Friday, 13th December 2024

ಮಲಯಾಳಂಗೆ ಎಂಟ್ರಿ ಕೊಟ್ಟ ರಾಗಿಣಿ

ಡ್ರಗ್ಸ್ ಜಾಲದಲ್ಲಿ ಸಿಲುಕಿ ಜೈಲು ಸೇರಿದ್ದ ತುಪ್ಪದ ಬೆಡಗಿ ರಾಗಿಣಿ, ಮತ್ತೆ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಖ್ಯಾತಿ ಪಡೆದಿದ್ದ ರಾಗಿಣಿ ಈಗ ಮಾಲಿ ವುಡ್‌ಗೂ ಎಂಟ್ರಿಕೊಟ್ಟಿದ್ದಾರೆ.

ಮಲಯಾಳಂ ಹಾಗೂ ಕನ್ನಡದಲ್ಲಿ ಸಿದ್ಧವಾಗಲಿರುವ ಹೊಸ ಚಿತ್ರದಲ್ಲಿ ರಾಗಿಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿ ಕೊಳ್ಳುತ್ತಿದ್ದಾರೆ. ಈ ಚಿತ್ರ ಮಲಯಾಳಂನಲ್ಲಿ ಶೈಲಾ ಎಂಬ ಶೀರ್ಷಿಕೆಯಲ್ಲಿ ಮೂಡಿಬರಲಿದೆ. ಕನ್ನಡದಲ್ಲಿ ಇನ್ನು ಟೈಟಲ್ ಅಂತಿಮಗೊಂಡಿಲ್ಲ. ಸಸ್ಪೆನ್ಸ್, ಥ್ರಿಲ್ಲರ್ ಕಥೆಯ ಈ ಚಿತ್ರದಲ್ಲಿ ರಾಗಿಣಿ ವಿಧವೆಯ ಪಾತ್ರದಲ್ಲಿ ಬಣ್ಣಹಚ್ಚುತ್ತಿದ್ದಾರೆ.

ಕೆಲವೊಂದು ಸನ್ನಿವೇಶಗಳಲ್ಲಿ ಬೋಲ್ಡ್ ಆಗಿಯೂ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಕಥೆ ಮೆಚ್ಚುಗೆಯಾಯಿತು. ಹಾಗಾಗಿ ಈ ಚಿತ್ರದಲ್ಲಿ ನಟಿಸಲು ಸಮ್ಮತಿಸಿದೆ ಎನ್ನುತ್ತಾರೆ ತುಪ್ಪದ ಬೆಡಗಿ. ಈಗಾಗಲೇ ಚಿತ್ರೀಕರಣ ಆರಂಭ ವಾಗಿದ್ದು, ಕೇರಳದ ಟೀ ಎಸ್ಟೆಟ್‌ವೊಂದರಲ್ಲಿ ಶೂಟಿಂಗ್ ಸಾಗಿದೆ. ಬಾಲು ನಾರಾಯಣ್ ನಿರ್ದೇಶನ ದಲ್ಲಿ ಈ ಚಿತ್ರ ಮೂಡಿಬರುತ್ತಿದೆ. ದೃಶ್ಯಂ ಖ್ಯಾತಿಯ ಅನಿಲ್ ಜಾನ್ಸನ್ ಅವರ ಸಂಗೀತ ಚಿತ್ರಕ್ಕಿದೆ.