Friday, 13th December 2024

ಸ್ಯಾಂಡಲ್‌ವುಡ್‌ ದಿ ಬೆಸ್ಟ್: ಕನ್ನಡ ನಟರೇ ಮೋಸ್ಟ್ ಫೆವರಿಟ್‌

ಪ್ರಶಾಂತ್‌ ಟಿ.ಆರ್‌

ಹಿಂದೆ ಕನ್ನಡ ಚಿತ್ರಗಳ ಮಾರುಕಟ್ಟೆ ವ್ಯಾಪ್ತಿ ಸೀಮಿತವಾಗಿತ್ತು. ಕರ್ನಾಟಕದಲ್ಲಿಯೇ ಕನ್ನಡ ಚಿತ್ರಗಳಿಗೆ ಪೈಪೋಟಿ ಇರುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಕನ್ನಡ ಚಿತ್ರಗಳು ಬೇರೆ ಭಾಷೆಯ ಚಿತ್ರಗಳಿಗೂ ಪೈಪೋಟಿ ನೀಡುತ್ತಿವೆ. ವಿಶ್ವದಾದ್ಯಂತ ವ್ಯಾಪಸಿದ್ದು, ಎಲ್ಲೆಡೆಯೂ ಬೇಡಿಕೆ ಪಡೆದಿವೆ. ಹಾಗಾಗಿ ಈಗ ಸ್ಯಾಂಡಲ್‌ವುಡ್ ಬೆಸ್ಟ್, ಜತೆಗೆ ಕನ್ನಡ ನಟರೇ ಮೋಸ್ಟ್ ಫೇವರಿಟ್ ಆಗಿದ್ದಾರೆ.

ಅದಕ್ಕಾಗಿಯೇ ಗಂಧದಗುಡಿಗೆ ಬರಬೇಕು, ಇಲ್ಲಿನ ಸಿನಿಮಾಗಳಲ್ಲಿ ನಟಿಸಬೇಕು ಎಂಬ ಆಸೆ ಪರಭಾಷೆಯ ಸ್ಟಾರ್ ನಟರಲ್ಲಿಯೂ ಇದೆ. ಸಂಜಯ್ ದತ್, ರವೀನಾ ಟಂಡನ್, ಮೋಹನ್ ಲಾಲ್, ಶರತ್ ಕುಮಾರ್, ಪ್ರಭು ಹೀಗೆ ಹಲವು ಸ್ಟಾರ್ ನಟರು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರೇಕ್ಷಕರ ಮನಗೆದ್ದಿದ್ದಾರೆ. ನಿರ್ಮಾಪಕರಿಗೂ ಹುಮ್ಮಸ್ಸು ಬರೀ ನಟರಷ್ಟೇ ಅಲ್ಲ, ನಿರ್ಮಾಪಕರೂ ಕೂಡ ಕನ್ನಡ ಚಿತ್ರಗಳತ್ತ ಮುಖ ಮಾಡುತ್ತಿದ್ದಾರೆ.

ತಮಿಳು, ತೆಲುಗಿನ ಖ್ಯಾತ ನಿರ್ಮಾಪಕರು ಕನ್ನಡ ಚಿತ್ರಗಳ ನಿರ್ಮಾಣಕ್ಕೆ ಬಂಡವಾಳ ಹೂಡು ತ್ತಿದ್ದಾರೆ. ಶಿವಣ್ಣ ಅಭಿನಯದ ನೀ ಸಿಗೊವರೆಗೂ ಚಿತ್ರಕ್ಕೆ ತೆಲುಗಿನ ನಿರ್ಮಾಪಕರು ಬಂಡವಾಳ ಹೂಡಿದ್ದಾರೆ. ಮಾತ್ರವಲ್ಲ ಮತ್ತಷ್ಟು ಚಿತ್ರಗಳು ಇನ್ನೇನು ಸೆಟ್ಟೇರಲಿವೆ. ಇಲ್ಲಿನ ನಟರ ಮೇಲೆ ಅವರಿಗೆ ವಿಶ್ವಾಸವೂ ಇದೆ. ಪ್ರೇಕ್ಷಕರು ಕನ್ನಡ ಚಿತ್ರಗಳನ್ನು ಗೆಲ್ಲಿಸುತ್ತಾರೆ ಎಂಬ ನಿರೀಕ್ಷೆಯೇ ಇದಕ್ಕೆ ಕಾರಣವಾಗಿದೆ.

ಹಾಗಾಗಿಯೇ ನಿರ್ಮಾಪಕರಿಗೂ ಸ್ಯಾಂಡಲ್‌ವುಡ್ ದಿ ಬೆಸ್ಟ್ ಎನಿಸಿದೆ. ಶಿವರಾಜ್ ಕುಮಾರ್, ಸುದೀಪ್, ಉಪೇಂದ್ರ, ಯಶ್, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ರಾಣ ಹೀಗೆ ಹಲವು ನಟರು ಸ್ಟಾರ್ ಡೈರೆಕ್ಟರ್‌ಗಳ ನಿರೀಕ್ಷೆ ಹೆಚ್ಚಿಸಿದ್ದಾರೆ. ವಲಸೆ ಬಂದ ನಿರ್ದೇಶಕರು ಇದು ಪ್ಯಾನ್ ಇಂಡಿಯಾ ಜಮಾನ, ಬಹುತೇಕ ಕನ್ನಡ ಸಿನಿಮಾಗಳು ಪರಭಾಷೆಯಲ್ಲಿಯೂ ಅಬ್ಬರಿಸುತ್ತಿವೆ. ಅದರಲ್ಲಿ ಕನ್ನಡ ಚಿತ್ರಗಳೇನು ಕಮ್ಮಿ ಇಲ್ಲ, ಬಾಲಿವುಡ್‌ನಲ್ಲೂ ಉತ್ತಮ ಕಲೆಕ್ಷನ್ ಮಾಡಿ ಧೂಳ್ ಎಬ್ಬಿಸುತ್ತಿವೆ. ಇದನ್ನು ಅರಿತ ಪರಭಾಷೆಯ ಖ್ಯಾತ ನಿರ್ದೇಶಕರೂ ಕೂಡ ಕನ್ನಡ ಚಿತ್ರಗಳತ್ತ ಆಸ್ಥೆ ತಾಳಿದ್ದಾರೆ. ಕನ್ನಡ ನಟರ ಚಿತ್ರಗಳಿಗೆ ನಿರ್ದೇಶನ ಮಾಡಲು ಸಿದ್ಧವಾಗಿದ್ದಾರೆ.

ಈಗಾಗಲೇ ಕೆಲವು ಸಿನಿಮಾಗಳು ಸೆಟ್ಟೇರಿವೆ. ಇತ್ತೀಚೆಗಷ್ಟೇ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ರಿಯಲ್ ಸ್ಟಾರ್ ಉಪೇಂದ್ರ ಅವರ ಚಿತ್ರಕ್ಕೆ ನಿರ್ದೇಶನ ಮಾಡಲು ಸಿದ್ಧತೆ ನಡೆಸಿದ್ದಾರೆ. ಚಿತ್ರದ ಟೈಟಲ್ ಕೂಡ ರಿಲೀಸ್ ಆಗಿದೆ. ವಿಶೇಷ ಎಂದರೆ ಕಿಚ್ಚ ಸುದೀಪ್ ಅವರೇ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದ್ದಾರೆ.

ಕನ್ನಡ ನಿರ್ದೇಶಕರಿಗೆ ಬಲು ಬೇಡಿಕೆ ಪರಭಾಷಾ ನಿರ್ದೇಶಕರು ಕನ್ನಡ ಚಿತ್ರಗಳತ್ತ ಧಾವಿಸಿದರೆ, ಪರಭಾಷೆಯ ಸ್ಟಾರ್ ನಟರಿಗೆ ಕನ್ನಡ ನಿರ್ದೇಶಕರು ಆಕ್ಷನ್ ಕಟ್ ಹೇಳಬೇಕು ಎಂಬ ಮಹಾದಾಸೆ ಇದೆ. ಈಗಾಗಲೇ ಪ್ರಶಾಂತ್ ನೀಲ್ ಪ್ರಭಾಸ್ ನಟಿಸುತ್ತಿರುವ ಸಲಾರ್ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರ ಮುಗಿದ ಬಳಿಕ ಜ್ಯೂ.ಎನ್‌ಟಿಆರ್ ಅವರ ಚಿತ್ರಕ್ಕೂ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಲಿದ್ದಾರೆ. ಇನ್ನು ಮಹೇಶ್ ಬಾಬು ಕೂಡ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾದಲ್ಲಿ ನಟಿಸಬೇಕು ಎಂಬ ಮನದಾಸೆ ವ್ಯಕ್ತಪಡಿಸಿದ್ದಾರೆ.

ಭರವಸೆ ಮೂಡಿಸಿದ ಹೊಂಬಾಳೆ
ಕನ್ನಡದ ಪ್ರಸಿದ್ಧ ನಿರ್ಮಾಣ ಸಂಸ್ಥೆ ಹೊಂಬಾಳೆ ಪ್ರೊಡಕ್ಷನ್ಸ್ ಸ್ಯಾಂಡಲ್‌ವುಡ್‌ನಲ್ಲಿ ಅದ್ಧೂರಿ ಬಜೆಟ್‌ನ ಹಿಟ್ ಸಿನಿಮಾಗಳನ್ನು ನಿರ್ಮಿಸಿದೆ. ಸಪ್ತ ಸಾಗರದಾಚೆಗೂ ಹೊಂಬಾಳೆಯ ಹೆಸರು ರಾರಾಜಿಸುತ್ತಿದೆ. ಕನ್ನಡದ ಜತೆಗೆ ಪರಭಾಷೆಗೂ ಹೊಂಬಾಳೆ ಸಂಸ್ಥಾಪಕ ವಿಜಯ್ ಕಿರಗಂದೂರು ಬಂಡವಾಳ ಹೂಡಿದ್ದಾರೆ. ಸದ್ಯ ಹೊಂಬಾಳೆ ಪ್ರೊಡಕ್ಷನ್ ಬ್ಯಾನರ್‌ಲ್ಲಿ ಸಲಾರ್ ಸಿನಿಮಾ ಮೂಡಿಬರುತ್ತಿದೆ.

ಇನ್ನು ನಿರ್ದೇಶರಿ ಸುಧಾಕೊಂಗರ ಕೂಡ ಹೊಂಬಾಳೆ ಪ್ರೊಡಕ್ಷನ್‌ನಲ್ಲಿ  ನಿರ್ಮಾಣವಾಗ ಲಿರುವ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಸಿನಿಮಾವಾಗಲಿದೆ ಎಂಬುದು ಖಚಿತವಾಗಿದೆ.

ಚಾರಿತ್ರಿಕ ದಾಖಲೆ ಬರೆದ ಕೆಜಿಎಫ್
ಕೆಜಿಎಫ್ ಚಾಪ್ಟರ್ ೨ ಹೊಸ ಹೊಸ ದಾಖಲೆಯನ್ನು ಬರೆದು ಮುನ್ನುಗ್ಗುತ್ತಿದೆ. ಈಗ ಈ ಸಾಲಿಗೆ ಮತ್ತೊಂದು ದಾಖಲೆ
ಸೇರ್ಪಡೆಯಾಗಿದೆ. ಕೆಜಿಎ- ಸಾವಿರ ಕೋಟಿ ಕ್ಲಬ್ ಸೇರಿದೆ. ಸಾವಿರ ಕೊಟಿ ಕಲೆಕ್ಷನ್ ಮಾಡಿದ ಮೊದಲ ಕನ್ನಡ ಸಿನಿಮಾ ಇದಾಗಿದ್ದು, ಸ್ಯಾಂಡಲ್ ವುಡ್‌ಗೆ ಹೆಮ್ಮೆ ತರಿಸಿದೆ. ದೇಶ, ವಿದೇಶಗಳಲ್ಲಿಯೂ ಅದ್ಧೂರಿಯಾಗಿ ತೆರೆಕಂಡ ಕೆಜಿಎಫ್ ಎಲ್ಲೆಡೆಯೂ ಅದ್ಭುತ ಪ್ರದರ್ಶನ ಕಾಣುತ್ತಿದೆ. ಬಾಲಿವುಡ್‌ನಲ್ಲಿಯೂ ಮುನ್ನೂರ ಐವತ್ತು ಕೋಟಿಗೂ ಹೆಚ್ಚು ಮೊತ್ತವನ್ನು ಬಾಚಿಕೊಂಡಿದೆ.