರವಲ್ಲ ನಾಯಕನಾಗಿಯೂ ನಟಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಬೆಂಗಳೂರಿನ ಮಿನರ್ವ ಮಿಲ್ ಆವರಣದಲ್ಲಿ ನಡೆಯುತ್ತಿದೆ. ಚಿತ್ರದ ನಿರ್ಮಾಪಕ ಸೆನ್ಸಾರ್ ಶಿವು, ಸುಮನ್ ರಂಗನಾಥ್, ಡೆಲ್ಲಿ ಗಣೇಶ್, ಅರ್ಜುನ್, ರಾಜಶೇಖರ್, ರಾಜಶೇಖರ ರೆಡ್ಡಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.

ತಮಿಳು ಭಾಷೆಯಲ್ಲಿ ನಿರ್ಮಾಣ ವಾಗುತ್ತಿರುವ ಈ ಚಿತ್ರ ಕನ್ನಡ ಹಾಗೂ ತೆಲುಗಿಗೂ ಡಬ್ ಆಗಲಿದೆ. ಇದು ಮಳೆಗಾಲದಲ್ಲಿ ನಡೆಯುವ ಪ್ರೇಮಕಥೆ. ತಮಿಳುನಾಡಿ ನಲ್ಲಿ ನವೆಂಬರ್ ತಿಂಗಳಲ್ಲಿ ಭಾರೀಮಳೆ ಯಾಗುತ್ತೆ. ಹಾಗಾಗಿ ಈ ಚಿತ್ರಕ್ಕೆ ನವೆಂಬರ್ ಮಳೆಯಲ್ ನಾನುಂ ಅವಳುಂ ಶೀರ್ಷಿಕೆ ಇಟ್ಟಿದ್ದೇನೆ.

ಮೊದಲು ಈ ಕಥೆಯನ್ನು ಬೇರೆ ಹೀರೋಗಾಗಿ ಮಾಡಿದ್ದೆ. ಇಲ್ಲಿ ನಾಯಕನಿಗೆ ಸೀಳುತುಟಿ ಯಿರುತ್ತದೆ. ಆತನಿಗೆ ತಾನೊಬ್ಬ ದೊಡ್ಡ ಸಿಂಗರ್ ಆಗಬೇಕೆಂಬ ಕನಸಿರುತ್ತದೆ. ಜತೆಗೆ ಆತನ ಜೀವನದಲ್ಲೊಂದು ಲವ್ ಸ್ಟೋರಿಯೂ ಇದೆ. ಆ ನಾಯಕ ಈ ಕಥೆ ಮಾಡಿದರೆ ಸೆನ್ಸಾರ್‌ನಿಂದ ಪ್ರಾಬ್ಲಂ ಆಗಬಹುದು ಎಂಬ ಕಾರಣಕ್ಕಾಗಿ ನಾನೇ ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದೇನೆ. ತಮಿಳಲ್ಲಿ ಈ ರೀತಿಯ ಕಥೆಯನ್ನು ಹೆಚ್ಚು ಇಷ್ಟಪಡು ತ್ತಾರೆ ಎಂಬ ಕಾರಣಕ್ಕೆ ಮೊದಲು ತಮಿಳಲ್ಲಿ ಮಾಡುತ್ತಿದ್ದೇನೆ.

ಮಲೆಯಾಳಂನ ಅನು ಸಿತಾರಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಡೆಲ್ಲಿ ಗಣೇಶ್, ದತ್ತಣ್ಣ, ರಂಗಾಯಣ ರಘು ಕೂಡ ಅಭಿ ನಯಿಸಿದ್ದಾರೆ. ರಾಜಶೇಖರ್ ಸಿಎಂ qಪಾತ್ರ ಮಾಡಿದ್ದಾರೆ. ಸುಮನ್ ರಂಗನಾಥ್ ಪೊಲೀಸ್ ಕಮಿಷನರ್ ಪಾತ್ರದಲ್ಲಿ ಕಾಣಿಸಿ ಕೊಳ್ಳುತ್ತಿದ್ದಾರೆ. ಶಬ್ಬೀರ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ಮದನ್ ಕಾರ್ಕಿ ಸಾಹಿತ್ಯ ಬರೆದಿದ್ದಾರೆ. ನವೆಂಬರ್ ೧೧ರಂದು ಚಿತ್ರ ಬಿಡುಗಡೆಯಾಗಲಿದೆ.