Wednesday, 11th December 2024

ಚಿತ್ರೀಕರಣ ಮುಗಿಸಿದ ರಾಜನಿವಾಸ

ಡಿಎಎಂ 36 ಸ್ಟುಡಿಯೋಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ರಾಜನಿವಾಸ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.

ಸುಮಾರು ೫೭ ದಿನಗಳ ಕಾಲ ಚಿಕ್ಕಮಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಜತೆಗೆ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣವಾದ ಸೆಟ್‌ವೊಂದರಲ್ಲಿ ಚಿತ್ರದ ಮುಖ್ಯ ಭಾಗವನ್ನು ಚಿತ್ರೀಕರಿಸಲಾಗಿದೆ. ಮುಖ್ಯ ಪಾತ್ರದಲ್ಲಿ ರಾಘವ್ ಕೃತಿಕಾ, ಬಾಲರಾಜ್ ವಾಡಿ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ. ಶ್ರೀನಗರ ಕಿಟ್ಟಿ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕಿಟ್ಟಿ ಪಾತ್ರವೇ ಚಿತ್ರದ ಹೈಲೆಟ್ ಆಗಿರಲಿದೆ. ರಾಜ ನಿವಾಸ ಕೌಟುಂಬಿಕ ಕಥೆಯ ಚಿತ್ರವಾಗಿದ್ದು, ಅದರ ಜತೆಗೆ ಪ್ರತಿ ಕ್ಷಣವೂ ಕುತೂಹಲ ಕೆರಳಿಸುತ್ತಾ ಚಿತ್ರ ಸಾಗುತ್ತದೆ ಎನ್ನುತ್ತಾರೆ ನಿರ್ದೇಶಕರು.

ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲೂ ರಾಜನಿವಾಸ ತೆರೆಗೆ ಬರಲಿದೆ. ಮಿಥುನ್ ಸುವರ್ಣ ನಿರ್ದೇಶನದಲ್ಲಿ ಚಿತ್ರ ಮೂಡಿಬಂದಿದ್ದು, ಪಿ.ಆಂಜನಪ್ಪ ಹಾಗೂ ಲೋಕೇಶ್ ಎನ್.ಗೌಡ ಜಂಟಿಯಾಗಿ ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡಿ ದ್ದಾರೆ. ದಸರಾ ಹಬ್ಬದಂದು ರಾಜನಿವಾಸ ಚಿತ್ರದ ಶೀರ್ಷಿಕೆ ಪೋಸ್ಟರ್ ಬಿಡುಗಡೆಯಾಗಲಿದೆ.