Friday, 13th December 2024

ಪುರುಷೋತ್ತಮನಾದ ಜಿಮ್ ರವಿ

ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಎ.ವಿ.ರವಿ, ಜಿಮ್ ರವಿ ಎಂದೇ ಖ್ಯಾತಿ ಪಡೆದಿ ದ್ದಾರೆ.

ರವಿ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಯ 140ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. ತಮ್ಮದೇ ಜಿಮ್ ಕೇಂದ್ರವನ್ನು ತೆರೆದು ಅಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಇದೆಲ್ಲಾ ಅನುಭವಗಳಿಂದ ಈಗ ‘ಪುರುಷೋತ್ತಮ’ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕ ನಾಗಿ ಅಭಿನಯಿಸುತ್ತಿದ್ದಾರೆ. ಜತೆಗೆ ರವಿಸ್ ಜಿಮ್ ಪ್ರೊಡಕ್ಷ್ಸ್ ಮೂಲಕ ನಿರ್ಮಾಪಕರಾಗಿ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಚಿತ್ರದ ಮಹೂರ್ತವೂ ಅದ್ಧೂರಿಯಾಗಿ ನಡೆದಿದ್ದು, ಚಿತ್ರದ ಪ್ರಥಮ ದೃಶ್ಯಕ್ಕೆ ಕಲಾ ಸಾಮ್ರಾಟ್ ಎಸ್.ನಾರಾಯಣ್ ಕ್ಲಾಪ್ ಮಾಡಿ ಶುಭ ಹಾರೈಸಿದರು.

ಜೈಜಗದೀಶ್, ವಿಜಯಲಕ್ಷೀ ಸಿಂಗ್ ಮತ್ತಿತರರು ಮಹೂರ್ತಕ್ಕೆ ಆಗಮಿಸಿ ಶುಭ ಕೋರಿದರು. ನಿರ್ದೇಶಕ ಎಸ್.ವಿ.ಅಮರನಾಥ್ ಸಿನಿಮಾಕ್ಕೆ ಚಿತ್ರಕಥೆ, ಸಂಭಾಷಣೆ ಬರೆದಿದ್ದು, ಆ್ಯಕ್ಷನ್‌ಕಟ್ ಹೇಳುತ್ತಿದ್ದಾರೆ. ರವಿ ಅವರನ್ನು ಇಲ್ಲಿಯವರೆಗೂ ಕ್ರೀಡಾಪಟು, ಕಲಾವಿದನಾಗಿ ನೋಡಿದ್ದೀರಾ. ಈಗ ಅವರಲ್ಲಿರುವ ಕಲಾವಿದನನ್ನು ಬೇರೆ ತರಹ ಪರದೆ ಮೇಲೆ ತೋರಿಸುವ ಪ್ರಯತ್ನ ಮಾಡ ಲಾಗುವುದು. ಚಿತ್ರದಲ್ಲಿ ಕ್ರೀಡೆ, ಆ್ಯಕ್ಷನ್ ಖಂಡಿತ ಇರುವುದಿಲ್ಲ. ಪೂರ್ಣ ಪ್ರಮಾಣದ ಹಾಸ್ಯದ ಎಳೆಯಲ್ಲಿ ಕಥೆಯು ಸಾಗುತ್ತದೆ. ಮಧ್ಯಮ ವರ್ಗದ ಕುಟುಂಬದವರು ಪ್ರತಿ ನಿತ್ಯ ಏನಾದರೂ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ.

ಆ ತರಹದ ದೊಡ್ಡದಾದ ಚಾಲೆಂಜ್ ಇವರ ಜೀವನದಲ್ಲಿ ಬಂದಾಗ, ಅದನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದೇ ಚಿತ್ರದ ಒನ್‌ಲೈನ್ ಸ್ಟೋರಿಯಾಗಿದೆ . ಇಲ್ಲಿ ನಾಯಕ ದೇಹಶಕ್ತಿಯನ್ನು ಪ್ರದರ್ಶಿಸದೆ, ಕೇವಲ ಬುದ್ದಿಶಕ್ತಿಯಿಂದ ಹೇಗೆ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತಾನೆ ಎಂಬುದು ಚಿತ್ರದ ಸಾರಾಂಶವಾಗಿದೆ. ಬೆಂಗಳೂರು ಹಾಗೂ ಮೈಸೂರಿನ ಸುಂದರ ತಾಣಗಳಲ್ಲಿ ಚಿತ್ರೀಕ ರಣ ನಡೆಸಲು ಯೋಜನೆ ರೂಪಿಸಲಾಗಿದೆ.

ಡಾ.ರಾಜ್‌ಮಾರ್ ಅವರ ಅಭಿಮಾನಿಯಾಗಿ, ಅಣ್ಣಾವ್ರ ಹೇಳಿದ ಒಂದು ಮಾತನ್ನು ಇಂದಿಗೂ ಉಳಿಸಿಕೊಂಡಿದ್ದೇನೆ. ನಾಯಕ ನಿಂದ ಒದೆ ತಿನ್ನಿಸಿಕೊಳ್ಳುತ್ತಿರುವ ದೃಶ್ಯಗಳನ್ನು ನೋಡಿತ್ತಿದ್ದ ಹಿತೈಷಿಗಳು, ನೀವು ಯಾವಾಗ ಹೀರೋ ಆಗುವುದು ಅಂತ ಹತ್ತು ವರ್ಷದಿಂದ ಕೇಳುತ್ತಿದ್ದರು. ಅದಕ್ಕೆ ಈಗ ಕಾಲ ಕೂಡಿಬಂದಿದೆ. ಒಂದಷ್ಟು ಕಡೆ ನೋವಿನ ಸಂಗತಿ ನಡೆಯಿತು.

ಅದೆಲ್ಲಾವನ್ನು ಸ್ಪೂರ್ತಿಯಾಗಿ ಪಡೆದುಕೊಂಡಿದ್ದೆ. ನಿರ್ದೇಶಕರು ಯಾವುದೇ ರೋಲ್ ಕೊಟ್ಟರೂ ಶ್ರದ್ಧೆಯಿಂದ ನಟಿಸುತ್ತಿದ್ದೆ. ಹಣದ ಹಿಂದೆ ಯಾವತ್ತು ಹೋಗಿರಲಿಲ್ಲ. ನಟನೆಗೆ ಆದ್ಯತೆ ನೀಡಿದ್ದೇನೆ. ಮುಂದೆಯೂ ಅದೇ ನನ್ನ ಗುರಿ. ಪಾತ್ರದ ಸಲುವಾಗಿ
ಹದಿನೆಂಟು ಕೆ.ಜಿ ತೂಕ ಕಡಿಮೆ ಮಾಡಿಕೊಂಡಿದ್ದೇನೆ. ಈಗ ತೆರೆಯಲ್ಲಿ ನಾಯಕನಾಗಿ ಮಿಂಚಲು ಕಾತರನಾಗಿದ್ದೇನೆ ಎನ್ನುತ್ತಾರೆ ಜಿಮ್ ರವಿ. ಚಿತ್ರಕ್ಕೆ ಶ್ರೀಧರ್.ವಿ.ಸಂಭ್ರಮ್ ಸಂಗೀತ ನೀಡುತ್ತಿದ್ದಾರೆ. ಅರ್ಜುನ್ ಕಿಟ್ಟು, ಬೇಬಿ ಅಂಕಿತಾ ಮೂರ್ತಿ ಮತ್ತಿತರರು ಚಿತ್ರದ ತಾರಾಬಳಗದಲ್ಲಿದ್ದಾರೆ.