Friday, 13th December 2024

ಪುರುಷೋತ್ತಮನಿಗೆ ರಿಷಬ್‌ ಶೆಟ್ಟಿ ಸಾಥ್‌

ಬಹು ದಿನಗಳಿಂದ ಸದ್ದು ಮಾಡುತ್ತಿರುವ ಪುರುಷೋತ್ತಮ ಚಿತ್ರದ ಟ್ರೇಲರ್ ರಿಲಿಸ್ ಆಗಿದೆ. ನಟ, ನಿರ್ದೇಶಕ ರಿಷಬ್ ಶೆಟ್ಟಿ ಟ್ರೇಲರ್ ಬಿಡುಗಡೆ ಮಾಡಿ ಶುಭಕೋರಿದರು. ಬಾಡಿ ಬಿಲ್ಡರ್‌ ಗಳು ಅಂದರೆ ವಿದೇಶದಲ್ಲಿ ಮಾತ್ರ ಇರುತ್ತಾರೆಂದು ಚಿಕ್ಕಂದಿನಲ್ಲಿ ತಿಳಿದುಕೊಂಡಿದ್ದೆ.

ರವಿ ಅವರ ಚಿತ್ರಗಳನ್ನು ನೋಡಿ ನಮ್ಮಲ್ಲೂ ಇಂಥವರು ಇದ್ದಾರೆಂದು ಖುಷಿಯಾಗಿದೆ. ರವಿ ಎನರ್ಜಿ ನೋಡಿದರೆ ಸಂತಸ ವಾಗುತ್ತದೆ. ಪ್ರತಿಯೊಬ್ಬರಿಗೂ ನಟನಾಗಬೇಕೆಂಬ ಆಸೆ ಇರುತ್ತದೆ. ಅಂತೆಯೇ ರವಿ ಖಳ ನಟನಿಂದ ನಾಯಕ ನಟನಾಗಿ ತೆರೆಯಲ್ಲಿ ಮಿಂಚಲು ಸಿದ್ಧವಾಗಿದ್ದಾರೆ ಎಂದು ರಿಷಬ್ ಮೆಚ್ಚುಗೆ ವ್ಯಕ್ತಪಡಿಸಿದರು.

ಎಸ್.ವಿ.ಅಮರನಾಥ್ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಪುರುಷರಲ್ಲಿ ಉತ್ತಮ ಪುರುಷೋತ್ತಮ, ಅದೇ ಅಂಶ ಚಿತ್ರದ ಕಥೆಯಲ್ಲಿದೆ. ಗೃಹಸ್ಥನಾದ ನಾಯಕ ತನ್ನ ಕುಟುಂಬವನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ ಎಂಬುದನ್ನು ಚಿತ್ರದಲ್ಲಿ ಹೇಳಲಾಗಿದೆ.  ಗಂಭೀರ ವಾದ ಅಂಶವನ್ನು ಥ್ರಿಲ್ಲರ್ ಮೂಲಕ ತೋರಿಸಲಾಗಿದೆ ಎಂದು ನಿರ್ದೇಶಕರು ಹೇಳಿದರು. ಶೋಷಣೆಗೆ ಒಳಗಾದ ಹೆಣ್ಣನ್ನು ಗಂಡನಾದವನು ಯಾವ ರೀತಿ ಕಾಪಾಡುತ್ತಾನೆ.

ಗಂಡನ ಜವಬ್ದಾರಿ ಎಷ್ಟು ಮುಖ್ಯವಾಗರುತ್ತದೆ ಎನ್ನುವುದೇ ಚಿತ್ರದ ಮುಖ್ಯ ತಿರುಳು ಎಂದು ನಟ ನಿರ್ಮಾಪಕ ಜಿಮ್ ರವಿ ಹೇಳಿದರು. ರವಿಗೆ ಜತೆಯಾಗಿ ಅಪೂರ್ವಾ ಬಣ್ಣಹಚ್ಚಿದ್ದಾರೆ. ಶ್ರೀಧರ್ ಸಂಭ್ರಮ್ ಸಂಗೀತ ನಿರ್ದೇಶನ, ಪ್ರಮೋದ್ ಮರವಂತೆ ಸಾಹಿತ್ಯ, ಅರ್ಜುನ್ ಕಿಟ್ಟು ಸಂಕಲನ, ಕುಮಾರ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಮುಂದಿನ ಶುಕ್ರವಾರ ಪುರುಷೋತ್ತಮ
ರಾಜ್ಯಾದ್ಯಂತ ತೆರೆಕಾಣಲಿದೆ.